ಪರ್ಯಾಯ
ಒತ್ತಿ ಒತ್ತಿ
ಕೂಗಿ ಹೇಳಿದ್ದೇ
ಸತ್ಯವಾಗಬೇಕಿಲ್ಲ…
ಗದ್ದಲವೂ ಅದಕ್ಕೆ
ಕಾರಣವಿರಬಹುದು…
ಕಂಡ ಕಣ್ಣೀರೆಲ್ಲ
ಕರುಣೆಯದೇ
ಆಗಬೇಕಿಲ್ಲ…
ಧೂಳಿಗೂ ಇರಬಹುದು …
ಮುಂಚಾಚಿದ ಹಸ್ತ ಸಹಾಯಹಸ್ತವೇ
ಆಗಬೇಕಿಲ್ಲ…
ಯಾಚನಾಹಸ್ತ-
ವಾಗಿರಲೂ ಬಹುದು…
ಆಡಿದ ಶಬ್ದಗಳೆಲ್ಲ
ಮಾತುಗಳಾಗ-
ಬೇಕಿಲ್ಲ…
ಮನದ ಚಡಪಡಿಕೆಯ
ಮುಕ್ತ ದಾರಿಯಾಗಿರಬಹುದು…
ಹಾಗೆಯೇ
ಬರೆದ ಸಾಲುಗಳೆಲ್ಲ
ಕವನವಾಗಬೇಕಿಲ್ಲ…
ಮನದ ತೆವಲಿಗೆ
ಕಂಡುಕೊಂಡ
ಪರ್ಯಾಯ
ರೂಪವಾಗಿರಲೂ-
ಬಹುದು…