“ಗೀರು”

ಈ ಕೃತಿ ಹದಿನಾಲ್ಕು ಕಥೆಗಳ ಗುಚ್ಛ. ಲೇಖಕಿಯ ಎರಡನೇ ಕಥಾಸಂಕಲ ಕೂಡ ಹೌದು. ಇದಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿಯೂ ಲಭಿಸಿದೆ. ಇಲ್ಲಿರುವ ಕಥೆಗಳು ಓದುಗನ ಕುತೂಹಲವನ್ನು ಭಂಗಗೊಳಿಸುವುದಿಲ್ಲ.ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು ಈ ಕಥೆಗಳಲ್ಲಿವೆ. ಇಲ್ಲಿರುವ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ ಓದುಗನನ್ನು ಖಂಡಿತ ಕಾಡುತ್ತವೆ.‘ಸ್ಫೋಟ’, ‘ನ್ಯೂಸ್‌ ಬೀ’, ‘ಚೌಕಟ್ಟು’, ‘ಭಾಗೀಚಿಕ್ಕಿ’, ‘ಮೊಹರು’, ‘ಮುಚ್ಚಿದ ಬಾಗಿಲು’ ಕಥೆಗಳಲ್ಲಿ ಪಾತ್ರಗಳನ್ನು ಲೇಖಕಿ ಮುಟ್ಟಿ ಮಾತನಾಡಿಸಿದ್ದಾರೇನೊ ಎನ್ನುವ ಭಾವ ಮೂಡುತ್ತದೆ. ಓದುವ ನಮ್ಮೊಳಗನ್ನೂ ಪಾತ್ರಗಳು ತಣ್ಣಗೆ ಆವರಿಸಿಕೊಳ್ಳುವಂತೆ ಮಾಡುತ್ತವೆ. ಕಥನ ಕಟ್ಟುವ ಶೈಲಿಯಿಂದ ಇಲ್ಲಿನ ಕಥೆಗಳು ಹೆಚ್ಚು ಗಮನವನ್ನೂ ಸೆಳೆಯುತ್ತವೆ.
ಲೇಖಕಿ:ದೀಪ್ತಿ ಭದ್ರಾವತಿ
ಪ್ರ: ಆವರ್ತ ಪಬ್ಲಿಕೇಷನ್‌, ಭದ್ರಾವತಿ<ಮೊ: 7483486300

courtsey: prajavani.net

https://www.prajavani.net/artculture/book-review/geeru-635897.html

Leave a Reply