ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ ಅರ್ಭಾಟ ತಯಾರ ಆಗಿ ಕಬ್ಬೂರ ರಸ್ತೆ ಬದಿಯಲ್ಲಿ ಇರುವ ನೀರಿನ ಟಾಕಿಗೆ ಬಂದು ನಿಂತಾಗ ೬ ಹೊಡದಿತ್ತು.ಅವ್ರು ಬಂದ್ರಿಲ್ಲೋ ಇವ್ರು ಬಂದ್ರಿಲ್ಲೋ ಅನಕೋತ
ಎಲ್ಲಾ ಲಗೇಜು ಪಗೇಜು ಹಾಕಿ ನಡ್ರಿ ಹೋಗುಣ ಇನ್ನ ಅಂದಾಗ ೭ ಹೊಡದಿತ್ತು.. ಎಲ್ಲಾರೂ ಟೈಂಶೀರ ಬಂದಿದ್ದರಿಂದ ನಾವು ಅಂದಕೊಡಂಗ *ಸೊಗಲ* ಕ್ಕೆ ೯:೩೦ ಅಂದ್ರ ಇದ್ದವಿ. ಬೆಳಗಾವಿ ಜಿಲ್ಲಾ
. ಶ್ರೀ ಸೊಗಲ ಕ್ಷೇತ್ರವು ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾದುದು ಸೋಮೇಶ್ವರನ ದೇವಸ್ಥಾನ. ಎತ್ತರದ ಬಂಡೆಗಲ್ಲಿನ ಮೇಲೆ ನಿರ್ಮಿಸಿರುವ ಈ ದೇವಾಲಯ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಬೆಟ್ಟಗಳ ನಡುವಿನಿಂದ ಪ್ರಾಕೃತಿಕವಾಗಿ ಹರಿಯುತ್ತಿರುವ ತೊರೆಯೊಂದು ಜಲಪಾತದಂತೆ ಧುಮುಕುವುದರಿಂದ ಇದು *ಸೊಗಲ ಜಲಪಾತ* ಎಂದು ಕರೆಯಲ್ಪಡುತ್ತದೆ. ದೇವಾಲಯದ ಬಳಿಯೇ ಈ ಜಲಧಾರೆ ಸುಮಾರು ೧೫ ಅಡಿ ಎತ್ತರದಿಂದ ಧುಮುಕಿ ನಂತರ ಸ್ವಲ್ಪ ಮುಂದಕ್ಕೆ ಹರಿದು ಜಲಧಾರೆಯಾಗಿ ೧೨೦ ಅಡಿ ಆಳಕ್ಕೆ ಬೀಳುತ್ತದೆ.
ನಾವು ಕಟಗೊಂಡ ಬಂದ ತಿಂಡಿ ತಿನಿಸು ನೀರು ಹೊತ್ತಗೊಂಡು ನಾವು ಕಬ್ಬೂರ ರಸ್ತೆ ಮಿತ್ರರು ಮತ್ತು ನಮ್ಮ ಯೋಗ ಬಳಗ ಗುಡ್ಡ ಹತ್ತೇ ಬಿಟ್ಟವಿ ಶ್ರೀಸೋಮೇಶ್ವರ
ಶಿವಾ- ಪಾರ್ವತಿ ದರ್ಶನ ತೊಗೊಂಡವಿ.
ಎಲ್ಲಾರೂ ಒಂದ ಗಜ್ಜ ತಮ್ಮ ತಮ್ಮ ಪರಿಚಯ ಹೇಳುವ ಕಾರ್ಯಕ್ರಮ..
ಉಪ್ಪಿಟ್ಟು ಶಿರಾ ಚಹಾ ಕಟದಿದ್ದವೀ ಇನ್ನೇನ ನಡ್ರೀ ನಮ್ಮ ಹಾದಿ ಗೊಡಚಿನಮಲ್ಕಿ ಕಡೆ.
ಮುರಗೋಡ,
ಗೋಕಾಕ
ಗೋಕಾಕ ಫಾಲ್ಸ್ ಮ್ಯಾಲೆ ಹಾದು ನಾವು ಗೊಡಚಿನಮಲ್ಕಿ ಜಲಪಾತ ಕಡೆಗೆ ಹೊಂಟಿವಿ . . .ಸೂಟಿ ಇದ್ದದಕ್ಕ ಬಾಳ ಮಂದಿ ಬಂದಿಧ್ದಕ ರೋಡ ಬ್ಲಾಕ್ ಆಗಿತ್ತು ಸ್ವಲ್ಪ ಜೋರ ಸ್ವಲ್ಪ ತಿಳಿಸಿ ನಾವೇ ನಮ್ಮ ಹಾದಿ ಮಾಡಕೊಂಡ ಗೊಡಚಿನಮಲ್ಕಿ ಊರಾಗ ಹಾದ ಗೋಡಚಿನಮಲ್ಕಿ ಜಲಪಾತ ಬಂದ್ವಿ ಅನ್ನುದರಾಗ 1 ಹೊಡದಿತ್ತು.
