ರದ್ದಿಯಲ್ಲಿ ಸಿಕ್ಕ ಪತ್ರಗಳು

ರದ್ದಿಯಲ್ಲಿ ಸಿಕ್ಕ ಪತ್ರಗಳು

ಪತ್ರ-1
ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ದರ್ಜೆ ಗುಮಾಸ್ತ.
ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ,
ಗುಡಿಕೋಟೆ -ಇವರಿ0ದ
ದಿ. 11-11-2001
ಮಾನ್ಯ ಮುಖ್ಯ (ಅತೀ ಮುಖ್ಯ) ಅಭಿಯ0ತ್ರರು
ಪಾಳು ಕಟ್ಟಡ ಮತ್ತು ಹಾಳು ಗು0ಡಿ ರಸ್ತೆ ವಲಯ ಕಚೇರಿ,
ಬೆ0ಗಳೂರು ಇವರಿಗೆ,

ಮಾನ್ಯರೆ,
ವಿಷಯ : ನಾಟಕ ಮಾಡಲು ಪರವಾನಿಗೆ ನೀಡುವ ಬಗ್ಗೆ ಮನವಿ:

ಈ ಮೂಲಕ ತಮ್ಮಲ್ಲಿ ವಿನ0ತಿಸುವುದೇನೆ0ದರೆ, ಸ್ವಾಮಿ ನಾವು ತಲತಲಾ0ತರದಿ0ದ ನಾಟಕ -ಗೀಟಕ ಅ0ತ ಇದ್ದೋರು, ಸಾತ0ತ್ರ್ಯ ಬ0ದು ಸರ್ಕಾರಿ ಸೇವೆ ಸೇರಬೇಕಾಯಿತು. ಈಗ ನಮ್ಮ ಮನವಿ ಏನೆ0ದರೆ, ನಾಟಕ ಅಭಿವ್ಯಕ್ತಿ ಸ್ವಾತ0ತ್ರ್ಯಕ್ಕೆ ಒಳ್ಳೆ ಮಾದ್ಯಮ ಎ0ದು ಸರ್ಕಾರ ಭ್ರಮಿಸಿ ನೌಕರರು ನಾಟಕ ಮಾಡುವುದನ್ನು ನಿರ್ಭಧಿಸಿ ಆದೇಶ ನೀಡಿದೆ. ಕಳೆದ ಅನೇಕ ವರ್ಷದಿ0ದ ನಮ್ಮೂರ ಜಾತ್ರೆಯಲ್ಲಿ ನಾಟಕವಾಡುತ್ತಾ ಪ್ರಜಾ ಜನರ ಸೇವೆಯನ್ನು ನಾವು ಮಾಡಿದ್ದೇವೆ. ಬಹುಸ0ಖ್ಯಾತರು ಇದು ಪ್ರಜಾ ಪೀಡನ ಎ0ದರೂ ನಮ್ಮ ಸೇವೆಯಲ್ಲಿ ಯಾವುದೇ ಲೋಪವಾಗದ0ತೆ ವ್ರತ ಎ0ದು ಭಾವಿಸಿ ಮಾಡಿದ್ದೇವೆ. ನಾವು ಯಾವುದೇ ನಾಟಕದಲ್ಲೂ ಸರ್ಕಾರದ ಮಾನ ಹೋಗುವ0ತ ಪ್ರಸ0ಗವನ್ನು ತ0ದಿಲ್ಲ. ಬೇಕಿದ್ದರೆ ನಮ್ಮ ಶಾಸಕರನ್ನೇ ಕೇಳಿ. ತಾವು ದಯಮಾಡಿ ನಮ್ಮ ನಾಟಕ ಮಾಡುವ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಬೇಕು. ಹಾಗೂ ಮು0ದಿನ ಅಮಾಸೆ ಇರೋ ನಾಟಕಕ್ಕೆ ತಾವೇ ಚೀಫ್ ಗೆಷ್ಟಾಗಿ ಬರಬೇಕು ಅ0ತ ಬರಕೊ0ಡ ಮನವಿ, ಅಷ್ಟೇಯಾ.

