ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ
ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ .
ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ ನಷ್ಟು ದೂರ ನಡೆದು ಪಾದಯಾತ್ರೆ ಮಾಡುತ್ತಾ ಆಷಾಡ ಏಕಾದಶಿ ಯಂದು ಪಂಡರಾಪುರ ತಲುಪುತ್ತಾರೆ . ಇದೊಂದು ಅತೀ ದೊಡ್ಡ ಪಾದಯಾತ್ರೆ . ಇದಕ್ಕೆ ವಾರಕರಿ ಸಂಪ್ರದಾಯ ಅಥವಾ ದಿಂಡಿ ಅಂತನೂ ಕರಿತಾರೆ.
ಇನ್ನೂ ಲಕ್ಷ್ಮೇಶ್ವರದ ಶ್ರೀ ಬಾಬುರಾವ್ ಕುಲಕರ್ಣಿ ಯವರು ಪ್ರಾರಂಭಿಸಿದ “ಮಂತ್ರಾಲಯ ಪಾದಯತ್ರೆಯೂ “ಬಹಳ ಪ್ರಸಿದ್ಧಿ ಪಡೆದಿದೆ .ಮಂತ್ರಾಲಯಕ್ಕೆ, ಶ್ರೀ ಶೈಲಕ್ಕೆ ,ಪಂಢರಪುರಕ್ಕೆ,ಹುಬ್ಬಳ್ಳಿ -ಧಾರವಾಡ ದಿಂದ ಮುರಗೋಡ ಕ್ಕೇ, ಎಲ್ಲಮ್ಮನಗುಡ್ಡ ಕ್ಕೆ, ಉಳವಿ ಗೇ ಅನೇಕ ಪಾದಯಾತ್ರೆ ಗಳು ಆಗುತ್ತವೆ.
ಬ್ರಹ್ಮ ,ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳ ಸಂಗಮವೇ “ಶ್ರೀ ಗುರುದತ್ತ “. ನಮ್ಮ ದೇಶದ ಶ್ರೀ ದತ್ತನ ಮತ್ತು ಶ್ರೀ ದತ್ತನ ಅವತಾರಿ ಪುರುಷರ ಶ್ರೀ ಕ್ಷೇತ್ರಗಳು ಗಿರಿನಾರ್ ,ಗಾಣಗಾಪುರ ,ನರಸಿಂಹವಾಡಿ ,ಕುರಗಡ್ಡಿ ,ಪೀಠಾಪುರ, ವರದಪುರ,ಮಾಣಗಾ೦ವ,ಗುರುಮಠ ಕಾರವಾರ , ಹಳೇಹುಬ್ಮಳ್ಳಿ
ಶ್ರೀ ಕೃಷ್ಣೇಂದ್ರ ಮಠ ಮುಂತಾದ ಕ್ಷೇತ್ರಗಳಿಗೆ ಪಾದಯಾತ್ರೆ ಮಾಡುವ ಮೂಲಕ ಸಿದ್ಧಗೊಂಡಿರುವ ಸಂಘಟನೆಯೇ “ಶ್ರೀ ದತ್ತ ಪಾದಯಾತ್ರೆ ಸಮಿತಿ“. ಧಾರವಾಡ. ಶ್ರೀ ಆನಂದ ಕುಲಕರ್ಣಿ ,ಶ್ರೀ ರಾಮಕೃಷ್ಣ ಸುಂಕದ ,ಶ್ರೀ ಉದಯ್ ಕುಲಕರ್ಣಿ,ಶ್ರೀ ಪಾಂಡುರಂಗ ಗೋಡಖಿಂಡಿ ಮುಂತಾದವರ ಧುರೀಣತ್ವದಲ್ಲಿ ೨೦೦೮ ರಿಂದ ಅನೇಕ ಯಶಸ್ವೀ ಪಾದಯಾತ್ರೆ ಆಯೋಜಿಸಿದ್ದಾರೆ.
ಹೀಗೆ ಈ ವರ್ಷ ನನ್ನ ಖುದ್ದೂರಾದ ಶ್ರೀ ದತ್ತ ಕ್ಷೇತ್ರ ಹಂಪಿಹೊಳಿ(ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ) ೧೦ ನೇ ಪಾದಯಾತ್ರೆ ಗೆ ಹೋಗೂದು ಠರಾವ ಆತು..ನನಗ ಬಾಳ ಖುಷಿ ಆತು. ಅದು ದತ್ತ ಮಹಾರಾಜರ ಪ್ರೇರಣೇಯೆನೋ ನಾನು ಹೋಗಲೇಬೇಕು ಅಂತ ನಿಶ್ಚಯಿಸಿದೆ .ಅಕ್ಟೋಬರ ೨೪ ರಿಂದ ೨೭ ರ ವರೆಗೆ ಪಾದಯಾತ್ರೆ ಮಾಡುದು ಠರಾವ ಆತು.
