- -40%
Seasons Heart Beat
0Original price was: ₹50.00.₹30.00Current price is: ₹30.00.It is a collection of Haiku Poems by G.R. Parimala Rao.
- -40%
ನಂದನ ವನ
0Original price was: ₹60.00.₹36.00Current price is: ₹36.00.ನಂದನ ವನ
ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ. - -40%
ಗರ್ಭಗುಡಿಯ ಶಿಶು ಚೇತನ
0Original price was: ₹20.00.₹12.00Current price is: ₹12.00.ಗರ್ಭಗುಡಿಯ ಶಿಶು ಚೇತನ
ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ. - -40%
ಜಲಪಾತ
0Original price was: ₹80.00.₹48.00Current price is: ₹48.00.ಜಲಪಾತ
ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ! - -40%
ಝೆನ್ ಹಾಯಿಕು
0Original price was: ₹50.00.₹30.00Current price is: ₹30.00.ಝೆನ್ ಹಾಯಿಕು
ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
-ಜಿ. ಆರ್. ಪರಿಮಳಾ ರಾವ್ - -40%
ಮುತ್ತಿನ ಮಳೆ
0Original price was: ₹80.00.₹48.00Current price is: ₹48.00.ಮುತ್ತಿನ ಮಳೆ
ಹನಿಗವನಗಳು
ಶ್ರೀಮತಿ ಜಿ. ಆರ್.ಪರಿಮಳಾರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಇವರ ಸಾಮಾಜಿ ಕಾಳಜಿ ತಮ್ಮ ಕವಿತೆಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂದಿನ ಸಾಮಾಜಿಕ ಬದುಕಿಗೆ ಇದು ತೀರಾ ಪ್ರಸ್ತುತವೂ ಆಗಿದೆ.
ಬಹಿರಂಗದ ವಾಸ್ತವದ ಮಜಲಿನಿಂದ ಅಂತರಂಗದ ಆತ್ಮ ಶೋಧದ ಪ್ರಪಂಚಕ್ಕೆ ಕಾಲಿಡುತ್ತಿರುವ ಇವರ ಕಾವ್ಯ ಪ್ರಕೃತಿಯ ಮೋಡಿಯಲ್ಲಿ ಸಿಲುಕಿ ಕಲ್ಪನೆಯ ವರ್ಣಮಯ ಲೋಕದಲ್ಲಿ ವಿಹರಿಸಿ ಕೊನೆಗೆ ಒಳ ಹುಡುಕಾಟದ ಭಾರತೀಯ ಸಂಸ್ಕಾರವೇ ಇಲ್ಲಿನ ಕಾವ್ಯಭಿವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. - -40%
ಮಿನುಗು ದೀಪ
0Original price was: ₹35.00.₹21.00Current price is: ₹21.00.ಮಿನುಗು ದೀಪ
ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ. - -40%
ಅಲೆಯ ಆಲಾಪ
0Original price was: ₹35.00.₹21.00Current price is: ₹21.00.ಅಲೆಯ ಆಲಾಪ
ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
ಅಲೆಯ ಆಲಾಪ
ಮುಕ್ಕಾಲು ಪದ್ಯಗಳು
ಹೈಕು – ಹಂದರ - -40%
ಅಂತರಂಗಯಾನ
0Original price was: ₹50.00.₹30.00Current price is: ₹30.00.ಅಂತರಂಗಯಾನ
ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!