ವಿವೇಕವೆಂಬ ಸಿಡಿಲ ಮರಿ.
ಕನಸದು ಹೊತ್ತು ತಂದ ಭುವಿಗೆ ಭವ್ಯ ಭಾರತದ
ವಿಶ್ವವಿರಾಟನಿವನು ಲೋಕ ಕಲ್ಯಾಣ ಮೈದಳೆದ
ಸಕಾರಾತ್ಮಕ ಚಿಂತನೆಗಳ ತೇಜಸ್ವಿ ಚಿತ್ತ
ಧನ್ಯ ಭುವನೇಶ್ವರಿದೇವಿಯ ನಿಜ ಪುತ್ರ
ತೋರ್ಪಡಿಸಿದ ಜಗಕೆ ಸರ್ವದೇಶದಲಿ ಗುರುವು ಎನ್ನ ರಾಷ್ಟ್ರ
ಸಾರಿದ ಜಗಕೆ ಭಾರತದ ಭವ್ಯ ಸಂಸೃತಿಯ ಪರಕಾಷ್ಟ
ವಿಶ್ವ ಪ್ರೇಮವ ವ್ಯಾಪಿಸಿದ ಘನ ತೇಜ ಸಂತ
ಭಾವಸೇತುವ ಬೆಸೆದ ಪಾಶ್ಚಾತ್ಯರೊಳು ನಿರತ
ಹೊಸ ಲೋಕದ ಹೊಸದೃಷ್ಟಿಯ ನೇತಾರ
ನವಯುಗದ ಕಲ್ಪವೃಕ್ಷವು ಪರಶುಮಣಿಯ ಹೋಲುಗಾರ
ತರುಣರೊಳು ಕ್ಷಾತ್ರತೇಜಸ್ಸನ್ನು ಬಡಿದೆಬ್ಬಿಸಿದ ಸಿಡಿಲಮರಿ
ರಥದಲಿ ಕುಳ್ಳಿರಿದು ಮೆರವಣಿಗೆ ಬಂದ ಸಂತಸಿರಿ
ನುಡಿಯಲಿ ಮುತ್ತುಗಳು, ನುಡಿದಂತೆ ನಡೆಯುವವ
ಯುವ ಜನತೆಯ ಕಟಿದು ಭವ್ಯ ಶಿಲ್ಪವಾಗಿಸಿಹ ಶಿಲ್ಪಗಾರ
ದುಷ್ಟಸÀಂಹಾರ ಶಿಷ್ಠ ರಕ್ಷಕನಾಗಿ ಬಂದ ಜಗದೋದ್ಧಾರ
ಧ್ಯಾನಿ, ಸಂತ, ಯೋಗಿ ಅವರೇ ನಮ್ಮ ವಿವೇಕಾನಂದ.
-ಉಮಾ ಭಾತಖಂಡೆ.
1 Comment
Nice but write more about him. It’s my request. Please write some thing motivational Kavana about him. Your writing is nice but we expect more.