ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು

ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು

ಮುತ್ತು ರತ್ನಗಳನು
ಬಳ್ಳದಿಂದ ಅಳೆದು ಮಾರಿದ
ದತ್ತಿ ದಾನ ಧರ್ಮಗಳಿಗೆ
ತಮ್ಮ ಧನವ ತೂರಿದ
ಆಳರಸರ ವೈಭವದ ಚಿತ್ರ ನೆನೆದಾಗಲೆಲ್ಲ ನೆನಪಾಗುವದು
ವಿಜಯನಗರ ವೈಭವ..
ಅದು ಅಂಥದಿಂಥದಲ್ಲ…
ತನ್ನದೇ ಆದ ಇತಿಹಾಸ
ನಿರ್ಮಿಸಿದ ಕಾಲ..
ಇದೀಗ ಅದು ಹಾಳು ಹಂಪಿ..

ಇವೆರಡನ್ನೂ ನೆನೆದಾಗಲೊಮ್ಮೆ
ಯೌವನ, ಮುಪ್ಪುಗಳು
ಬೆನ್ನಲ್ಲೇ ನೆನಪಾಗುತ್ತವೆ..

ಯಾಕಂದ್ರೆ

ಇಡೀ ಜಗವನ್ನೇ ಕಾಲಬುಡದಲ್ಲಿ
ಹಾಕಿಕೊಂಡು ಆಕಾಶದಲ್ಲಿಯೇ
ಸದಾ ತೇಲಾಡುವ ಹರಯಕ್ಕೇ
ಮುಪ್ಪನ್ನೇ ಮರೆಸಬಲ್ಲ ಯಾವ ಮಾಯೆ
ಮುಸುಕುತ್ತದೆ ಎಂಬುದೇ ಒಂದು ಸೋಜಿಗ..

ವಿಜಯನಗರ ವೈಭವದ ಹರಯಕ್ಕೆ
ಹಂಪಿಯ ಶಿಥಿಲತೆಯ ವಾಸ್ತವವನ್ನ
ತಿಳಿಪಡಿಸುವದಾದರೂ ಹೇಗೆ….!!!??

Leave a Reply