ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.

  • -40%

    ಅಕ್ಷರ ಚಿತ್ರಗಳು

    0

    ಅಕ್ಷರ ಚಿತ್ರಗಳು

    ಇದು ಹಿರಿಯ ಲೇಖಕರ ವ್ಯಕ್ತಿ ಚಿತ್ರಗಳನ್ನು ಒಳಗೊಂಡಿದೆ.

    Original price was: $1.56.Current price is: $0.94.
    Add to basket
  • -40%

    ಒಂದು ಪುಟದ ಕಥೆ

    (3.00)
    1

    ಒಂದು ಪುಟದ ಕಥೆ
    (ಆತ್ಮಕಥನ)

    ಒಂದು ಪುಟದ ಕಥೆ ಇದು ಶ್ರೀ ವಿ.ಎಸ್. ಖಾಂಡೇಕರ ಅವರ ಆತ್ಮಕಥೆಯಾಗಿದೆ.

    Original price was: $5.40.Current price is: $3.24.
    Add to basket
  • -52%

    ಸಮಾಹಿತ-ಶಿಶಿರ ಸಂಚಿಕೆ ೨೦೧೮

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ಶಿಶಿರ ಸಂಚಿಕೆ
    ಸಂಪುಟ-3 ಸಂಚಿಕೆ-2
    ಮಾರ್ಚ – ಎಪ್ರಿಲ್ 2018

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.58.
    Add to basket
  • -52%

    ಸಮಾಹಿತ-ಹೇಮಂತ ಸಂಚಿಕೆ ೨೦೧೮

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ಹೇಮಂತ ಸಂಚಿಕೆ
    ಸಂಪುಟ-3 ಸಂಚಿಕೆ-1
    ಜನವರಿ – ಫೆಬ್ರವರಿ 2018

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.58.
    Add to basket
  • -40%

    ತುಕ್ಕಪ್ಪಾ ಮಾಸ್ತರ

    0

    ತುಕ್ಕಪ್ಪಾ ಮಾಸ್ತರ
    (ಕತೆಗಳು)

    ಶ್ರೀ ಚಂದ್ರಕಾಂತ ಕುಸನೂರ

    ಈ ಕೃತಿಯು ಶ್ರೀ ಚಂದ್ರಕಾಂತ ಕುಸನೂರರ ೮ ವಿಭಿನ್ನ ಕತೆಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -40%

    ಮೂಕ ಹಕ್ಕಿಯ ಹಾಡು

    0

    ಮೂಕ ಹಕ್ಕಿಯ ಹಾಡು
    (ಆತ್ಮಕಥನ)

    ಕನ್ನಡಕ್ಕೆ
    ಡಾ. ಎನ್. ಜಗದೀಶ್ ಕೊಪ್ಪ

    ಪಾಕಿಸ್ತಾನದ ಹೆಣ್ಣು ಮಗಳು ಮುಕ್ತರ್ ಮಾಯಿಯ ಆತ್ಮಕಥನ `ಮೂಕ ಹಕ್ಕಿಯ ಹಾಡು’.

    ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

    Original price was: $1.32.Current price is: $0.79.
    Add to basket
  • -52%

    ಮೊಲೆವಾಲು ನಂಜಾಗಿ

    0

    ಮೊಲೆವಾಲು ನಂಜಾಗಿ

    ಕತೆಗಳು

    ಶ್ರೀ ಮಲ್ಲಿಕಾರ್ಜುನ ಹಿರೇಮಠ

    ‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ. 

    Original price was: $1.80.Current price is: $0.86.
    Add to basket
  • -40%

    ಮರುಭೂಮಿಯ ಹೂ

    0

    “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ

    ಕನ್ನಡ ಅನುವಾದ
    ಡಾ. ಎನ್. ಜಗದೀಶ್ ಕೊಪ್ಪ

    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.

