ಕಲಿಕೆ

ಕಲಿಕೆ
ಬಾನಾಡಿಗಳಂತೆ ನನಗೂ ರೆಕ್ಕೆ ಬೇಕು
ಅವುಗಳಂತೆ ಹಾರಲು ಗರಿಗಳು ಬೇಕು.
ಗಿಡ ಮರ ಟೊಂಗೆಯಲಿ ಕೂಡಲು ಬೇಕು.
ಹಕ್ಕಿಗಳಂತೆಯೆ ಪ್ರಕೃತಿ ಪ್ರೇಮವನು ಬೆಳೆಸಲು ಬೇಕು.
ನೂಲು ನಾರಿನಲಿ ಗೂಡನು ಕಟ್ಟಲು ಬೇಕು
ಸರಳತೆಯ ಪಾಠ ಕಲಿಯಲು ಬೇಕು.
ಪುಟ್ಟ ಮರಿಗಳಿಗೆ ಗುಟುಕನು ನೀಡಲು ಬೇಕು.
ಹಾಗೇ, ಮಮತೆಯ ಪಾಠ ಕಲಿಯಲು ಬೇಕು.
ಜಾಗ್ರತೆಯಿಂದಲಿ ಮೊಟ್ಟೆಯ ಕಾಯಲು ಬೇಕು.
ಜವಾಬ್ದಾರಿಯ ಅರಿವನು ಮೈದಳೆಯಲು ಬೇಕು.
ಬಾನೆತ್ತರಕೆ ಸುಯ್ಯನೆ ಹಾರಲು ಬೇಕು.
ಗುರಿ ಮುಟ್ಟುವ ಪ್ರತಿಜ್ಞೆಗೆ ಹೆಜ್ಜೆ ಹಾಕಲು ಬೇಕು.
ಸಂಜೆಯ ಗುಂಪಲಿ ಜೊತೆ ನಾ ಸಾಗಬೇಕು.
ಕೂಡಿ ಬಾಳುವುದನು ಕಲಿಯಲು ಬೇಕು.
ಚಿಂವ್, ಚಿಂವ್, ಕೀಂ, ಕೀಂ, ಗಾಯನ ಹಾಡಲು ಬೇಕು.
ಸಕಲ ಕಲೆಗಳ ಗೌರವಿಸಲು ಬೇಕು.
ಹಾರುವ ಸಾಲಿನ ನೀತಿಯ ಸಾಲಲಿ ನಾನಿರಬೇಕು.
ಹಿರಿಕಿರಿಯರ ಗೌರವ ಪಾಠ ಅರಿಯಲು ಬೇಕು.
ಬಣ್ಣ ಬಣ್ಣದ ಚಿತ್ತಾಕರ್ಷಕ ಹಕ್ಕಿ ನಾನಾಗಬೇಕು.
ವೈವಿಧ್ಯತೆಯಲಿ ಏಕತೆ ತಿಳಿಯಲು ಬೇಕು.
ಸಕಲ ಜೀವಿಗಳಲೂ ಪಾಠವ ಕಲಿಯಲು ಬೇಕು.

 

Leave a Reply