ಬೆಂಗಳೂರಿನ ಕನ್ನಡಿಗರಿಗಾಗಿ
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ…….
ಇದು ನಮ್ಮ ಕರುನಾಡು……..
ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ ಉದ್ಯೋಗ ದೊರಕುತ್ತಿವೆ.
ಕನ್ನಡಿಗರಿಗೆ ಬೆಂಗಳೂರಿನಲ್ಲಿ ಪ್ಲಾಟ್ ಕೊಳ್ಳುವುದು ಕಷ್ಟ. ಅನ್ಯ ಭಾಷಿಗರಿಗೆ ಅದು ಸುಲಭ, ಕಾರಣ ಆರಂಕಿ ಸಂಬಳ.
ಕನ್ನಡಿಗರಿಗೆ ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆ ಕಳಿಸಲು ಅರ್ಥಿಕವಾಗಿ ಸ್ವಲ್ಪ ತೊಂದರೆಯಾಗುತ್ತದೆ.
ಅದಿರಲಿ, ಹೊರ ರಾಜ್ಯದವರು ತಮ್ಮ ಸಂಸ್ಥೆಯಲ್ಲಿರುವ ಎಕ್ಸಿಕ್ಯೂಟಿವ್ ಹುದ್ದೆಯಿಂದ ಕೆಳಮಟ್ಟದ ಹುದ್ದೆಯವರೆಗೂ ತಮ್ಮ ಜನರನ್ನೇ ತುಂಬಿಕೊಳ್ಳುತ್ತಾರೆ. ಆಫೀಸ್ ನಲ್ಲಿಯೂ ಅವರೆಲ್ಲ ತಮ್ಮ ತಮ್ಮ ಭಾಷೆಗಳಲ್ಲಿಯೇ ಮಾತನಾಡುತ್ತಾರೆ. ಈ ಹೊರರಾಜ್ಯದವರು ಇಲ್ಲೇ ಬಂದು ಮನೆ ಕಟ್ಟಿ ಸೆಟ್ಲ್ ಆದರೂ ತಮ್ಮ ಮಕ್ಕಳನ್ನು ಸಿ.ಬಿ.ಎಸ್.ಸಿ ಅಥವಾ ಐ.ಸಿ.ಎಸ್.ಸಿ. ಸಿಲೇಬಸ್ ಇರುವ ಶಾಲೆಗಳಿಗೆ ಕಳಿಸುತ್ತಾರೆ. ಅಲ್ಲಿ ಕನ್ನಡವೇ ವಿರಳ. ನೋಡಿ ಇದು ಬೆಂಗಳೂರಿನ ಕಥೆಯೋ ಅಥವಾ ವ್ಯಥೆಯೋ.
ತಪ್ಪು ನಮ್ಮದೇ ?
ಹೊರ ರಾಜ್ಯದವರ್ ಜತೆಗೆ ಮಾತನಾಡುವಾಗ ನಾವು ಹಿಂದಿ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತೇವೆ. ಹೆಚ್ಚು ಸಂಸ್ಥೆಗಳಲ್ಲಿ ಕನ್ನಡದವರು ಬಾಸ್ ಪೊಸಿಷನ್ ನಲ್ಲಿದ್ದರೂ ಹೊರ ರಾಜ್ಯದವರನ್ನೇ ಆರಿಸುತ್ತಾರೆ. ಗ್ಲೋಬಲೈಸೇಷನ್ ಹೆಸರಿನಲ್ಲಿ ಎಲ್ಲರನ್ನೂ ಸ್ವಾಗತಿಸಿ, ನಮ್ಮ ಜನಕ್ಕೆ ಕೆಲಸ ಸಿಗದ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಿಮಗೆಲ್ಲ ನನ್ನದೊಂದು ವಿನಂತಿ. ನಿಮ್ಮ ಸಂಸ್ಥೆಯಲ್ಲಿ ಯಾವುದಾದರೂ ಹುದ್ದೆ ಖಾಲಿಯಿದ್ದರೆ ಕನ್ನಡಿಗರಿಗೇ ಆದ್ಯತೆ ಕೊಡಿ.