ಸುಮಾರು ೨೦೦ ವರ್ಷಗಳ ಹಿಂದೆ ನಮ್ಮ ಪೂರ್ವಜರಾದ ಮಹಾ ಅನುಷ್ಠಾನಿಕರಾಗಿ ಸಂನ್ಯಾಸಿ ಶ್ರೀ ರಾಮಾನಂದ ಮಹಾರಾಜರ (ಸಮಾಧಿ:ಬಾಬಾ ನಗರ ವಿಜಯಪುರ ಶಾ.ಶಕೆ ೧೬೭೬)ಪುತ್ರ ಶ್ರೀ ಸದಾನಂದ ಮಹಾರಾಜರಿಗೆ(ಶ್ರೀ ಶಿವಪ್ಪಯ್ಯ ಇನಾಮದಾರ ಸಮಾಧಿ:ಬಾಬಾನಗರ ವಿಜಯಪುರ ಶಾ .ಶಕೆ ೧೭೦೦) ಅವರ ಪರಮ ಶಿಷ್ಯ ರಾದ ಶಿರಸಂಗಿ ಜ್ಯಾಯಪ್ಪ ದೇಸಾಯಿ ತನ್ನ ಸಂಸ್ಥಾನದ ಈ ಹಂಪಿಹೊಳಿ ಸುತಮುತ್ತಲಿನ ಪ್ರದೇಶವನ್ನು ಇನಾಮ ಆಗಿ ಕೊಟ್ಟನು. ಅವರು ಇನಾಮನ್ನು ತಮ್ಮನಾದ
ಶ್ರೀ ನಾಗಪ್ಪಯ್ಯನಿ ಗೆ ಕೊಟ್ಟು ತಾವು ಬಾಬಾನಗರದಲ್ಲಿ ತಪಸ್ಸಿಸಿ ಸಮಾಧಿಸ್ಥರಾದರು.ಶ್ರೀ ದೇವಿ ಆರಾಧಕರಾದ(ಗೊಂಧಳೀ ಸಂಪ್ರದಾಯ ) ಇನಾಮದಾರ ಮನೆತನಕ್ಕೆ ಶ್ರೀ ಕುಮಶಿ ನರಸಿಂಹರು ಕುಲಗುರು.ಮುಂದೆ ನಾಗಪ್ಪಯ್ಯ ಮತ್ತು ವಿಸಪ್ಪಯ್ಯಾ ಇನಾಮದಾರ ವಂಶಜರು ನಾವು .
ಹೀಗಿರುವಾಗ ಸುಮಾರು ೧೫೦ ವರ್ಷಗಳ ಹಿಂದೆ ನರಗುಂದದ ದಿವಾನಜಿ ಎಂಬುವವರಿಗೆ ಭಯಂಕರ ರೋಗ ಬಂದು ಉಪಶಮನಕ್ಕಾಗಿ ಶ್ರೀ ಕ್ಷೇತ್ರ ಗಾಣಗಾಪುರ ದಲ್ಲಿ ಶ್ರೀ ದತ್ತ ಮಹಾರಾಜರ ಸೇವೆ ಮಾಡುವಾಗ ದ್ರಷ್ಟಾಂತವಾಗಿ”ನೀನು ಹಂಪಿಹೊಳಿಯ ಇನಾಮದಾರ ಹೊಲದಲ್ಲಿರುವ ಬಿದಿರಿನ ಗಿಡದ ಕೆಳಗಿರುವ ನನ್ನ ಪಾದುಕೆಯನ್ನು ಹೊರತೆಗೆದು ಸ್ಥಾಪಿಸು ನಿನ್ನ ರೋಗ ಶಮನವಾಗುತ್ತದೆ.” ಎಂದು ಯತಿಗಳು ಕನಸಿನಲ್ಲಿ ಬಂದು ಹೇಳಿದಂತಾಯಿತು . ಇದೇ ದ್ರಷ್ಟಾಂತ ನಮ್ಮ ಪೂರ್ವಜರಾದ ಶ್ರೀ ನರಸಪ್ಪಯ್ಯಾ ಇನಾಮದಾರ ರಿಗೂ ಆಗಿತ್ತು.ಇಬ್ಬರೂ ಕೂಡಿ ಹೊಲದಿಂದ ಆ ಶ್ರೀ ದತ್ತ ಪಾದುಕಾ ತೆಗೆದು ಅಲ್ಲಿಯೇ ಸ್ಥಾಪನೆ ಮಾಡಿದರು. ದಿವಾನಜಿ ಯವರಿಗೆ ರೋಗ ನಿವಾರಣ ಆಯಿತು. ಹೀಗೆ ಹಂಪಿಹೊಳಿ ಗ್ರಾಮವು ಶ್ರೀ ದತ್ತ ಕ್ಷೇತ್ರವಾಯಿತು.