ಆಹಾ!! ಇಬ್ಬನಿ
ನಡುನಡುಗುತ ಗ್ರೀಷ್ಮನು ಮೈ ಛಳಿ ತಂದಿಹ.
ಬಾನು ಭುವಿಯು ಒಂದೇ ಮಾಡಿಹ.
ಎಲ್ಲೆಡೆ ಇಬ್ಬನಿ ಹಾಸನು ಹಾಸಿಹ
ಕಣ್ಣೆ ಹಬ್ಬದ ಸೊಗಸನು ತಂದಿಹ
ಹಕ್ಕಿಗಳೆಲ್ಲಕೂ ಇರುಳು ಬೆಳಕಿನ ಗೊಂದಲ
ಸ್ಥಬ್ಧವಾಗಿಯೆ ಹಾರಾಡಿವೆ ಪಕ್ಷಿಸಂಕುಲ
ಚಿಗುರೆಲೆ ಮೇಲೆ ಮುತ್ತಿನ ಮಾಲೆ
ಹನಿಗಳುರುಳಿ ತಂಪಾಗಿದೆ ಇಳೆ.
ಬೆಟ್ಟ ಗುಡ್ಡಗಳಲಿ ದಟ್ಟ ಹೊಗೆಯಂತೆ
ಕಂಡಿರೆ ಮುಸುಕನೆ ಹಾಕಿರುವಂತೆ.
ದಿನಕರನಿಗಿದು ನೆರಳು ಬೆಳಕಿನ ಆಟ
ಗ್ರೀಷ್ಮನ ಮಾಯಾ ಜಾಲದ ಮಾಟ.
ಧರೆಯ ಕಾಣಲು ಕಿರಣಗಳ ಓಟ.
ಪರಿಸರವೆಲ್ಲ ಕಣ್ಮರೆಯಾದ ಭಾಸಕೆ
ಎಲ್ಲೊ ಅಂಬರದ ಅನುಭವ ಜಗಕೆ
ಸ್ವರ್ಗದ ಹಾದಿಯೆ ? ಎನ್ನುವ ಹೋಲಿಕೆ
ನೋಟಕೆ ಮಾತ್ರ ಮಬ್ಬು ಹಾದಿ
ಸಾಗುತಿರೆ ತೆರೆವುದು ಮಂಜಿನ ಪರಿದಿ
ಮೂಡಣದಲಿ ರವಿ ಇಣುಕಲು ಮೆಲ್ಲಗೆ
ಬಿಸಿ ಕಿರಣಗಳದು ಮುಟ್ಟತಿರೆ ಧರೆಗೆ
ಮಂಜಿನ ತೆರೆಯದು ಸರಿಯಿತು ಇಲ್ಲಿಗೆ
ಋತುಗಳ ವೈಭವ ಭುವನ ತಾಯಿಗೆ
ಎಲ್ಲವೂ ಸೋಜಿಗ ಈ ಜಗದೊಳಗೆ.
ಆಹಾ!! ಇಬ್ಬನಿ
You must be logged in to post a comment.
2 Comments
ಚೆನ್ನಾಗಿದೆ
ಚೆನ್ನಾಗಿದೆ – ನಮ್ಮ ಧರೆ ಎಷ್ಟೊಂದು ಸುಂದರ ಅಲ್ವ ! ಆ ರವಿಯೂ ಇದ ನೋಡಲು ಪ್ರತಿದಿನ ಓಡೋಡಿ ಬರುವನು 🙂