ಯೊಹಾನ್ ಕ್ರಿಶ್ಚಿಯನ್ ವೊಯ್‌ಜೆಕ್ ಎಂಬ ಹೆಸರಿನ ಸೈನಿಕ-ಕ್ಷೌರಿಕನೊಬ್ಬ ಅಸೂಯೆಯ ಉದ್ವೇಗದಲ್ಲಿ ತನ್ನ ಕೂಡಿಕೆಯ ಹೆಣ್ಣನ್ನು ಕೊಲೆಮಾಡಿದ. ‘ನಿಜಜೀವನ’ದ ಈ ‘ನಿಜಘಟನೆ’ಯನ್ನಾಧರಿಸಿ ಬರೆದದ್ದು ವೊಯ್‌ಜೆಕ್ ನಾಟಕ. ಸತ್ಯ ಘಟನೆಯನ್ನಾಧರಿಸಿ ಬುಶ್‌ನರ್ ಬರೆದ ಈ ನಾಟಕವು ಚಿಕಿತ್ಸಕ ದೃಷ್ಟಿಯ ನಿಖರತೆಯನ್ನುಳ್ಳದ್ದು. ಇದರ ಒಂದೊಂದು ದೃಶ್ಯವೂ ಇನ್ನೊಂದರಿಂದ ಪ್ರತ್ಯೇಕವಾದ್ದು ಎನ್ನುವ ಹಾಗೆ ಒಂದೊಂದೂ ತನ್ನದೇ ಸ್ವತಂತ್ರ ಜೀವ ಅಸ್ತಿತ್ವಗಳನ್ನುಳ್ಳದ್ದು ಎನ್ನುವ ಹಾಗೆ ಬಲು ಎಚ್ಚರಿಕೆಯಿಮ್ದ ಯೋಜಿತವಾಗಿ ರಚಿತವಾದ್ದು ಈ ನಾಟಕ.

ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಸಮಾಜದ ಹಿನಿಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ [ಆದ್ದರಿಂದ, ಮಾನವೀಯ] ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ, ವೊಯ್‌ಜೆಕ್. ಯಾರು ಜಗತ್ತಿನ ಬಗ್ಗೆ ಭಿನ್ನವಾದ ದೃಷ್ಟಿಯನ್ನಿಟ್ಟುಕೊಂಡಿರುತ್ತಾರೋ, ಭಿನ್ನವಾದ ಭಾಷೆಯಲ್ಲಿ ಮಾತಾಡುತ್ತಾರೋ ಅಂಥವರನ್ನೆಲ್ಲ ನಾವು ಪಶುಗಳೆಂದು ಭಾವಿಸಿಬಿಡುತ್ತೇವಲ್ಲ, ಈ ನಮ್ಮ ರೂಢಿಗೆ ವೊಯ್‌ಜೆಕ್ ಪ್ರಶ್ನಾರ್ಥಕವಾಗಿ ನಿಂತು ನಮ್ಮನ್ನು ಚಿಂತಿಸಲು ಹಚ್ಚುತ್ತದೆ.

Additional information

Category

Translator

K.V. Subbanna

Publisher

Book Format

Ebook

Language

Kannada

Year Published

1992

Pages

50

Reviews

There are no reviews yet.

Only logged in customers who have purchased this product may leave a review.