ಅಮ್ಮ, ಮಾತೆ, ಜನನಿ, ತಾಯಿ, ಅವ್ವ
ಮಾತೆ ಶಬ್ಧ ವಿಶಾಲ ಅಘಾದ
ಅಮ್ಮ ಎಂಬುದೆ ಅಪಾರ ಮಮತಾ
ಮಾತೆ ಅಪ್ಪುಗೆಯ ತೊಳ್ಬಂದಿ ಸಪ್ತಸಾಗರ
ಮಾತೆಯ ಲಾಲಿ ಅನುರಣಿಸೆ ನಿತ್ಯ ವೇದಮಂತ್ರ
ನವ ಮಾಸದೊಳು ಹೊತ್ತ ಭಾರ
ತೀರಿಸಲೆಂದು ಆಕೆಯ ಋಣಭಾರ.
ಮಾತೆಯ ಮಡಿಲು ಪ್ರೇಮದಾಗರ
ಮಾತೆಯ ಚುಂಬನ ‘ಪ್ರೇಮ’ದ ಸೃಷ್ಠಿ
ಕರುಣಾಸಾಗರ ಆಕೆಯ ದೃಷ್ಠಿ
ಅಭಯ ಹಸ್ತ ನಿತ್ಯರಕ್ಷ ಭವಿಷ್ಯಕೆ
ಮಾತೆ ಒಲವೆ ಸಿಹಿ ಜೀವನನೌಕೆ.
ಮಾತೆಯ ತಾಪ ಪಾರ್ವತಿ ಸ್ವರೂಪ
ದುಷ್ಠತನವ ಸುಡುವಲ್ಲಿ ಕಾಳಿರೂಪ
ಮೊದಲ ಗುರುವು ತಾ ಸರಸ್ವತಿ ಪ್ರತಿರೂಪ.
ಸದ್ಗುಣ ಕಲಿಸುವ ಶಾರದೆಯ ಕೀರ್ತಿ
ನೋವ ಸಹಿಸುವ ಶಾಂತ ಮೂರ್ತಿ
ಸಂಕಟದಲಿ ಒಂದೇ ಆಲಿಂಗನ ಸಾಕು
ಕರುಳ ಬಳ್ಳಿಗೆ ಅವಳೇ ಸುಂದರ ಬದುಕು
ಮಾತೆಯ ನಿಲುವು ಶಿಖರದಂತ್ಯಕು ಮಿಗಿಲು
ಪೋಷಣೆಯಲಿ ಮಾಡುವಳು ದಿಗಿಲು
ಪಾದಸ್ಪರ್ಷಾದಿ ಮಾತ್ರವೆ
ಪಾಪಕರ್ಮಗಳ ಅಂತ್ಯ
ಮಾತೆಯ ಗರ್ಭವೆ ಬ್ರಹ್ಮಾಂಡವು
ಜನ್ಮದಾತೆಯೆ ನಿಜ ದೈವವು
ಎನಿತು ನಿತ್ಯ ಸತ್ಯವು.