ನಾನು ಎಂಬ ಅಹಂ.
ನಾನು ನಾನೆಂಬ ನನ್ನದೆಂಬ ಅಹಂಕಾರ
ಎಲ್ಲಿಯದೋ ಈ ಅಸ್ತಿತ್ವದ ಅಧಿಕಾರ ದಾಹ
ನೆಲ, ಜಲ, ಮಣ್ಣು, ಜೀವವೂ ನಿನ್ನದಲ್ಲ
ಪ್ರತಿ ಕ್ಷಣ ಕ್ಷಣವೂ ಶಾಶ್ವತವಲ್ಲ
ಆ ಕ್ಷಣವೂ ನಿನ್ನದಲ್ಲ ಬರಿದೆ ಅಹಂ ಸಲ್ಲದಲ್ಲ
ನೆಲಕಾಗಿ, ಆಸ್ತಿ, ಅಂತಸ್ತಿಗಾಗಿ ನಿತ್ಯ ಸಂಚು
ತನಗಾಗಿ ತನ್ನ ಮಕ್ಕಳಿಗಾಗಿ ಎಲ್ಲವೂ ಸ್ವಾರ್ಥಕಾಗಿ
ಜೀವ ಸೃಷ್ಟಿ ನಿನ್ನದೇ? ಒಡನಿರುವವರು ನಿನ್ನವರೇ?
ಈಗಿರುವ ಜೊತೆಗಾರರೆಲ್ಲ ನಿನ್ನವರೇ?
ಎಲ್ಲಿಯವರೆಗೆ ನೀನಿರುವಿ ನಿನಗದರ ಅರಿವೆಲ್ಲಿ?
ಹೋಗುವ ಸಮಯದೊಳು ದೊಚಿಕೊಂಡೊಯ್ಯುವೆಯಾ
ನೀ ಸಾಗುವ ಹಾದಿಯಲಿ ಹೊತ್ತೋಯ್ಯಲು ಸರಕುಗಳಿವೆಯಾ
ಮನೆ, ಹೊಲ, ಧನ, ಕನಕ, ಆಸ್ತಿ ಪಾಸ್ತಿ ಹೊತ್ತೊಯ್ಯುವುದಿಲ್ಲ
ನಿನಗಾಗಿ ಹೂಳುವ ಆರು, ಮೂರಡಿಯ ಜಾಗವೂ ನಿನ್ನದಲ್ಲ
ಉರಿಸುವ ಕಟ್ಟಿಗೆಗೂ ತೆರಬೇಕು, ಯಾವುದು ಶಾಶ್ವತವಯ್ಯಾ!
-ಉಮಾ ಭಾತಖಂಡೆ.
1 Comment
Nannadellavu paramatmana bikshe endu aritaga aham horatu hoguttade . Nice poem.
.