ಚಿಮಣಿ ಬುಡ್ಡಿ!

ಚಿಮಣಿ ಬುಡ್ಡಿ!


ವಿದ್ಯುಚ್ಚಕ್ತಿ ಇಲ್ಲದ ಕಾಲದಲ್ಲಿ ಬೆಳಕಿಗಾಗಿ ನಮ್ಮ ಹಿಂದಿನವರು ಚಿಮಣಿ ಬುಡ್ಡಿ ಎಂದು ಕರೆಯುವ ಬೆಳಕು ಬೀರುವ ಸಾಧನವನ್ನು ಕಂಡುಕೊಂಡಿದ್ದರು. ರಾತ್ರಿಯ ಸಮಯದಲ್ಲಿ ಅಡುಗೆ ಮಾಡಲೂ ಓದಲೂ ಮನೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲೂ ಇತರ ಗೃಹಕೃತ್ಯದ ಕೆಲಸಗಳಿಗೂ ಈ ಚಿಮಣಿ ಬುರುಡೆಯೇ ಮುಖ್ಯ ಬೆಳಕಿನ ಮೂಲವಾಗಿತ್ತು. ಈ ಚಿಮಣಿ ದೀಪಗಳಲ್ಲೂ ಹಲವಾರು ವೈವಿಧ್ಯತೆ, ವೈಶಿಷ್ಟ್ಯತೆಗಳಿವೆ. ಚಿತ್ರದಲ್ಲಿ ಕಾಣುವ ಒಂದು ಚಿಮಣಿ ಬುರುಡೆ ಸಂಪೂರ್ಣ ಹಿತ್ತಾಳೆಯಿಂದ ತಯಾರಾಗಿದ್ದಾರೆ, ಮತ್ತೊಂದು ತಾಮ್ರದಿಂದ ತಯಾರಾಗಿದೆ. ಇದನ್ನು ಇರಿಸಲು ವಿಶೇಷ ಆಕೃತಿಯ ಮರದ ‘ದೀಪದ ಗುಡ್ಡು’ ಇರುವುದನ್ನು ಕಾಣಬಹುದು. ತಮ್ಮ ಅನುಕೂಲತೆಗೆ ತಕ್ಕಂತೆ ಗೃಹೋಪಯೋಗಿ ವಸ್ತುಗಳನ್ನು ವಿನ್ಯಾಸಗೊಳಿಸಿ ಬಳಸುತ್ತಿದ್ದ ನಮ್ಮ ಪೂರ್ವಜರ ಚಾತುರ್ಯ ಮೆಚ್ಚಲೇಬೇಕು. ಈಗ ಯುಪಿಎಸ್‌, ಸೋಲಾರ್‌, ಪವರ್‌ ಬ್ಯಾಂಕ್‌, ಎಮರ್ಜನ್ಸಿ ಲ್ಯಾಂಪ್‌ ಗಳ ಆವಿಷ್ಕಾರದ ನಂತರ ಚಿಮಣಿ ದೀಪಗಳು ನೇಪಥ್ಯಕ್ಕೆ ಸರಿದವು.

ಹೊಸ್ಮನೆ ಮುತ್ತು

Leave a Reply