ದ್ಯಾಮವ್ವಳ ಜಾತ್ರೆ.
ದ್ಯಾಮವ್ವನ ಜಾತ್ರ್ಯಾಗ ನಾ ದೇವಿ ದರ್ಶನಕ ಅಂತ ಬಂದಿದ್ದೆ
ಲಂಗಾ ದಾವಣಿ ಉಟ್ಟು ನೀ ಗುಡಿ ಬಾಜೂಕ ನಿಂತಿದ್ದೆ
ಕಾಯಿ ಹೊಡಿಯಾಕಂತ ನಾ ಮೆಟ್ಟಲ ಏರಕುಂತಿದ್ದೆ
ಸೇವಂತಿ, ಜಾಜಿ ಹಿಡಿದು ನೀ ದೇವರ ಮುಂದೆ ನಿಂತಿದ್ದೆ
ಕಬ್ಬಿನ ಹಾಲು ಹೀರಕ್ಕಂತ ನಾ ಅಂಗಡಿ ಹೊಕ್ಕಿದ್ದೆ
ಗಾಜಿನ ಬಳಿ ಖರೀದಿಗಂತ ನೀ ಬಳಿಗಾರನ ಹಿಡಿದಿದ್ದೆ
ನನ ಮುಂದ ನೀ, ನಿನ ಮುಂದ ನಾ ಕಣ್ಣು ನೋಡಿದ್ವು
ಗಾಜಿನ ಗಿಲಾಸನಾಗ ನಿನ ಕೈ ಬಲು ಚೆಂದ ಕಾಣತಿದ್ವು
ಕಿವಿಯೋಲಿ ಹಿಡಿದು ನೀ ಓರೆ ನೋಟ ಬೀರಿದ್ದಿ
ರುಮಾಲು ಹಾಕೊ ನೆವದಾಗ ನಾ ನಿನ್ನ ನೋಡಿದ್ದೆ
ಬಸ್ಸಿಗ ಹೋಗಾಕಂತ ನೀ ಗಿಡದ ಬುಡಕಾ ನಿಂತಿದ್ದಿ
ನಸು ನಗುತಾ ನಾನು ಬಂದು ಬಾಜುಕ ಸರಿದಿದ್ದೆ
ಕೆಂಪನ ಲಂಗ, ಹಳದಿ ದಾವಣಿ ಹಿಡಿದು ನೀ ಮಣ್ಣಾಗ ರಂಗೋಲಿ ಹಾಕಿದ್ದಿ
ಒಪ್ಪಿಗಿ ಸೂಚನಾ ತಿಳಿದೂ ನಾ ಉಡಿಯಕ್ಕಿ ಜೊತಿ ನಿನ ಮನಿನ ಹೊಕ್ಕಿದ್ನಿ
ಸುರ ಸುಂದರಿ ನೀನ ನನಗೆ ಜೀವನ ಜೊತೆಗಾತಿ
ದ್ಯಾಮವ್ವ ಹಾಕ್ಯಾಳ ಗಂಟು ಆದ್ವಿ ಇಬ್ಬರು ಬಾಳ ಸಂಗಾತಿ.
1 Comment
Nuce