*ಗೋಡಚಿನಮಲ್ಕಿ ಜಲಪಾತ*
ಗೋಕಾಕ ಪಟ್ಟಣದಿಂದ ಸುಮಾರು ೧೯ ಕಿ.ಮೀ ದೂರದಲ್ಲಿರುವ ಒಂದು ಜಲಪಾತ. . *ಮಾರ್ಕಂಡೇಯ* ನದಿಯಿಂದ ಉಂಟಾಗಿರುವ ಇದಕ್ಕ ಮಾರ್ಕಂಡೇಯ ಜಲಪಾತ ಅಂತೂ ಕರಿತಾರ. ಇಲ್ಲಿ ಜಲಪಾತದ ಎರಡು ಹಂತ ಅವ. ಮಾರ್ಕಂಡೇಯ ನದಿಯು ಮೊದಲು ೨೫ ಮೀಟರ್ ಎತ್ತರದಿಂದ ಧುಮುಕಿ ಅನಂತರ ಹಂತದಲ್ಲಿ ೧೮ ಮೀಟರ್ ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ಅಲ್ಲಿಂದ ಮುಂದೆ ಮಾರ್ಕಂಡೇಯ ನದಿಯು *ಘೋಡ್ಗೇರಿ* ಯಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ. ಜೂನ್ನಿಂದ ಅಕ್ಟೋಬರ್ವರೆಗೆ ನೋಡಲಿಕ್ಕೆ ಹೋಗುದು ಅಗ್ದಿ ಚೋಲೋ ಏನ್ರೀಪಾ.
ಗೊಡಚಿನಮಲ್ಕಿ ಬಾಳ ಮಸ್ತ ನೀರು ಇತ್ತು.. ಜಲಪಾತ ದ ರಭಸಕ್ಕೆ ಮೈ ಒಡ್ಡಿ ರೋಮಾಂಚನ ಗೊಂಡವಿ.
ಅಲ್ಲಿಯೇ ಆಲದ ಗಿಡದ ಬುಡಕ್ಕೆ ಮಸ್ತ ಊಟ ಮುಗಿಸಿ ಗೋಕಾಕ್ ಫಾಲ್ಸ್ ಗೆ ಹೊಂಟವಿ..
**ಘಟಪ್ರಭೆ ನದಿ ನೀ ಪಶ್ಚಿಮ ಘಟ್ಟದಲ್ಲಿ ಜನಿಸಿ* ಮಾರ್ಕಂಡೇಯ, ಹಿರಣ್ಯಕೇಶಿ ಕೈ ಹಿಡಿದು ಕೃಷ್ಣೆಯಲ್ಲಿ ನೀ ಒಂದಾದೆ..
ದೂಪದಾಳ ದಲ್ಲಿ ನಿನಗೆ ತಡೆಗೋಡೆ ಗೋಕಾಕ್ ಫಾಲ್ಸ್ ನಲ್ಲಿ ಧುಮುಕಿ ನೀ ಭಾರತದ ನಯಾಗಾರ ನೀನಾದೆ .
ನೀ ನಯನ ಮನೋಹರ ಅದರ ಮೇಲೆ ತೂಗುಯ್ಯಾಲೆ ಕಣ್ಣಿಗೆ ಆಹಾ ಅದ್ಬುತ ಆಗರ.ನಿನ್ನ ನೋಡಲು ನಾವೆಲ್ಲ ಖಾಯಂ ಕಾತರ.
ಅದ್ಭುತ ಅನುಭವ ಅದೆಂತಹ ಫಾಲ್ಸ್ ನ
ಗಾಂಭಿರ್ಯದ ನಡಿಗೆ..ಒಲ್ಲದ ಮನಸ್ಸಿನಿಂದ ನಾವೆಲ್ಲ ಫಾಲ್ಸ್ ನಿಂದ ಕರದಂಟ,ಲಡಿಗೆ ಸವಿಯುತ್ತಾ ಬಸ್ಸು ಹತ್ತಿದವಿ…ನಡುವೆ ಚಹಾ ಚುರಮರಿ ತಿಂದು ಧಾರವಾಡ ಕಬ್ಬೂರ ರಸ್ತೆಗೆ ಮುಟ್ಟಿ ದಾಗ ಬರೊಬ್ಬರಿ ರಾತ್ರಿ ೧೦:೩0 …
ನಿಮ್ಮ
ವಿಜಯ.ಇನಾಮದಾರ
ಧನ್ಯವಾದ..
#ಕವಿಜು