ತಮ್ಮ ವಿಧೇಯ,

ಸಹಿ/-ನಾಟಕ ನುಚ್ಚೇಶ್ವರ

ಪತ್ರ-2

ದಿ. 20-11-2001
ಮಾನ್ಯ ಅತೀ ಮುಖ್ಯ ಅಭಿಯ0ತ್ರರು,
ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಲಯ ಕಚೇರಿ,
ಬೆ0ಗಳೂರು ಇವರಿ0ದ,

ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ಗುಮಾಸ್ತ
ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ
ಗುಡಿ ಕೋಟೆ -ಇವರಿಗೆ,

ವಿಷಯ : ನಾಟಕ ಮಾಡಲು ಪರವಾನಿಗೆ ನೀಡುವ ಬಗ್ಗೆ ಮಾಹಿತಿ

ಸರ್ಕಾರಿ ಸೇವೆಯಲ್ಲಿ ಎಲ್ಲರೂ ನಾಟಕ ಮಾಡುವದು ಸರ್ವೇ ಸಾಮಾನ್ಯ. ಕಚೇರಿ ಹೊರಗೂ ತಾವು ನಾಟಕ ಮಾಡಲು ಪರವಾನಿಗೆ ಕೋರಿದ್ದು ಬಲೇ ವಿಚಿತ್ರವೆನ್ನಿಸುತ್ತದೆ. ಪತ್ರದಲ್ಲಿ ಸಾಮಾಜಿಕ, ಪೌರಾಣಿಕ, ನಾಟಕ ಮಾಡುವುದಾಗಿ ತಿಳಿಸಿದ್ದೀರಿ. ಈ ನಾಟಕ ಯಾರು ಬರೆದಿದ್ದಾರೆ? ನಾಟಕದಲ್ಲಿ ನಿಮ್ಮ ಪಾತ್ರವೇನು? ಇದರಿ0ದ ಸರ್ಕಾರದ ಬೊಕ್ಕಸಕ್ಕೆ ದಕ್ಕುವ ಲಾಭ ಎಷ್ಟು? ಎ0ಬ ವಿವರಗಳನ್ನು ಕಾಣಿಸಿಲ್ಲ. ಹೀಗೆ ಪೂರ್ತಿ ವಿವರ ಕೊಡದೇ ಪರವಾನಿಗೆ ಕೋರಿ ಸರ್ಕಾರಕ್ಕೆ ಪತ್ರ ಬರೆದ ತಮ್ಮ ವಿರುದ್ದ ಶಿಸ್ತು ಕ್ರಮ ಸೇ.ಸಂ. 601 ರ ಪ್ರಕಾರ ಏಕೆ ಕ್ರಮ ಕೈಗೊಳ್ಳಬಾರದು ವಿವರಿಸಿ. ನಾಟಕ ಮಾಡಲು ತಮಗೆ ಪರವಾನಿಗೆ ದಕ್ಕದು. ಆದರೂ ತಾವು ನಮ್ಮನ್ನು ನಾಟಕದಲ್ಲಿ ಸನ್ಮಾನಿಸುವ ಉದ್ದೇಶದಿ0ದ ನಾಟಕ ಆಡುತ್ತಿದ್ದೀರಿ ಎ0ದು ಭಾವಿಸಿ ಈ ಕುರಿತು ಪರಿಶೀಲಿಸಲಾಗುವುದು ಎ0ದು ತಿಳಿಸಬಯಸುತ್ತೇವೆ. ನಿಮ್ಮ ನಾಟಕದ ಸ್ಕ್ರಿಪ್ಟ್ ಕಳಿಸಿದಲ್ಲಿ ಈ ಕುರಿತು ಕ್ರಮ ತೆಗೆದುಕೊಳ್ಳಬಹುದಾಗಿದೆ.

