ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
-
-10%
ಅವ್ಯಕ್ತ
0ಅವ್ಯಕ್ತ:
ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.
-
-10%
ರಾಕ್ಷಸ-ತಂಗಡಿ
0ರಾಕ್ಷಸ-ತಂಗಡಿ
ಗಿರೀಶ ಕಾರ್ನಾಡ ಅವರು ರಚಿಸಿದ ನಾಟಕ.
-
-10%
ಕೇತಕಿಯ ಬನ
0ಕೇತಕಿಯ ಬನ
ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ . -
-40%
ಸೋನಾಟಾ, ಧರ್ಮಪುತ್ರ ವಾಸಾಂಸಿ ಜೀರ್ಣಾನಿ
0ಸೋನಾಟಾ, ಧರ್ಮಪುತ್ರ ವಾಸಾಂಸಿ ಜೀರ್ಣಾನಿ:
ಶ್ರೀ ಮಹೇಶ ಎಲಕುಂಚವಾರ ಅವರ ‘ಸೊನಾಟಾ ಧರ್ಮ ಪುತ್ರ ವಾಸಾಂಸಿ ಜೀರ್ಣಾನಿ ‘ ಮರಾಠಿ ನಾಟಕವನ್ನು ಗಿರೀಶ ಕಾರ್ನಾಡರು ಕನ್ನಡಕ್ಕೆ ಅನುವಾದಿಸಿದ್ದಾರೆ .
-
-40%
ಸೇಡಿಯಾಪು ನೆನಪುಗಳು
0ಈ ಪುಸ್ತಕವು ಪಂಡಿತ ಸೇಡಿಯಾಪು ಕೃಷ್ಣ ಭಟ್ಟ ಅವರ ಜೀವನದ ಅತೀ ಸಂಕ್ಷಪ್ತ ದೃಶ್ಯ ಸಾಗರದ ಬದಲು ಹನಿ ಮಾತ್ರ ಆದರೆ ಈ ಹನಿ ಪೃವೃತ್ತ ಧರ್ಮವನ್ನು ಭೋಧಿಸುವ ಜೀವನ ಸಾರ ಬಡತನ ಕಾಯಿಲೆ ಶಿಕ್ಷಣಾವಕಾಶರಾಹಿತ್ಯ ಪ್ರತಿಕೂಲ ಪರಿಸರ ಎಳೆಹರೆಯದ ಹುಡುಗನನ್ನು ಚಿರ ಅಂಧಕಾರಕ್ಕೆ ತಳ್ಳಲು ಈ ಒಂದೊಂದೇ ಸಾಕು. ಆದರೆ ಅವನ್ನು ಎದುರಿಸಿ ಅನೇಕ ಸಂಧರ್ಭಗಳಲ್ಲಿ ಅನುಕೂಲ ಬಲಗಳಾಗಿ ಮಾರ್ಪಡಿಸಿ ಸೇಡಿಯಾಪು ಎಂಬ ಸಣ್ಣದೋಣಿ ಬಾಳು ಎಂಬ ಕಡಲಯಾನ ತೊಡಗಿಯೇ ಬಿಟ್ಟಿತು. ‘ಈಸಬೇಕು ಇದ್ದು ಜೈಸಬೇಕು !’ ವಿವರಗಳನ್ನು ಇಲ್ಲಿ ಒಂದು ಜೀವಂತ ಕಾದಂಬರಿಯ ಧಾಟಿಯಲ್ಲಿ ಓದಬಹುದು. ವೈದೇಹಿ ಅವರು ಈ ಪುಸ್ತಕವನ್ನು ರಚಿಸಿದ್ದಾರೆ.
-
-40%
ಅವ್ಯಕ್ತ
0ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.