ನಮಗ ದತ್ತ ಸಂಪ್ರದಾಯ ಬಂತು. ಮುಂದೆ ಟೆಂಬೆ ಮಹಾರಾಜರ ಶಿಷ್ಯರಾದ ಶ್ರೀ ವಾಸುದೇವಾನಂದ ನಾಶಿಕರ ಮಹಾರಾಜರು ಹಂಪಿಹೊಳಿ ಗೆ ಬಂದು ಶ್ರೀ ದತ್ತ ಭಜನಾ ಪದ್ಧತಿ ಹಾಕಿದರು. ಅವರ ಪ್ರೇರಣೆಯಂತೆ ಪ್ರತಿ ವರ್ಷ ಚೈತ್ರದಲ್ಲಿ ಕುಮಸಿ ನಾರಸಿಂಹರ ಆರಾಧನೆ ಕಿಂತ ಮುಂಚೆ ಏಳು ದಿವಸ ಭಜನಿ ಸಪ್ತಾಹ ಪ್ರಾರಂಭಿಸಿದರು. ಅದು ಇದುವರೆಗೂ ಚೈತ್ರ ಪಂಚಮಿಯಿಂದ ದ್ವಾದಶಿಯ ವರೆಗೆ ವಿಜ್ರಂಬಣೆಯಿಂದ ಆಚರಿಸಲ್ಪಡುತ್ತದೆ . ಇಸ್ವಿ ೧೯೫೫ ರಲ್ಲಿ ಶ್ರೀ ದತ್ತಪ್ಪಯ್ಯಾ ಇನಾಮದಾರ ಅತಿರುದ್ರ ಯಾಗ ಮಾದಿದರು. ನಂತರ ಆರಾಧನಾ ಶತಮಾನೋತ್ಸವ ನಿಮಿತ್ತ ೨೦೦೧ ರಲ್ಲಿ ಮತ್ತೊಮ್ಮೆ ಅತಿರುದ್ರ ಆಗಿದೆ. ಈ ಕ್ಷೇತ್ರಕ್ಕೆ ೧೯೭೯ ರಲ್ಲಿ ಶ್ರೀ ಕಂಚಿ ಪರಮಚಾರ್ಯರು ಶ್ರೀ ಚಂದ್ರಶೇಖರ ಸ್ವಾಮಿಗಳು ಬಂದು ಈ ಕ್ಷೇತ್ರವನ್ನು ಪಾವನಗೊಳಿಸಿದ್ದಾರೆ . ನಂತರ ಇನಾಮದಾರ ವಂಶಜರಾದ ಶ್ರೀ ಚೈತನ್ಯಾಶ್ರಮದ ಹೆಬ್ಬಳ್ಳಿ ಶ್ರೀ ದತ್ತಾ ಅವಧೂತ ಮಹಾರಾಜರ ಮಾರ್ಗದರ್ಶನದಲ್ಲಿ ಶ್ರೀ ದತ್ತ ಸಂಸ್ಥೆ ಎಲ್ಲ ಆಭಿವ್ರದ್ಧಿ ಕಾರ್ಯಗಳನ್ನು ಮಾದುತ್ತಿದೆ
೨೪. ೦. ೨೦೧೫ ಇನ್ನೂ ನನ್ನ ಮೊದಲ ಪಾದಯಾತ್ರೆ ಧಾರವಾಡದ ಗಾಂಧಿಚೌಕ ಶ್ರೀ ದತ್ತ ಮಂದಿರ ದಿಂದ ದಿ. ೨೪. ೧೦.೨೦೧೫ ಮುಂಜಾನೆ ಸರಿಯಾಗಿ ೧೦ ಗಂಟೆಗೆ
ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ,ವಾಟಿ ಹಳು ಹಳು ಚಲಾ ಮುಖಾನೆ ದತ್ತ ದತ್ತ ಬೋಲಾ ಅನ್ನುತ್ತಾ ಶುರು ಆತು.ನಮ್ಮ ಕುಟುಂಬದವರೆಲ್ಲ ಧಾರವಾಡದ ಗಡಿವರೆಗೆ ನಡೆದು ನನ್ನನ್ನು ಬಿಳ್ಕೊಟ್ಟರು . ಅಮ್ಮಿನಬಾವಿ ಊರಿನ ಕಡೆ ನಮ್ಮ ಗುರಿ.