    Original price was: $1.56.Current price is: $0.94.
    Add to basket
  • -52%

    ಧಾತು

    0

    ಮೊಗಸಾಲೆಯವರ ಹೊಸ ಕಾದಂಬರಿ ‘ಧಾತು’  ಕಥನ ಕ್ರಮದಲ್ಲಿ ಪಲ್ಲಟವೊಂದನ್ನು ಇದು ಸೂಚಿಸುತ್ತದೆ.  ಎಂದಿನಿಂದಲೂ ಎಲ್ಲ ಕಲಾಪ್ರಕಾರಗಳನ್ನೂ ನಿರಂತರವಾಗಿ ಕಾಡುತ್ತಿರುವ ಗಂಡು ಹೆಣ್ಣಿನ ಸಂಬಂಧವನ್ನು ಇದು ಧಾತುವಾಗಿ ಹೊಂದಿದೆ. ಆಧುನಿಕತೆಯೇ ಮೂಲವಾಗಿ ಬದಲಾಗುತ್ತಿರುವ ಬದುಕಿನ ವಿನ್ಯಾಸವನ್ನು ಇದು ಶೋಧಿಸಲೆಳಸುತ್ತದೆ.

    Original price was: $2.16.Current price is: $1.04.
    Add to basket
  • -50%

    ಸಮಾಹಿತ-ವರ್ಷಾ ಸಂಚಿಕೆ-೨೦೧೭

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ವರ್ಷಾ ಸಂಚಿಕೆ
    ಸಂಪುಟ-೨
    ಸಂಚಿಕೆ-೫
    ಸಪ್ಟಂಬರ್ – ಅಕ್ಟೋಬರ್ ೨೦೧೭

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಸಮಾಹಿತ ಸಪ್ಟಂಬರ್ – ಅಕ್ಟೋಬರ್ ೨೦೧೭
    ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ…
    ಗಾಂಧಿ ಶಾಂತಿ ಮಾರ್ಗ : ಗಾಂಧಿ ಅಹಿಂಸಾ ಮಾರ್ಗವು ಸರಕಾರದ ದಬ್ಬಾಳಿಕೆ ನೀತಿಯೊಂದಿಗೆ ಹೊಂದಾಣಿಕೆ ಆಗಬಹುದೆ?
    “ಮುಲಕ್ಕರಂ” ಪ್ರತಿಭಟಿಸಿ ಬಲಿಯಾದ “ನಂಗೇಲಿ”ಯ ನೈಜ ಕಥೆ
    ವೀರಣ್ಣ ಮಡಿವಾಳ ಅವರ ಆರು ಕವಿತೆಗಳು…
    ತಲ್ಲಣ, ವಿಸ್ಮಯದ ಸಾಮಾಜಿಕ ಧಾರ್ಮಿಕ ರಾಜಕಾರಣ…
    ಸಂಧ್ಯಾದೇವಿ
    ಮೈತುಂಬಿ ಮನತುಂಬಿ ಹಾಡಿದ ವರಕವಿ ಬೇಂದ್ರೆಯವರ ಶ್ರಾವಣ ಗೀತಗಳು
    ಕ್ಸು ಲಿಷೀಯ ಐದು ಕವಿತೆಗಳು
    ತತ್ವಪದಗಳಲ್ಲಿ ಅನುಭಾವದ ಸ್ವರೂಪ ಹಾಗೂ ಹಂತಗಳು
    ಎಚ್.ಎಸ್.ವೆಂಕಟೇಶಮೂರ್ತಿಯವರ “ಋುಗ್ವೇದ ಸ್ಫುರಣ’’ ಕನ್ನಡದ ಕನ್ನಡಿಯಲ್ಲಿ ಋುಗ್ವೇದ “ಸ್ಫುರಣ’’
    ಅಗೆವಾಗ್ಗೆ – ಸಿಕ್ಕಿದ್ದು…
    ಘನಾಕೃತಿವಾದ – ಕ್ಯೂಬಿಸಂ ಮತ್ತು ಮುಖಪುಟದ ಚಿತ್ರ

    Original price was: $1.20.Current price is: $0.60.
    Add to basket
  • -50%

    ಸಮಾಹಿತ-ಗ್ರೀಷ್ಮ ಸಂಚಿಕೆ ೨೦೧೭

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ಗ್ರೀಷ್ಮ ಸಂಚಿಕೆ
    ಸಂಪುಟ-೨ ಸಂಚಿಕೆ-೪
    ಜುಲೈ – ಆಗಸ್ಟ್ ೨೦೧೭

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -52%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: $2.04.Current price is: $0.98.
    Add to basket