ಸಾಮಾಜಿಕ ಜಾಲತಾಣಗಳು
— ರಘೋತ್ತಮ ಕೊಪ್ಪರ
ಇಂದು ಯಾರ ಬಳಿ ನೋಡಿದರೂ ಮೊಬೈಲ್ ವಿಥ್ ಇಂಟರ್ ನೆಟ್ ಕನೆಕ್ಷನ್. ಅದರಲ್ಲೂ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿರುವುದು ಒಂದು ಕಡ್ಡಾಯ ಮತ್ತು ಹೆಮ್ಮೆ ಎಂಬಂತಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿರುವುದು ಒಂದು ಕಡೆ ಹೆಮ್ಮೆಯ ವಿಷಯವಾದರೆ ಇನ್ನೊಂದೆಡೆ ನಾವು ಎತ್ತಲೋ ಸಾಗುತ್ತಿದ್ದೇವೆ ಮುಂದೆ ಏನಾಗುವುದೋ ಎಂಬ ಆತಂಕ. ಸಾಮಾಜಿಕ ಜಾಲತಾಣ ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಶೇರ್ ಮಾಡುವುದು ಅಪಾಯಕರ ಎಂದು ಗೊತ್ತಿದ್ದು ಹಲವು ಜನರು ಅದನ್ನೇ ಮಾಡುತ್ತಿದ್ದೇವೆ. ಫೇಸ್ ಬುಕ್ ನಲ್ಲಿ ಪರಿಚಯವಾಗಿ ಒಬ್ಬರನ್ನೊಬ್ಬರು ನಂಬಿ ಮದುವೆ ಯಾಗಿ ಮೋಸ ಹೋದವರ ಸಂಖ್ಯೆ ಕಡಿಮೆಯೇನಿಲ್ಲ.
ಎಲ್ಲರಿಗೂ ಗೊತ್ತು ಇದು ಅಪಾಯಕರ ಅಂತ, ಆದರೂ ಅದನ್ನೆ ಮಾಡುತ್ತೇವೆ. ಫೇಕ್ ಅಕೌಂಟ್ ಗಳು ಜಾಸ್ತಿ ಯಾಗಿದ್ದರಿಂದ ಯಾರನ್ನು ನಂಬಬಾರದು. ಅಲ್ಲಿ ಖಾಸಗಿ ವಿಷಯಗಳನ್ನು ಹಂಚಬಾರದು, ಅಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಬಾರದು, ಅಶ್ಲೀಲ ಸಂಗತಿಗಳನ್ನು ಶೇರ್ ಮಾಡಬಾರದು ಎಂದು ಗೊತ್ತಿದ್ದರೂ ನಾವು ಅದನ್ನೇ ಮಾಡುತ್ತೇವೆ, ಇವತ್ತಿಗೂ ಹಲವರು ಈ ಬಗ್ಗೆ ಅದರಲ್ಲೂ ಸುಶಿಕ್ಷಿತರು ಮೋಸ ಹೋಗುತ್ತಿದ್ದಾರೆ ….. ಎಲ್ಲವೂ ಗೊತ್ತಿದ್ದವರೆ ಹಿಂಗೆ ಮಾಡಿದರೆ ಹೇಗೆ …….. ಹಿಂಗ್ಯಾಕೆ ನಾವೆಲ್ಲ….!
1 Comment
ಗೊತ್ತಿದ್ದರೂ ತಪ್ಪು ಮಾಡುವದು ನಮ್ಮೆಲ್ಲರ ಅಭ್ಯಾಸ 🙂