ಶ್ರೀ ಬನ್ನಿ ಕಾಳಿಕಾಂಬ, ಅಮ್ಮಿನಬಾವಿ
ಈಗಾಗಲೇ ಅಲ್ಲಿ ಅಮ್ಮಿನಬಾವಿ ಜಾಕ್ವೆಲ್ಲ ಹತ್ತಿರ ಊಟ ವಿಶ್ರಾಂತಿ.ವ್ಯವಸ್ಥೆ ಮತ್ತು ಸಹಕಾರ ಶ್ರೀD .G ಬಡಿಗೇರ
ಹೀಗೇ ನಾವು ಮಧ್ಯಾಹ್ನ ೧೨ ಕ್ಕೆ ಅಮ್ಮಿನಬಾವಿ ಮುಟ್ಟಿದ್ವಿ .ನಡದದ್ದು ೧೦ ಕಿ.ಮೀ .ಎಲ್ಲಾರೂ ತಮ್ಮ ಪರಿಚಯ ಹೇಳಿದರು . ಊಟ ಆಗಿ ಸ್ವಲ್ಪ ವಿಶ್ರಾಂತಿ ನಡದಿತ್ತು ಶ್ರೀ ಆನಂದ ಕುಲಕರ್ಣಿ ಯವರ ಸೀಟಿ “ಏಳ್ರಿ ಏಳ್ರಿ “ನಾಲ್ಕ ಹೊಡಿತು ಅಂತು . ಅಲ್ಲೇ ಇದ್ದ ಶ್ರೀ ಬನ್ನಿ ಕಾಳಿಕಾಂಬಾ ಗೆ ನಮಸ್ಕಾರ ಮಾಡಿ ಹೊಂಟವಿ ನಮ್ಮ ಹಿರಿಯ ಪಾದಚಾರಿ ಬೆಳಗಾವಿ ಶ್ರೀ ಉದಯ ದೇಶಪಾಂಡೆ ಯವರು ವಾಟಿ ಹಳು ಹಳು ಛಲ…. ಅನ್ನಲಿಕತ್ತರು ಎಲ್ಲರ್ರಗೂ ಇನ್ನಷ್ಟು ಉತ್ಸಾಹ ಉಕ್ಕಿ ಬಂತು . ಶ್ರೀ ಬಡಿಗೇರ ಅವರಿಗೇ ಥ್ಯಾಂಕ್ಸ್ ಹೇಳಿ ನಮ್ಮ ದಿಂಡಿ ಮುಂದ ಹೊಂಟತು . ಸಣ್ಣಾಗಿ ಎಲ್ಲಾರ ಕಾಲು ಮಾತಾಡಲಿಕತ್ತಿದ್ದವು .ಕೆಲವೊಬ್ಬರಿಗೆ ಕಾಲಿಗೆ ಗುಳ್ಳಿನೂ ಆಗಿದ್ದವು.ನನಗೂ ಆಗಿದ್ದವು.ಪಾದಯಾತ್ರೆಗೆ ನರೆಗಲ್ಲ ಅಜಿತ,ನವನಗರದಿಂದ ನಾರಾಯಣ ಜೋಶಿ,ಧಾರವಾಡದಿಂದ ಶ್ರೀ ರಾಜೇಶ ಪಾಟೀಲ,ಚಿದಂಬರ ವಾಳ್ವೆಕರ,ಮಲ್ಹಾರ,ರವಿ,ಪ್ರಾಣೇಶ ದೇಶಪಾಂಡೆ,ಶಿಂಧೆ,ಹುಲಕೋಟಿ,ಶ್ರೀಮತಿ ಸುಧಾ ಹಂದಿಗೋಳ,ಮಾಧವಿ ಗೋಡಖಿಂಡಿ,ಶ್ರೀಗಾಯತ್ರಿ ಶಿಂಧೆ,ಶ್ರೀಮತಿ ಸುಂಕದ,ಶ್ರೀ ಮಿಲಿಂದ,ನವಲಗುಂದ,ಮತ್ತುದಾವಣಗೆರೆಯಿಂದ ಶ್ರೀಮತಿ ಭಾಗ್ಯಶ್ರೀ,ಹುಬ್ಬಳ್ಳಿ ಯಿಂದ ಶ್ರೀ ಪ್ರಕಾಶ ಕುಲಕಣ್ರಿ ಹಾಗೂ ಅತ್ಯಂತ ಕಿರಿಯ ಪಾದಯಾತ್ರಿ 15 ವರುಷದ ವೈಭವ ಗೋಡಖಿಂಡಿ,ರಾಮಚಂದ್ರ,ಸದಲಗಾದಿಂದ ಶ್ರೀ ಕುಲಕಣ್ರಿ ಬಂದಿದ್ದರು.ಒಟ್ಟು 50 ಪಾದಯಾತ್ರಿಗಳು ನಾವು.
ಪಾದಯಾತ್ರೆ ಒಂದ ದೊಡ್ಡ ಅನುಷ್ಠಾನ. ಇದಕ್ಕೆ ದೇವರ ಪ್ರೇರಣೆ, ಆಶೀರ್ವಾದ ಬೇಕೇ ಬೇಕು
ಅಂತು ಸಂಜೀ ಆರಕ್ಕೆ ಹಾರೋಬೇಳವಡಿ ಎಂಬ ಹಳ್ಳಿ ಮುಟ್ಟಿದವಿ . ಅವತ್ತು ನಡದದ್ದು ಒಟ್ಟು ೧೯ ಕಿ.ಮೀ. ಅಲ್ಲೇ ಊರಾಗ ಶ್ರೀ ವೀರಭದ್ರೇಶ್ವರ ಗುಡ್ಯಾಗ ನಮ್ಮ ಊಟ ಮತ್ತ ವಸ್ತಿ .ಸ್ವಲ್ಪ ಚಹಾ ಕುಡದ ರಾತ್ರಿ ಭಜನಿ ಎಂಟಕ್ಕೆ ಶುರು ಆತು.ಶ್ರೀ ಪ್ರಸನ್ನ ದತ್ತ ಭಜನಾ ಮಂಡಳಿ ಯಾ ಶ್ಲೋಕ, ಭಕ್ತಿ ಗೀತೆ ಆದ ಮ್ಯಾಲೇ ನಾನೂ ಧಾರವಾಡ ಕವಿ ಶ್ರೀ ಎನ್. ಕೆ . ಕುಲಕರ್ಣಿ ಬರೆದ “ದತ್ತ ಅತ್ರಿನಂದನ ನಿತ್ಯ ನಿರಂಜನ. …. ಹಾಡು ಹಾಡಿದೆ . ನಂತರ ನಮ್ಮ ಸಹ ಪಾದಯತ್ರಿ ಶ್ರೀ ದತ್ತ ನಾಡಗಿರ ಅವರಿಂದ ಚಿಂತನೆ ನಡಿತು.ಹಂಪಿಹೊಳಿಯವನೆ ಆದ ನಾನು (ವಿಜಯ.ಇನಾಮದಾರ) ಶ್ರೀ ದತ್ತ ಕ್ಷೇತ್ರ ಹಂಪಿಹೊಳಿ ಬಗ್ಗೆ ನಾಲ್ಕು ಮಾತು ಮಾತನಾಡಲು ಬಾಳ ಉತ್ಸುಕನಾಗಿದ್ದೆ,ಶ್ರೀ ಆನಂದ ಕುಲಕರ್ಣಿ ಯವರು ನನ್ನ ಕರದ ಬಿಟ್ಟರು.