ತಮ್ಮ ವಿಶ್ವಾಸಿ,
ಸಹಿ/- ಅತೀ ಮುಖ್ಯ ಅಭಿಯ0ತರು

ಪ್ರತಿ : ನಾಟಕ ನುಚ್ಚೇಶ್ವರ ಇವರ ಮೇಲಾಧಿಕಾರಿಯಾದ ತಾವು ತಮ್ಮ ಸಿಬ್ಬ0ದಿಯನ್ನು ನಾಟಕ -ಗೀಟಕಕ್ಕೆ ಅ0ತ ಬಿಟ್ಟು ಅವರು ಮೇಲಧಿಕಾರಿಗಳಿಗೆ ಅಜಿ9 -ಗಿಜಿ9 ಅ0ತ ಕೊಟ್ಟು ಉನ್ನತ ಕಚೇರಿಗಳಲ್ಲಿನ ಪ್ರಶಾ0ತ ವಾತಾವರಣಕ್ಕೆ ಭ0ಗ ತರಲು ಅವಕಾಶ ಮಾಡಿಕೊಟ್ಟಿದ್ದೀರಿ. ಈ ಬಗ್ಗೆ ತಮ್ಮ ಮೇಲೇಕೆ ಶಿಸ್ತು ಕ್ರಮ ಜರುಗಿಸಬಾರದು? ವಿವರಣೆ 10 ದಿನದಲ್ಲಿ ನೀಡುವುದು.

ಪತ್ರ -3

ನಾಟಕ ನುಚ್ಚೇಶ್ವರ ಮುಖ್ಯ ಅಭಿಯ0ತರಿಗೆ ಬರೆದ ಪತ್ರ ದಿನಾಂಕ : 11-2-2002

ಸ್ವಾಮಿ,
ನಾವು ನಾಟಕ ಮಾಡಲು ಪರವಾನಿಗೆ ಕೋರಿ ಬರೆದ ಪತ್ರಕ್ಕೆ ತಾವು ಉತ್ತರಿಸಿದ್ದಕ್ಕಾಗಿ ತಮಗೆ ಅನ0ತ ತಿ (ಚಿ) ರ ಗು (ಋ) ಣಿ ಯಾಗಿದ್ದೇನೆ. ತಮಗೆ ನಾಟಕ ನೋಡಲು ನೀಡಿದ ಆಹ್ವಾನವನ್ನು ತಾವು ಸನ್ಮಾನ ಎ0ಬುದಾಗಿ ಪರಿವರ್ತಿಸಿದ್ದು ತಮ್ಮ ಬೌದ್ಧಿಕ ಮಟ್ಟದ ಪ್ರತೀಕ. ಇರಲಿ. ಸಾಮಾಜಿಕ -ಪೌರಾಣಿಕ ನಾಟಕದ ಹೆಸರಲ್ಲ ಸ್ವಾಮಿ, ಸಾಮಾಜಿಕ ಅ0ದರೆ ಸಮಾಜದ ಆಗು- ಹೋಗುಗಳನ್ನು ತಿಳಿಸುವ, ಪೌರಾಣಿಕ ಅ0ದರೆ, ಪುರಾಣದಲ್ಲಿ ಆಗಿ ಹೋದ0ತಹ ಪ್ರಸ0ಗಗಳನ್ನು ತಿಳಿಸುವ ನಾಟಕ, ನಮ್ಮೂರ ಜಾತ್ರೆಯಲ್ಲಿ ವರ್ಷ0ಪ್ರತಿ ಒ0ದೊ0ದು ನಾಟಕ ಆಡುತ್ತೇವೆ. ತುತ್ತು ಕೊಟ್ಟಳೋ? ಮುತ್ತು ಕೊಟ್ಟೊಳೋ? ರಾಮನಾಮವೋ? ಮೂರ್ನಾಮವೋ? ಕೆಸರಲ್ಲಿ ಕೂತ ಚಕ್ರ ಅರ್ಥಾತ್ ಗುರಿ ತಪ್ಪಿದ ಬಾಣ, ರಾಮಬಾಣಕ್ಕೆ ಹೋದ ಮಾನ ಕುಡಿಗೋಲಿಗೆ ಬ0ದೀತೇ? ಎ0ದೆಲ್ಲ ಪ್ರಶ್ನಾರ್ಥಕ ಚಿನ್ಹೆಗಳಿರುವ ನಾಟಕಗಳನ್ನೆ ಬರೆಯುವ ಪ್ರಭತಿಯೊಬ್ಬರು ನಮ್ಮೂರಲ್ಲಿದ್ದಾರೆ. ಆದರೆ ಇ0ಥ ನಾಟಕಗಳಿಗೆಲ್ಲ ನಮ್ಮ ಶಾಸಕರು ಫೈನಾನ್ಸ್ ಮಾಡುವುದಿಲ್ಲ. ಪ್ರತಿ ವರ್ಷದ0ತೆ ಈ ವರ್ಷವೂ ನಮ್ಮೂರ ಜಾತ್ರೆಯಲ್ಲಿ ಬಸ್ ಕ0ಡಕ್ಟರ್ (ಸಾಮಾಜಿಕ) ,ಹಾಗೂ ಸೀತಾಪಹರಣ (ಪೌರಾಣಿಕ) ನಾಟಕಗಳನ್ನು ಮಾಡಲು ತಯಾರಿ ನಡೆಸಿದ್ದೇವೆ. ಈ ಎರಡೂ ನಾಟಕಗಳ ವಿವರಗಳನ್ನು ತಮ್ಮ ಅವಗಾಹನೆಗೆ ಲಗತ್ತಿಸಿದ್ದೇನೆ. ದಯಮಾಡಿ ಮು0ದಿನ ಅಮವಾಸ್ಯೆಗೆ ಕೆಲವೇ ದಿನಗಳು ಉಳಿದಿರುವುದರಿ0ದ ನಾಟಕ ಮಾಡಲು ಪರವಾನಿಗೆ ಕೊಡಬೇಕು. ನಾಟಕಕ್ಕೆ ಮರೀದೇ ತಾವು ಕುಟು0ಬ ಸಮೇತ ಆಗಮಿಸಿ ನಮ್ಮ ಅತಿಥ್ಯ ಸ್ವೀಕರಿಸಬೇಕು. ಈ ಸೃಜನಶೀಲ ಕಲೆಯನ್ನು ಉಳಿಸಿ ಬೆಳೆಸಲು ನೆರವಾಗಬೇಕೆ0ದು ಕೋರುವ,

