“ನೃತ್ಯಗಾರನ ಮೇಕಪ್‌ ಪ್ರೀತಿ”,

ನಟ, ನೃತ್ಯಗಾರ ಮತ್ತು ಮೇಕಪ್ ಕಲಾವಿದ ಶೇಖರ ರಾಜನ್‌ ಹೆಸರಾಂತ ನೃತ್ಯ ಕಲಾವಿದ ಡಾ. ಸಂಜಯ್ ಶಾಂತರಾಮ್ ಶಿಷ್ಯ. ಆಸ್ಟ್ರೇಲಿಯಾ, ಕೆನಡಾ, ಯುರೋಪ್‌, ದುಬೈ ಸೇರಿದಂತೆ ಹಲವಾರು ದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಮೇಕಪ್‌ ಕಲೆಯಲ್ಲೂ ಸಿದ್ಧಹಸ್ತರು. ಈಗ ಖ್ಯಾತ ಮೇಕಪ್‌ ಕಲಾವಿದರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಮೇಕಪ್ ಮತ್ತು ನ್ಯತ್ಯ ಹುಡುಗಿಯರಿಗೆ ಸೀಮಿತ ಎನ್ನುವವರಿದ್ದಾರೆ. ನೀವು ಪುರುಷನಾಗಿ ಈ ಧೋರಣೆಯನ್ನು ಹೇಗೆ ಎದುರಿಸಿದಿರಿ?ಜನ ಮೊದ ಮೊದಲು ಇವನು ಹುಡುಗಿಯರ ತರಹ ನಡೆಯುತ್ತಾನೆ. ಹೆಣ್ಮಕ್ಕಳಂತೆ ಮಾತನಾಡುತ್ತಾನೆ ಎಂದು ಹೀಯಾಳಿಸುತ್ತಿದ್ದರು. ಹಿರಿಯ ನೃತ್ಯಪಟುಗಳು ಈ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರನ್ನೇ ನಾನು ಆದರ್ಶವನ್ನಾಗಿ ತೆಗೆದುಕೊಂಡೆ. ನಟರಾಜ ಒಬ್ಬ ಪುರುಷ. ಭರತ ಮುನಿ ಕೂಡ ಪುರುಷ ಅಲ್ಲವೇ…ನೀವು ಹೆಸರು ಮಾಡಿದ್ದು ನೃತ್ಯದಲ್ಲಿ. ಮೇಕಪ್‌ ಕಲೆಯನ್ನು ಕಲಿತಿದ್ದು ಹೇಗೆ?ನೃತ್ಯಕ್ಕೆ ಸಂಬಂಧಿಸಿದಂತೆ ಕೃಷ್ಣ, ರಾಮ, ಶಿವ ಮತ್ತಿತರ ಪುರಾಣ ಪಾತ್ರಗಳಿಗೆ ವಸ್ತ್ರ ಮತ್ತು ಮೇಕಪ್ ಮುಖ್ಯ. ಈ ಬಗ್ಗೆ ಗಮನಿಸುತ್ತ ಹೋದೆ. ಇದೆಲ್ಲ ಹೇಗೆ ನಿರ್ವಹಿಸಬೇಕು ಎಂಬ ಕುತೂಹಲ ಎಲ್ಲವನ್ನೂ ಕಲಿಸಿತು.ಮೇಕಪ್‌ ಮತ್ತು ನೃತ್ಯ ಜರ್ನಿ ಬಗ್ಗೆ ಹೇಳಿ? ಕೃಷ್ಣ, ರಾಮ, ಮತ್ತು ಇತರ ಪೌರಾಣಿಕ ಪಾತ್ರಗಳನ್ನು ಭರತನಾಟ್ಯದಲ್ಲಿ ಪ್ರಸ್ತುತಪಡಿಸಿ ಸೈ ಎನಿಸಿಕೊಂಡಿದ್ದೆನೆ. ಜೊತೆಗೆ ಪೌರಾಣಿಕ, ಕಾಲ್ಪನಿಕ, ಸಿನಿಮ್ಯಾಟಿಕ್.. ಆದ ಪ್ರಯೋಗಗಳೂ ಇಷ್ಟ. ‘ಭೂ ನಾಟಕ ಮಂಡಳಿ‘ ಎಂಬ ಚಿತ್ರವನ್ನೂ ಮಾಡಿದ್ದೇನೆ. ಸಾಕ್ಷ್ಯಚಿತ್ರಗಳನ್ನು ರೂಪಿಸಿದ್ದೇನೆ. ಇವುಗಳಲ್ಲಿ ಪಾತ್ರಕ್ಕೆ ಪೂರಕವಾದ ಮೇಕಪ್‌ ಕೂಡ ಮಾಡಿದ್ದೇನೆ.ನಿಮ್ಮ ದೃಷ್ಟಿಯಲ್ಲಿ ಮೇಕಪ್ ಹೇಗಿರಬೇಕು?ರಂಗವೇದಿಕೆಯಲ್ಲಿ ವಿಶೇಷವಾಗಿ ಪೌರಾಣಿಕ ಪಾತ್ರಗಳಿಗೆ ಮೇಕಪ್‌ ಪೂರಕವಾಗಿರಬೇಕು. ಸಮಾರಂಭಗಳಲ್ಲಿ ಹೀರೋ ಮತ್ತು ಹೀರೋಯಿನ್‌ ತರಹ ಕಾಣಿಸಿಕೊಳ್ಳುವ ಅಭಿಲಾಷೆಯಿಂದ ಕೆಲವರು ಅತಿಯಾದ ಮೇಕಪ್‌ ಮಾಡಿಕೊಳ್ಳುತ್ತಾರೆ. ಬದಲಿಗೆ ನಿತ್ಯದ ಮೇಕಪ್‌ಗಿಂತ ಸ್ವಲ್ಪ ಜಾಸ್ತಿ ಮಾಡಿಕೊಂಡರೆ ಸಾಕು, ಒಪ್ಪವೆನಿಸುತ್ತದೆ.ವಿಪ್ರೊ ಕಂಪನಿಯ ಕೆಲಸದಲ್ಲಿದ್ದೀರಿ ಕಲಾ ಸಾಧನೆ ಸಾಧ್ಯವಾಗಿದ್ದು ಹೇಗೆ?ವಿಪ್ರೋ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದು ಆರ್ಥಿಕ ನೆಲೆ ಕಂಡುಕೊಳ್ಳಲು. ನನಗೆ ನೃತ್ಯವೇ ಪ್ರಧಾನ. ಅದರಲ್ಲೇ ಸಾಧನೆ ಮಾಡುವ ಕನಸು ಚಿಕ್ಕಂದಿನಿಂದಲೇ ಇತ್ತು. ನೃತ್ಯಶಾಲೆ ಸೇರಿ ಸತತ ಅಭ್ಯಾಸ ಮಾಡಿದೆ. ಸಾಧನೆ ಸುಲಭವಾಯಿತು

courtsey:prajavani.net

“author”: “ಪ್ರಕಾಶ್‌ ನಾಯಕ್‌ ಎಸ್‌”,

https://www.prajavani.net/artculture/dance/makeup-artist-646709.html

Leave a Reply