ವಿಜಯ.ಇನಾಮದಾರ ರಿಂದ ಹಂಪಿಹೊಳಿ ಕ್ಷೇತ್ರ ವಿವರಣೆ
ನಾನು ಈಗಾಗಲೇ ಹೇಳಿದಂತೆ ವಿಸ್ತ್ರತವಾಗಿ ಶ್ರೀ ದತ್ತ ಕ್ಷೇತ್ರ ಹಂಪಿಹೊಳಿ ಯಾ ಬಗ್ಗೆ ಬರೋಬ್ಬರಿ ಇಪ್ಪತೈದ ನಿಮಿಷ ಹೇಳಿದೆ.ನಾವು ಹೊಂಟ ಶ್ರೀ ಕ್ಷೇತ್ರಕ್ಕೆ ಇಷ್ಟು ಇತಿಹಾಸ ಇದೆ ಮತ್ತು ಜಾಗ್ರತ ಸ್ಥಳ ಇದೆ ಎಂಬುದು ಗೊತ್ತಾಗಿ ಎಲ್ಲರಿಗೂ ಭಕ್ತಿ ತುಂಬಿದವರಾದರು.ಅವತ್ತಿನ ಆರತಿ ಆದ ಮೇಲೆ ಆ ಊರಿನ ಭಾವಿಕ ಮಂದಿ ತಯಾರಿಸಿದ ಸವಿಯಾದ ಊಟ ಮಾಡಿ ಮಲಕೊಂಡವಿ . ಬಾಳ ಮಂದಿಗೆ ದಣಿವು ಆಗಿದ್ದಕ್ಕೋ ಏನೋ ಅಂಥಾ ಏನ ನಿದ್ದಿ ಹತ್ತಲಿಲ್ಲ.
೨೫.೧೦.೨೦೧೫
ಇನ್ನೂ ಎರಡ ಹೋಡದಿಲ್ಲಾ ಒಬ್ಬೊಬ್ಬರ ಎದ್ದು ತಯಾರ ಆದವಿ. ಎಲ್ಲಾರೂ ಮುಂಜಾನೆ ೩:೪೫ ಕ್ಕೆ ತಯಾರ. ಆನಂದ ಸರ್ ಸಿಟಿ ನಾಲ್ಕಕ್ಕೆ ಹೊಡೆಯುದ ಕಾಯತಿದ್ದರು. ಮತ್ತೆ
“ದಿಂಡಿ ಜೋಡಿ ನಡಿ ನಡಿ ದತ್ತನ ಪಾದ ಹಿಡಿ ಹಿಡಿ
ಅನಕೋತ ಸವದತ್ತಿ ಕಡೆ ಹೆಜ್ಜಿ ಮುಂದ ಇಟ್ಟವಿ . ನಡು ನಡುವ ಶ್ರೀ ರಾಮ ರಕ್ಷಾ ,ಹನುಮಾನ ಚಾಲಿಸ ದತ್ತನ ಹಾಡು ಹಾಡುತ್ತಾ ಹೋಗುವಾಗ ವಂದ ನಾಯಿ ನಮ್ಮ ಜೋತಿನ ಹೊಂಟತು . ಎಷ್ಟು ವಿಚಿತ್ರ ಅಂದರ ಅಥವಾ ಆ ದೇವರ ಮಹಿಮಾನೋ ಏನೋ ಆ ನಾಯಿ ಬೆಳಗ ಆಗುತನಕ ನಮ್ಮ ಜೋತಿನ ಬಂತು ಮುಂದ ಹೋಗಿ ಹಿಂದ ಬರತಿತ್ತು. ಆ ದತ್ತಪ್ಪನ ನಮ್ಮನ ಕಾಯಲಿಕ್ಕೆ ಕಳಿಸಿದ್ದೇನೋ ಅನಸತು. ಬೆಳಗ ಆದ ಕೂಡಲೇ ನಾವು ಕೊಟ್ಟ ಉಪ್ಪಿಟ ತಿಂದು ಆ ನಾಯಿ ಹೊತು.ನಾವು ಸವದತ್ತಿ ಹತ್ತಿರ ಒಂದ ಹೊಲದಾಗ ಉಪ್ಪಿಟ ತಿಂದವಿ . ಅಲ್ಲೇ ಧಾರವಾಡ ನಿವಾಸಿ ಯೋಗ ಗುರು ಶ್ರೀ ಟಕ್ಕಳಕಿ ಯವರು ನಮ್ಮನ್ನ ಕೂಡಕೊಂಡ್ರು. ನಮ್ಮ ಜೊತಿ ಪಾದಯಾತ್ರೆ ಗೆ ಹೆಜ್ಜೆ ಹಾಕಿದರು ನಡು ನಡುವ ಸಣ್ಣ ಸಣ್ಣ ಆಸನ, ಪ್ರಾಣಾಯಾಮ ಮಾಡಿಸಿ ನಮ್ಮ ಸುಸ್ತು ಕಡಿಮಿ ಮಾಡ್ತಿದ್ರು .