ಎಲ್ಲ ನೆನಪಾಗುತಿದೆ
ಆತ್ಮಕಥನ ಸ್ವರೂಪದ ಬರಹಗಳು
ಎಚ್. ಎಸ್. ವೆಂಕಟೇಶಮೂರ್ತಿ
ಈ ಬರವಣಿಗೆಯಲ್ಲಿ ಮಾಸ್ತಿ ಗೊರೂರು ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡು ಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ. ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ- ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ.
-ಡಾ| ಜಿ ಎಸ್ ಶಿವರುದ್ರಪ್ಪ