ಕನ್ನಡ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಹಲವಾರು ಶತಮಾನಗಳಿಂದ ತನ್ನ ಹರಿವನ್ನ ವಿಸ್ತರಿಸಿಕೊಳ್ಳುತ್ತಾ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬಂಧಿರುವ ಸರ್ವಾಂಗ ಸುಂದರ ಕಲೆ. ಇದು ಮುಖ್ಯವಾಗಿ ತೆಂಕು, ಬಡಗು ಎಂಬ ಪ್ರಭೇದಗಳಲ್ಲಿ ಉಡುಪಿ, ಮಂಗಳೂರು, ಕುಂದಾಪುರ, ಹೊನ್ನಾವರ, ಕುಮಟಾ, ಶಿರಸಿ, ಸಿದ್ಧಾಪುರ, ಯಲ್ಲಾಪುರ, ಶಿವಮೊಗ್ಗ, ಸಾಗರ ಹೀಗೆ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಹುಟ್ಟಿ ಗಟ್ಟಿಯಾಗಿ ಶತಶತಮಾನಗಳಿಂದ ಹರಿದುಕೊಂಡು ಬರುತ್ತಿದೆ. ಇದರಲ್ಲಿ ಕುಮಟಾ, ಹೊನ್ನಾವರ, ಕರ್ಕಿ, ಶಿರಸಿ, ಸಿದ್ಧಾಪುರಗಳಲ್ಲಿ ಬಡಾಬಡಗು ಅಥವಾ ಉತ್ತರಕನ್ನಡ ತಿಟ್ಟು ಅಥವಾ ಸಭಾಹಿತ ಮಟ್ಟು ಎಂಬ ಪ್ರಭೇದ ಬಡಗು ತಿಟ್ಟಿನ ಉಪಪ್ರಭೇದವೆಂಬಂತೆ ಶತಮಾನಗಳಿಂದ ಇದೆ. ಹೀಗೆ ಪ್ರಾದೇಶಿಕ ಪ್ರಭಾವದ ಪರಿಣಾಮವಾಗಿ ರೂಪುಗೊಂಡ ಈ ಪ್ರಭೇದಗಳನ್ನು ಸಂಶೋಧನಾತ್ಮಕವಾಗಿ ಅಭ್ಯಸಿಸುವ ಅಥವಾ ಆ ಕುರಿತು ಸಂಗತಿಗಳನ್ನು ಕಲೆಹಾಕಲು ಫೇಲೋಶಿಪ್ ಕಾರ್ಯದ ಮುಖೇನ ಯಕ್ಷಗಾನ ಅಕಾಡೆಮಿ ಆಗ ಅವಕಾಶಕೊಟ್ಟು ಈಗ ಅದನ್ನು ಪ್ರಕಾಶಿಸಿಕೊಳ್ಳಲು ತಮ್ಮ ಅನುಮತಿಯನ್ನು ಸಹಾ ನೀಡುತ್ತಿದೆ. ಇದಕ್ಕೆ ನಾನು ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಮತ್ತೊಮ್ಮೆ ಸ್ಮರಿಸುತ್ತಾ ಸಹೃದಯತೆಯಿಂದ ಸ್ವೀಕರಿಸುವಿರೆಂಬ ಆಶಯದಲ್ಲಿ ಈ ಕೃತಿಯನ್ನು ತಮ್ಮ ಕೈಗೆ ನೀಡುತ್ತಿದ್ದೇನೆ.
Reviews
There are no reviews yet.