ಮತ್ತೆ ಹೊಂಟು ಸವದತ್ತಿ ಮುಟ್ಟಿದಾಗ ಮಧ್ಯಾಹ್ನ ಒಂದ ಹೊಡದಿತ್ತು . ನಮ್ಮ ಸಂಬಧಿಕ ಶ್ರೀ ವಿ. ಗೋಡಖಿಂಡಿ ಮನೆಯಲ್ಲಿ ಪಾನಕ ಸೇವಿಸಿ ಶ್ರೀ ಚಿದಂಬರ ದೇವಸ್ಥಾನ ಗುರ್ಲಹೊಸುರ.ಸವದತ್ತಿ ಮುಟ್ಟಿದ್ವಿ .ಶ್ರೇ ಚಿದಂಬರೇಶ್ವರ ದರ್ಶನ ತಗೊಂಡು ಧರ್ಮದರ್ಶಿ ಶ್ರೀ ದಂಡಪಣಿ ದಿಕ್ಷಿತ ಮಹಾರಾಜ ಅವರ ಮನೆಗೆ ಹೊದ್ವಿ. ಅವರು ಅಧ್ಭುತವಾಗಿ ನಮ್ಮನ್ನು ಬರಮಾಡಿಕೊಂಡರು . ನಂತರ ಶ್ರೀ ದಂಡಪಾಣಿ ಯವರಿಂದ ಶ್ರೀ ಪ್ರಸನ್ನ ದತ್ತ ಭಜನಾ ಮಂಡಳಿ ಯ ಭಜನಾ ಪುಸ್ತಕ ಬಿಡುಗಡೆ,ಪಾದಚಾರಿಗಳಿಗೆ ಸಮವಸ್ತ್ರ ವಿತರಣೆ (ನವನಗರ ಶ್ರೀ ನರೇಂದ್ರ ಕುಲಕರ್ಣಿ ಕೊಡುಗೆ)ಮತ್ತು ಅವರಿಂದ ಆಶೀರ್ವಚನ “ಪಾದಯತ್ರಿ ಪಾದಯತ್ರಾ ಮಾಡುವಾಗ ಭಗವಂತನ ನಾಮಸ್ಮರಣೆ ಮಾಡಬೇಕು,ಭಾರತೀಯ ಉಡುಪು ಧರಿಸಿದರೆ ಬಹಳ ಶ್ರೇಷ್ಟ.ಪಾದಯಾತ್ರೆಯಿಂದ ನಿಮಗೆಲ್ಲರಿಗೂ ಪುಣ್ಯ ಲಭಿಸಲಿದೆ” ಎಂದು ಆಶೀರ್ವಚಿಸಿದರು ನಂತರ ಎಲ್ಲರಿಗೂ ಸ್ನಾನ,ಊಟದ ವ್ಯವಸ್ಥೆ . ವಿಶ್ರಾಂತಿ ನಂತರ ಸಂಜಿ ನಾಲ್ಕ ಗಂಟೆಗೆ ಬಿಟ್ಟು ಶ್ರೀ ಸಬ್ನಿಸ ಅವರ ಶ್ರೀ ದತ್ತ ಮಂದಿರ ಭೆಟ್ಟಿ ಕೊಟ್ಟು ಭಜನಿ ಮಾಡಿ ಚಹಾ ಕುಡಿದು ಎಲ್ಲಮ್ಮನಗುಡ್ಡ ದ ಕಡೆ ಹೊಂಟವಿ.
ಎಲ್ಲಮ್ಮನಗುಡ್ಡ ಮುಟ್ಟಿದಾಗ ಸಂಜಿ ಏಳುವರಿ ಆಗಿತ್ತು. ಅವತ್ತ ನಾವು ನಡದಿದ್ದು ೨೬ ಕಿ.ಮೀ . ನಮ್ಮನ್ನ ಅವತ್ತು ಧಾರವಾಡದ ಶ್ರೀ ಸುರೇಶ ಜೋಶಿ ಕೂಡಿಕೊಂಡರು . ಶ್ರೀ ದೇವಿ ದರ್ಶನ ಅರ್ಭಾಟ ಆತು. ಸೀದಾ ಗರ್ಭ ಗುಡಿಗೆ ದರುಶನಕ್ಕೆ ಬಿಟ್ಟರು. ಎಲ್ಲರ ಹೆಸರ ತಗೊಂಡು ಪೂಜಾರ ರು ಸಂಕಲ್ಪ ಪೂಜಾ ಮಾಡಿಸಿದರು. ರಾತ್ರಿ ಸವದತ್ತಿ ಸಬ್ನಿಸ್ ಅವರು ನಮಗ ಅಡಗಿ ಕಟ್ಟಕೊಂಡ ಬಂದು ಪ್ರೀತಿಲೆ ಬಡಸಿದರು.
