ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ

ಅದ್ಭುತ ಜೀವಾವಾಸ ಅಂಡಮಾನ್‌ ಪ್ರಕೃತಿ ಪ್ರೇಮಿಯ ಪ್ರವಾಸ ಕಥನ

ಲೇಖಕ : ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ರೂ : 135

ಅಂಡಮಾನ್‌ ದ್ವೀಪದ ಕಿರುಪರಿಚಯ ಕೊಡುತ್ತಲೇ ಪ್ರವಾಸಿಗನ ಕಣ್ಣಿನಲ್ಲಿ ದ್ವೀಪದ ಒಟ್ಟಂದವನ್ನು ಹಿಡಿಯುವ ಪ್ರಯತ್ನ ಈ ಪುಸ್ತಕವಾಗಿದೆ. ಕೇವಲ ಭೌಗೋಳಿಕ ವಿವರ, ಇತಿಹಾಸ, ಸಂಸ್ಕೃತಿ ಇಂತಹ ವಿವರಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಪುಸ್ತಕದ ಓದು ಅಂಡಮಾನ್‌ ಪರ್ಯಟನೆಯ ಅನುಭವ ಕಟ್ಟಿಕೊಡುತ್ತದೆ.

ಸುಂದರ ವರ್ಣಚಿತ್ರಗಳು, ಮನ ನಡುಗುವಂತೆ ಮಾಡುವ ಕಾಲಾಪಾನಿಯ ಸೆಲ್ಯುಲರ್‌ ಜೈಲು, ಮೈ ನವಿರೇಳಿಸುವಂತಹ ಸಮುದ್ರ ತಡಿಯ ಯಾನ, ಆತಂಕ ಮತ್ತು ರೋಮಾಂಚನ ಉಂಟು ಮಾಡುವಂತಿವೆ.

ಪ್ರವಾಸ ಕೈಗೊಳ್ಳುವವರಿಗೆ ಒಂದು ಕೈಮರವಾಗಿಯೂ, ಪ್ರವಾಸ ಕೈಗೊಳ್ಳಲಾಗದವರಿಗೆ ಕುಳಿತಲ್ಲಿಯೇ ದರ್ಶನ ಮಾಡಿಸುವ ಮಾರ್ಗದರ್ಶಿಯಾಗಿಯೂ ದ್ವಿಪಾತ್ರವಹಿಸುವಲ್ಲಿ ಈ ಪುಸ್ತಕ ಯಶಸ್ಸು ಕಾಣುತ್ತದೆ. 

ವಿಜ್ಞಾನ ಲೇಖನಗಳನ್ನು ಬರೆದು ಹೆಸರು ಮಾಡಿರುವ ಸುಮಂಗಲಾ ಮುಮ್ಮಿಗಟ್ಟಿ ಈ ಪುಸ್ತಕವನ್ನು ಅಚ್ಚುಕಟ್ಟಾಗಿ ಹೊಂದಿಸಿದ್ದಾರೆ. ಪ್ರವಾಸಿಗರಿಗೆ ಅರಿವನ್ನೂ, ಹೋಗಲಾಗದವರಿಗೆ ಅನುಭವವನ್ನೂ ಒಟ್ಟೊಟ್ಟಿಗೆ ನೀಡುವ ಪುಸ್ತಕ.

Courtesy : Prajavani.net

http://www.prajavani.net/news/books/2017/09/23/521795.html

Leave a Reply