ತಮ್ಮ ವಿಧೇಯ
ಸಹಿ /- ನಾಟಕ ನುಚ್ಚೇಶ್ವರ

ಪತ್ರ -4

ಮುಖ್ಯ ಅಭಿಯ0ತರು ನಾಟಕ ನುಚ್ಚೇಶ್ವರ ಇವರಿಗೆ ಬರೆದ ಪತ್ರ ದಿ. 15-2-2002

ವಿಷಯ : ನಾಟಕ ಮಾಡಲು ಪರವಾನಿಗೆ ನೀಡುವ ಬಗ್ಗೆ
ಉಲ್ಲೇಖ: ನಿಮ್ಮ ಪತ್ರ ದಿ.11-1-2002

ನೀವು ಕಳಿಸಿದ ನಾಟಕದ ಪ್ರತಿಗಳು ತಲುಪಿವೆ. ಕೂಲ0ಕಶವಾಗಿ ಪರಿಶೀಲಿಸಲಾಗಿ ಬಸ್ ಕ0ಡಕ್ಟರ್ ನಾಟಕ ಮಾಡಲು ತಮಗೆ ಪರವಾನಿಗೆ ನಿರಾಕರಿಸಿದೆ. ಬಸ್ ಮತ್ತು ಕ0ಡಕ್ಟರ್ ಎನ್ನುವ ಪದಗಳು ಸಾಕಷ್ಟು ಬಾರಿ ಸರ್ಕಾರಕ್ಕೆ ಇರುಸು ಮುರುಸು ತ0ದಿವೆ. ಇನ್ನು ಸೀತಾಪಹರಣ ನಾಟಕ ಪ್ರತಿ ನೋಡಲಾಗಿ ಕೆಲವು ಪಾತ್ರಗಳ ಕುರಿತು ಸರ್ಕಾರದ ಆಕ್ಷೇಪಗಳು ಹೀಗಿವೆ.
ಕು0ಭಕರ್ಣ : ಈ ಪಾತ್ರ ಸದಾ ನಿದ್ದೆಯಲ್ಲಿದ್ದು, ಇದು ಸಚಿವಾಲಯ ನೌಕರರ ಸ0ಘದವರ ತೀವ್ರ ಟೀಕೆಗೆ ಗುರಿಯಾಗುವ ಸ0ಭವವಿದೆ.
ಶೂರ್ಪನಖಿ : ಈ ಪಾತ್ರದ ಕಿವಿ ಮೂಗು (ಗ0ಟಲನ್ನೇಕೆ ಬಿಟ್ಟಿದ್ದಾರೊ ತಿಳಿಯದು) ಕತ್ತರಿಸುವ ಅ0ಶವಿದೆ. ಇದು ಪ್ರಾಣಿ ದಯಾ
ಸ0ಘದವರಿ0ದ ಬ0ದ್ಗೆ ಅವಕಾಶ ಮಾಡಿಕೊಡಬಹುದಾಗಿದೆ.
ಹನುಮ0ತ: ಹನುಮ ಲ0ಕೆಗೆ ಹಾರುವುದು ಹೇಗೆ? ದೂರ ಎಷ್ಟು? ಪ್ರಾತ್ಯಕ್ಷಿಕೆ ತೋರಿಸಲು ಸಾದ್ಯವಿದೆಯೇ? ಎಷ್ಟೇ ವಜನು ಇಟ್ಟರೂ
ಹಾರದ ಹಗುರ ಫೈಲುಗಳು ತಮ್ಮ ಮು0ದೆ ಕಾದಿರುವಾಗ, ಕ್ಷಣಾರ್ಧದಲ್ಲಿ ಹನುಮ ಲ0ಕೆಗೆ ಹಾರುತ್ತಾನೆ ಎ0ದು ನಾಟಕದಲ್ಲಿ ತೋರಿಸುವುದು ಸರ್ಕಾರಿ ಫೈಲುಗಳಿಗೆ ತೋರುವ ಅವಮಾನವಾಗಿದೆ. ಅಲ್ಲದೇ ಈ ಪಾತ್ರಕ್ಕೆ ಬಾಲವಿದೆ ಎ0ದು
ಕಾಣಿಸಿದ್ದೀರಿ. ಇದು ರಾಜಕೀಯ ಪಕ್ಷದವರ, ಬಾಲಬಡುಕರ, ಹಿ0ಬಾಲಕರ, ಒಟ್ಟಾರೆ ಬಾಲಬಳಗದವರ ಆಕ್ರೋಶಕ್ಕೆ
ತುತ್ತಾಗುವ ಸ0ಭವವಿದೆ.
ರಾವಣ : ಹತ್ತು ತಲೆಗಳ ಪಾತ್ರ ರಾವಣನದು. ಕೈಗಳೆಷ್ಟು? ಕಾಣಿಸಿಲ್ಲ. ಸರ್ಕಾರದ ಕೆಲಸ ಮಾಡಲು (ಬಾಚಿಕೊಳ್ಳಲು) ನಮಗೆ ಎರಡು ಕೈಗಳು
ಸಾಲುತ್ತಿಲ್ಲ. ರಾವಣ ತನ್ನ ಪ್ರಜೆಗಳಿ0ದ ಕರ ವಸೂಲಿಗೆ ಹತ್ತು ಕರಗಳನ್ನು ಬಳಸುತ್ತಿದ್ದನೇ? ಇದನ್ನು ಸರ್ಕಾರ ತಿಳಿಯಬಯಸಿದೆ.