೨೬. ೧೦.೨೦೧೫
ಮುಂಜ ಮುಂಜಾನೆ ಲಗೂನ ಎದ್ದು ಸ್ನಾನ ಮಾಡಿ ಉಪಹಾರ ಸ್ಥಳ ಶ್ರೀ ತ್ರಿಕೂಟೆಶ್ವರ್ ದೇವಸ್ಥಾನ, ಹೂಲಿ ಮುಟ್ಟಿದಾಗ ಎಂಟ ಹೊಡದಿತ್ತು . ಅಲ್ಲೇ ಶ್ರೀ ವಿನಾಯಕ್ ಪಾಟೀಲ ರಿಂದ ಉಪಹಾರ್ ವ್ಯವಸ್ಥೆ . ಅದ್ಭುತ ದೇವಾಲಯ .ಮೂರು ಲಿಂಗಗಳು ಒಂದೇ ಕಡೆ ಸ್ಥಾಪಿಸಿದ್ದಾರೆ.
ಅಲ್ಲಿಂದ ಮುಂದ ಹೂಲಿಕಟ್ಟಿ ಬಂದು ನಮ್ಮ ಮಧ್ಯಾಹ್ನ ಸ್ಥಳ ಶಿರಸಂಗಿ ಗೆ ಬಂದ ಮುಟ್ಟಿದಾಗ ೧೨ ಹೊಡದಿತ್ತು . ಬಾಗಲಕೋಟೆಯ ಶ್ರೀ ಅರುಣ ದೇಸಾಯಿ ಬಂದು ಎಲ್ಲರಿಗೂ ಶುಭ ಕೊರಿದರು. ಅಲ್ಲಿ ಶ್ರೀ ಕಾಳೀಕಾ ದೇವಿ ದರ್ಶನ ತಗೊಂಡು ಸಂತ ಅವಿಭಕ್ತ ಕುಟುಂಬ ಶ್ರೀ ಚವ್ಹಾಣ ಮನೆಯಲ್ಲಿ ಪಾದಯಾತ್ರಿಗಳ ಪಾದಪೂಜೆ ಮಾಡಿ ಬಾಳಿಎಲಿ ಮ್ಯಾಲೆ ಊಟ ಬಾಳ ರುಚಿ ಮತ್ತು ಸಿರಸಂಗಿ ದೇಸಾಯಿ ವಾಡಾ ದಲ್ಲಿ ವಿಶ್ರಾಂತಿ .
ನಂತರ ಸಂಜಿ ನಾಲ್ಕ ಕ್ಕೆ ಬಿಟ್ಟು ಮುಳ್ಳೂರ ಗೆ ನಾವು ೬ಕ್ಕೆ ಬಂದವಿ.ರಾಮದುರ್ಗದ ಶ್ರೀ ವಾದಿರಾಜ್ ಭಟ್ ,ಶ್ರೀ ಗೋಡಖಿಂಡಿ ಮುಳ್ಳೂರಿನ ಶ್ರೀ ಆನಂದ ಕುಲಕರ್ಣಿ,ಶ್ರೀ ರಂಗಣ್ಣ ಕುಲಕರ್ಣಿ,ಶ್ರೀ ಅನಂತ್,ಶ್ರೀ ಎಲ್. ಎಸ್ ಕುಲಕರ್ಣಿಯವರು ಹಾಗೂ ಸಮಸ್ತ ಗ್ರಾಮದ ಹಿರಿಯರು ನಮ್ಮನ್ನು ಸ್ವಾಗತಿಸಿ ನಮ್ಮನ್ನು ನಮ್ಮ ಪಾದಯಾತ್ರೆಯ ಅಂತಿಮ ವಸ್ತಿ ಸ್ಥಳ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಕರಕೊಂಡು ಹೊದರು. ಹ್ಹಾ ಹ್ಹಾ ಎನ ರಮಣೀಯ ದೇವಸ್ಥಾನ ಸಾಕ್ಷಾತ ಶ್ರೀ ರಾಮ ಸ್ಥಾಪಿಸಿದ ಈಶ್ವರ ಲಿಂಗ ಮತ್ತು ಪಕ್ಕದಲ್ಲೇ ಶ್ರೀ ದುರ್ಗಾ ಮಾತಾ ಅಲ್ಲೆ ಗುಡ್ಡದಿಂದ ಖಾಯಂ ಹರಿಯುತ್ತಿರುವ ರಾಮತೀರ್ಥ. ಮುಳ್ಳೂರಿ ನ ಕುಲಕರ್ಣಿ ಮನೆತನ ಅಧ್ಭೂತ ವ್ಯವಸ್ಥೆ ಮಾಡಿದ್ದರು.ಅವತ್ತು ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಶ್ರೀ ನಾತು,ಶ್ರೀ ಕುಲಕರ್ಣಿ,ಶ್ರೀ ಓಕ ರವರು ನಮ್ಮನ್ನು ಕೂಡಿಕೊಂಡರು
೨೭. ೧೦. ೨೦೧೫ಮರುದಿನ ಬೆಳಿಗ್ಗೆ ಯಥಪ್ರಕಾರ ನಾಲ್ಕಕ್ಕೆ ಎದ್ದು ೮ ಗಂಟೆಗೇ ಸುರೆಬಾನ ಕ್ಕೆ ಬಂದಾಗ ಗ್ರಾಮಸ್ಥರ
ಅಭೂತ ಪೂರ್ವ ಸ್ವಾಗತಎಲ್ಲೆಡೆ ಸ್ವಾಗತದ ಬ್ಯಾನರ, ತೆಂಗಿನ ಗರಿ ಕಟ್ಟಲಾಗಿತ್ತು.
