ಮಂಗ್ಯಾ

ಮಂಗ್ಯ—- ಅಂದ ಕೂಡಲೇ ನಮಗ ನೆನಪ ಬರುದು ಒಂದು ಖರೆ ಖರೆ ಮಂಗ್ಯ ಇನ್ನೊಂದು ನಮ್ಮ ಧಾರವಾಡ್ ಭಾಷಾದಾಗ್ ಮೂರ್ಖ ಅನ್ನಲಿಕ್ಕೆ ಅವಾಗ್ ಅವಾಗ ಮಂಗ್ಯ ಅಂತ ಬೈಯ್ಯುದು ರೂಢಿ ರೀ ಮನುಷ್ಯ ಆಗಿದ್ದ ಮಂಗ್ಯಾನಿಂದ(ಮಂಗನಿಂದ ಮಾನವ ) ಅದನ್ಯಾಕೋ ಬೈಯಲಿಕ್ಕೆ ತಗೊಂಡರು ?ತಿಳಿಯದ ಮಾತೇನು ಅಲ್ಲ .ಮಂಗ್ಯಾ ಅಲ್ಲಿಂದ ಇಲ್ಲಿಗೆ ಜಿಗದ ಜಿಗದ ಮಾಡು ಕಾರ್ಬಾರಕ್ಕೆ ಅದ ಬೈಗಳ ಬಂದದ ಅನಸತದ .

ಅಂದಂಗ ಹಿಮಾಚಲಪ್ರದೆಶದಾಗ ಮಂಕಿ ಪಾಯಿಂಟ್ ಅಂತ ಅದ ಅಂತ ರೀ ಅಲ್ಲೇ ಹನುಮಂತ ಸಂಜೀವಿನಿ ಗುಡ್ಡ ತಗೊಂಡ ಹೋಗುವಾಗ ತನ್ನ ಕಾಲು ಊರಿದ್ದನಂತ ಅದಕ್ಕೆ ಈ ಹೆಸರು ಬಂದದ ಅಂತ .ಖಂಡಲಾ ದಾಗ ಮಂಕಿ ಹಿಲ್ ವಂದ ಪ್ರವಾಸಿ ತಾಣ ಅದ
ನಿಮಗ ಎಲ್ಲಾರಿಗೂ ಗೊತ್ತದಲಾ ನಮ್ಮ ಭಟ್ಕಳ ಹತ್ತಿರ ಮಂಕಿ ಅಂತ ಊರು ಅದ.ಕೆಲವಂದ ಸಂಸ್ಥಾಗೊಳು ಈ ಮಂಗ್ಯಾ ಸಹಾಯದಿಂದ ಅಂಗವಿಕಲ ರೀಗೆ ಸೇವಾ ಮಾಡಲಿಕ್ಕೆ ಟ್ರೈನಿಂಗ
ಕೊಡತಾರ ಅಂತ. ಈ ಮಂಗ್ಯಾ ಕುಣಿಸಿ ಹೊಟ್ಟಿ ತುಂಬಿಸಿ ಕೊಳತಾರ . ಮಂಗ್ಯಾ ಉಪಕಾರಿನೂ ಹೌದು .

ಆ ಜಾತಿ ಈ ಜಾತಿ ಅನಬೇಡ ಮೂಲ ಜಾತಿ ಮಂಗ .

ವಿಜಯ ಇನಾಮದಾರ

.

2 Comments

  1. ಮಂಗನೆಂಬ ಹೀಗಳಿಕೆ ಬೇಡ ಆತ ನಮ್ಮೆಲ್ಲರ ಪೂರ್ವಜ, ಮಂಗನ ಕುರಿತ ವಿಸ್ತೃತ ಭಾರತ ದರ್ಶನ ಮಾಡಿಸಿದ್ದೀರಿ, ಸೀಮಿತ ಸಾಲುಗಳ ಬರಹ ಯೋಚನೆಗೆ ಹಚ್ಚುವಂತಿವೆ.

  2. ಧನ್ಯವಾದ ರೀ

Leave a Reply