ನಿಮ್ಮ ಪತ್ರದ ಕೊನೆಯಲ್ಲಿ ನಾಟಕ ಸೃಜನಶೀಲ ಕಲೆ ಎ0ದು ಕಾಣಿಸಿದ್ದೀರಿ. ಇದು ಎ0ತಹ ಚೀಲವಯ್ಯಾ ಇದರೊಳು ತು0ಬಿದೆ ಏನಯ್ಯಾ? ಎ0ದು ಕೇಳುತ್ತಾ ತು0ಬಿದ ಚೀಲವನ್ನು ಪರಿಶೀಲನೆಗೆ ಕಳಿಸಬೇಕಯ್ಯಾ ಎ0ದು ತಿಳಿಸಿದೆ. ಮೇಲಿನ ಸ0ಭಾಷಣೆಗಳನ್ನು ನಿಮ್ಮ ನಾಟಕಕ್ಕೆ ಬಳಸಿಕೊಳ್ಳಬಹುದು. ನಮ್ಮನ್ನು ಸನ್ಮಾನಿಸುವ ತಮ್ಮ ಉದ್ದೇಶ ಗಮನದ���್ಲಿಟ್ಟು ಸೀತಾಪಹರಣ ನಾಟಕಕ್ಕೆ ಪರವಾನಿಗೆಯನ್ನು ನೀಡಬಹುದಾಗಿದೆ. ಆದರೆ ಅದಕ್ಕೂ ಮೊದಲು ಮೇಲೆ ಕಾಣಿಸಿರುವ ಪ್ಯಾರಾಗಳಿಗೆ ಪ್ಯಾರಾ ಪ್ಯಾರಾ ಉತ್ತರ ಹಾಗೂ ತು0ಬಿದ ಚೀಲ
ಈ ಕಚೇರಿಗೆ ಬರಬೇಕು.

ತಮ್ಮ ವಿಶ್ವಾಸಿ
ಸಹಿ/- ಮುಖ್ಯ ಅಭಿಯ0ತರು

ಪ್ರಿಯ ಓದುಗ! ರದ್ದಿಯಲ್ಲಿ ಸಿಕ್ಕ ಈ ಸರ್ಕಾರಿ ಪತ್ರಗಳು ಅತೀ ಗೌಪ್ಯವಾಗಿದ್ದು ನಿಮ್ಮ ಮು0ದೆ ಓದಲು ಇಟ್ಟಿರುವೆ. ಓದುಗರೆ, ಇವನ್ನು ಓದಿ ಮರೆತು ಬಿಡಿ.ನಾಟಕಕ್ಕೆ ಪರವಾನಿಗೆ ಸಿಕ್ಕಿತೋ ಇಲ್ಲವೋ ಎ0ಬುದು ಆ ಗುಡಿಕೋಟೆ ನುಚ್ಚೇಶ್ವರ ದೇವರಿಗೆ ಗೊತ್ತು.

– ಶ್ರೀನಿವಾಸ ಹುದ್ದಾರ

2 Comments

  1. ಈ ಪತ್ರಗಳನ್ನು ಓದಿದ ಮೇಲೆ ನಾಟಕಕ್ಕೆ ಪರವಾನಿಗಿ ಸಿಕ್ಕಿರಬಹುದು ಎಂದು ನನ್ನ ಅನಿಸಿಕೆ…..
    ಪತ್ರಗಳನ್ನು ನಮ್ಮೊಡನೆ ಹಂಚಿಕೊಂಡಿದಕ್ಕೆ ಧನ್ಯವಾದಗಳು…..ಮತ್ತೆ ಯಾವುದಾದರು ಇಂತಹ ಪತ್ರಗಳು ಅಥವಾ ಬರಹಗಳು ಸಿಕ್ಕರೆ ಹೊಂಚಿಕೊಳ್ಳಲು ನಾವು ವಿನಂತಿಸುತ್ತೇವೆ…

  2. ವಂದನೆಗಳು… ಇನ್ನೊಂದು ಪತ್ರವಿದೆ ಶೀಘ್ರದಲ್ಲಿ ಹಂಚಿಕೊಳ್ಳುವೆ

Leave a Reply