ಹೂವಿನ ಸುರಿಮಳೆ ಸುರಿಸಿ ಆರತಿ ಎತ್ತಿ ಸ್ವಾಗತಿಸಿದರು ಗ್ರಾಮದ ಹಿರಿಯರಾದ ಶ್ರೀ ರಾಮಣ್ಣ ,ಶ್ರೀ ಬಿಜಾಪೂರ ಶ್ರೀ ಬೇವಿನಕಟ್ಟಿ,ಶ್ರೀ ಶಂಕರಣ್ಣ ಮತ್ತು ಕುಟುಂಬ. ಮುಂದೆ ಸಣ್ಣ ಹಂಪಿಹೊಳಿ ಗ್ರಾಮಸ್ಥರು ಎಲ್ಲರಿಗೂ ಹಾಲು ಕೊಟ್ಟು ಸ್ವಾಗತಿಸಿದರು . ಹೀಗೆ ಪಾದಯಾತ್ರೆ ತನ್ನ ಗುರಿಯಾದ ಶ್ರೀ ದತ್ತ ಕ್ಷೇತ್ರ ಹಂಪಿಹೊಳಿ ತಲುಪಿದ್ದು ಸರಿಯಾಗಿ ೯ ಗಂಟೆ ಊರಿನ ತುಂಬಾ ಹಬ್ಬದ ವಾತಾವರಣ ಪಾದಚಾರಿಗಳೂ ಗ್ರಾಮ ಪ್ರದಕ್ಷಿಣೆ ಶ್ರೀ ವಿರುಪಾಕ್ಷೇಶ್ವರ ದರ್ಶನ ಮುಗಿಸಿ ದತ್ತ ಮಂದಿರ ಮುಟ್ಟಿದೆವು.ಶ್ರೇ ದತ್ತ ಸಂಸ್ಥೆ ಯಾ ಎಲ್ಲ ಹಿರಿಯರು ಶ್ರೀ ಎಲ್,ಎನ್.ಇನಾಮದಾರ ,ಶ್ರೀ ಎಸ್. ಎನ್. ಇನಾಮದಾರ ಶ್ರೀಎಸ್.ಎಸ್.ಇನಾಮದಾರಶ್ರೀ ಸಿ ಆರ್ ಗೋಡಖಿಂಡಿ ,ಶ್ರೀ ವಾಸುದೇವ್ ಗೋಡಖಿಂಡಿ, ಶ್ರೀ ಅನಂತ್ ಗೋಡಖಿಂಡಿ ,ಶ್ರೀ ವಿಲಾಸ್ ಇನಾಮದಾರ ಶ್ರೀ ಪಿ, ಜಿ,ಇನಾಮದಾರ, ಶ್ರೀ ಎನ್.ಎಸ್ ಇನಾಮದಾರ ಶ್ರೀ ರಾಜು ಇನಾಮದಾರ ಶ್ರೀ ಕೆ. ಜಿ ಇನಾಮದಾರ ಹಾಗು ಕುಲಕರ್ಣಿ,ಇನಾಮದಾರ ,ಗೋಡಖಿಂಡಿ ಬಂಧು ಅದ್ಭೂತ ಸ್ವಾಗತ ಕೊರಿದರು. ಭಜನೆ, ಅನಿಸಿಕೆ, ಆರತಿ ನೈವೇದ್ಯ ಮಹಾಪ್ರಸಾದ ಆಯಿತು.
ನನ್ನಿಂದ ಅನಿಸಿಕೆ
datta padaytra
ಶ್ರೀ ದತ್ತ ಸ್ವಯಂ ಭೂ ಉದ್ಭವ ಪಾದುಕಾ.
ಹೀಗೆ ನನ್ನ ಮೊದಲ ಶ್ರೀ ದತ್ತ ಪಾದಯಾತ್ರೆ ಅಧ್ಭೂತವಾಗಿ ಕೊನೆಗೊಂಡಿತು . ಶ್ರೀ ಗುರುದೇವ ದತ್ತ
ಎಲ್ಲರಿಗೂ ನಮಸ್ಕಾರ.
ವಿಜಯ.ಇನಾಮದಾರ ,ಧಾರವಾಡ