ಬಹುಮುಖಿ – ನಾಟಕ
ನಾಟಕದ ಬಗ್ಗೆ:
ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಬಿದ್ದು ಉರಿದುಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.
ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುತ್ತಿರುವ ಮಾಧ್ಯಮಗಳು, ಅವು ಹುಟ್ಟಿಸಿದ ಭ್ರಮಾಲೋಕದಲ್ಲಿ ತಾಳತಪ್ಪಿದ ಸಂಬಂಧಗಳು, ಇತಿಹಾಸ-ಕಥನ-ನೆನಪುಗಳನ್ನು ಕುಶಲ ತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಷಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕವಿದೆ.
ರಚನೆ – ವಿವೇಕ ಶಾನಭಾಗ
ನಿರ್ದೇಶನ – ಚನ್ನಕೇಶವ
ಪಾತ್ರವರ್ಗ:
ಆನಂದ ಬಿರಾಜದಾರ – ಮಂಜಪ್ಪ ಹುಲಗಿ, ರಿತೇಶ್ ವಕ್ವಾಡಿ
ಸಂಜಯ – ಸಂದೇಶ ಜೈನ, ಪ್ರಸನ್ನ ಜಿ.ವಿ.
ಕೆಂಪೇಗೌಡ/ಶೇಖರ – ಶ್ರೀಹರ್ಷ ಗೋ. ಭಟ್, ನವೀನ್ ಕುಮಾರ್
ಇನ್ಸ್ಪೆಕ್ಟರ್ ನಾಯಕ್ – ಶ್ರೀನಿವಾಸಮೂರ್ತಿ, ಗಂಗಪ್ಪ ಪಾಟೀಲ
ಜೀವನ – ರಿತೇಶ್ ವಕ್ವಾಡಿ
ಜಕ್ಕೂಜಿ – ನಿವೇದಿತಾ, ಪ್ರಸನ್ನ ಜಿ.ವಿ.
ಶಕು – ಪ್ರತಿಭಾ ಬಿ.ಜಿ., ಸುನೀಲಾ
ಊರ್ಮಿಳಾ – ನಿವೇದಿತಾ, ಛಾಯಾ ಎಂ.ಎಸ್.
ಸೀಮಾ – ಪಯಸ್ವಿನಿ ಶೆಟ್ಟಿ
ಸಂಗೀತಾ – ಕಾಜೋಲ್ ಚಿನ್ನಾಪೂರ
ಸಂಜನಾ – ಸುನೀಲಾ
ಅಪರ್ಣಾ – ಕಾಜೋಲ್ ಚಿನ್ನಾಪೂರ
ಎಡ್ವಿನ್ – ಶ್ರೀನಿಧಿ ಆಚಾರ್
ಸುನೀಲ – ಪೀರಪ್ಪ ದೊಡ್ಡಮನಿ, ಸದಾಶಿವ ಎಕ್ಕುಂಡಿಮಠ
ಕುಲಕರ್ಣಿ – ಸದಾಶಿವ ಎಕ್ಕುಂಡಿಮಠ, ಪೀರಪ್ಪ ದೊಡ್ಡಮನಿ
ಕಾಂಚನಾ – ಪಯಸ್ವಿನಿ ಶೆಟ್ಟಿ
ರಾಜಿ – ಛಾಯಾ ಎಂ.ಎಸ್.
ತಾಂತ್ರಿಕ ವರ್ಗ
ರಂಗಸಜ್ಜಿಕೆ – ರಿತೇಶ್ ವಕ್ವಾಡಿ, ಪೀರಪ್ಪ ದೊಡ್ಡಮನಿ, ಮಂಜಪ್ಪ ಹುಲಗಿ,. ಪ್ರಸನ್ನ ಜಿ.ವಿ.
ಬೆಳಕು – ಶಿವರಾಜ ಕೆ., ಕಾಜೋಲ್ ಚಿನ್ನಾಪೂರ, ಗಂಗಪ್ಪ ಪಾಟೀಲ, ಅರಣ್ಯ ಸಾಗರ
ಸಂಗೀತ – ಶ್ರೀನಿಧಿ ಆಚಾರ್, ಶ್ರೀನಿವಾಸಮೂರ್ತಿ
ವಸ್ತ್ರವಿನ್ಯಾಸ – ಪ್ರತಿಭಾ ಬಿ.ಜಿ., ಪಯಸ್ವಿನಿ ಶೆಟ್ಟಿ, ಸುನೀಲಾ, ನಿವೇದಿತಾ,
ರಂಗಪರಿಕರ – ಸದಾಶಿವ ಎಕ್ಕುಂಡಿಮಠ, ಛಾಯಾ ಎಂ.ಎಸ್.
ಪ್ರಸಾಧನ – ಪ್ರತಿಭಾ ಬಿ.ಜಿ.
ಪ್ರಚಾರ – ಸದಾಶಿವ ಎಕ್ಕುಂಡಿಮಠ, ಶ್ರೀಹರ್ಷ ಗೋ. ಭಟ್
ಬೆಳಕು ವಿನ್ಯಾಸ – ಎಮ್.ಎಮ್. ಕೃಷ್ಣಮೂರ್ತಿ, ಸೂರಜ್
ಸಂಗೀತ ನಿರ್ವಹಣೆ – ಅರುಣಕುಮಾರ ಎಂ., ಎಂ.ಪಿ. ಹೆಗಡೆ, ಶ್ರೀನಿಧಿ ಆಚಾರ್
ಕೃತಜ್ಞತೆಗಳು
ಅಕ್ಷರ ಕೆ.ವಿ., ಬಿ.ಆರ್. ವೆಂಕಟರಮಣ ಐತಾಳ, ವಿವೇಕ ಶಾನಭಾಗ
ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು, ಸಿಬ್ಬಂದಿವರ್ಗ
ನೀನಾಸಮ್ ತಿರುಗಾಟ
ನೀನಾಸಮ್ ಸದಸ್ಯರು