ಲೋಕ ವ್ಯಾಪಾರಕು
ಎನಗು ಸಂಬಂಧವಿಲ್ಲ
ಸುರಿದು ಮುಳುಗಿಸುವಂಥ
ಛಲವೇನು ಎನಗಿಲ್ಲ
ಹರಿಯುತಿದ್ದೆ ಹಿಂಗುತಿದ್ದೆ
ಸೇರುತಿದ್ದೆ ನೆದೊಡಲ
ಹಿಡಿದು ನಿಲಿಸುವರಿಲ್ಲ
ಗಿಡಮರಗಳುಳಿದಿಲ್ಲ
ಹರಿದೆಂದಿನಂತಾನು
ಸೇರೆ ಸಾಗರವನ್ನು
ರವಿ ಸೆಳೆದು ಕರೆದೊಯ್ದ
ನೀಲ ಮುಗಿಲಿಗೆ ತಾನು
ಹಗುರವೇ ನಾನೇನು
ಹಿಡಿಯಲಾರದ ಭಾನು
ಬಲಮೀರಿ ಹಿಡಿದಿದ್ದ
ತೋಳ ಸೆಳೆತದ ತನಕ
ಯಾರ ಹಣೆಬರಹ
ಹೇಗಿತ್ತೋ ಏನೋ
ಹೀಗಾಯತಲ್ಲ ಇದೆ
ವಿಧಿಬರಹವೇನೋ