ಸತ್ಯಾಗ್ರಹ
ಏನಿದು ಉಸಿರು ಕಟ್ಟಿರುವ ದೇಶ
ಎಲ್ಲೆಲ್ಲೂ ಬರಿಯ ಅಕ್ರೋಶ
ಸುತ್ತಿ ಸುಳಿಯುತ್ತಿದೆ ಕರ್ಮಕಾಂಡ
ಹತ್ತಿರವೇ ಇದೆ ಬ್ರಷ್ಠಾಚಾರದ ಬ್ರಹ್ಮಾಂಡ.
ತುಂಬುತ್ತಿದೆ ಪಾಪದ ಕೊಡ
ಜಾಗೃತವಾಗುತ್ತಿದೆ ಜನ ನೋಡ
ಅಳಿಸಲು ಬೇಕಿತ್ತು ಒಬ್ಬ ನೇತಾರ
ಅದಕ್ಕೆಂದೇ ಆದರು – ಸರದಾರ
ಹೊರಬಿತ್ತು ಮುಗಿಬಿದ್ದು ಕೋಟಿಜನ
ನಿವಾರಿಸಲು ಇಂಥ ದುಷ್ಠತನ
ಬೇಕಿದೆಯೋ ಒಂದು ಜನಾಂದೋಲನ
ತರಲು ದೇಶದಲ್ಲಿ ಸಂಪೂರ್ಣ ಸಮತೋಲನ
ಹಿಡಿದೆವು ಅಹಿಂಸಾ ಮಾರ್ಗ
ಇಲ್ಲಿ ಕಾಣ ಸಿಗುವುದೇ ನಿಜವಾದ ಸ್ವರ್ಗ
ತೊಡಗಿಸಲು ಬಿಕ್ಕಟ್ಟು
ಮೂಡಿತು ಎಲ್ಲೆಲ್ಲೂ ಒಗ್ಗಟ್ಟು
ಕಳೆಯಿತು ಬ್ರಷ್ಠ ಎಂಬ ಕತ್ತಲೆಯ ಮೌನ
ಅಣ್ಣಾ ಹೂಡಲು ೧೨ ದಿನಗಳ ನಿರಶನ
ಕ್ರಿಯಾಶೀಲವಾಯಿತು ಯುವಜನ
ಅರ್ಪಿಸಿತು ಮಾನವ ಕೋಟಿ ತಮ್ಮ ನಮನ
ಬಯಲಿಗೆ ಬಂತು ರಾಜಕಾರಣಿಗಳ ಬಣ್ಣ
ಕರೆದು ಹಚ್ಚಿದರು ಲೋಕಾಯುಕ್ತರು ಇವರಿಗೆ ಸುಣ್ಣ
ಮುಸು ಮುಸು ನಕ್ಕಿತು ಜನ ಕಂಡು ಇವರಿಗೆ ದುಮ್ಮಾನ
ಆದರೂ ! ಇನ್ನೂ ಇವರ ಬಗ್ಗೆ ಅಡಿಗಿದೆ ನಿಗೂಢ ಅನುಮಾನ
ಸರಿಸಲು ಸಿದ್ದರು ನಾವು ಈ ಬಣ್ಣದ ತೆರೆಗಳನ್ನು
ಸುರಿಸಬೇಕಾಗಿದೆ ಅದಕ್ಕಾಗಿ ನಮ್ಮ ಬೆವರು ರಕ್ತಗಳನ್ನು
ಕನಸಿತ್ತು ತಾತರಿಗೆ ಕಟ್ಟಲು ರಾಮರಾಜ್ಯ
ಸ್ಥಾಪಿಸೋಣ ನಾವಿನ್ನು ಪ್ರಜೆಗಳ ಪ್ರಜಾರಾಜ್ಯ.
ಕಿತ್ತೆಸೆಯೋಣ ಬ್ರಷ್ಠಾಚಾರದ ಕಸದ ಬೇರನು
ಹಚ್ಚೋಣ ಇಂದೇ ಪ್ರಜ್ವಲಿಸುವ ಹಣತೆಯನು
ಮೂಡಲಿ ಮಾನವೀಯತೆ ಎಲ್ಲರಲಿ ಇಂದು
ತಿಳಿಯಿರಿ ಸತ್ಯಕ್ಕಿದೆ ಜಯ ಎಂದೆಂದು.
– ಉಮಾ ಭಾತಖಂಡೆ