ಡಾ. ರೊದ್ದಂ ನರಸಿಂಹ ಅವರು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ವ್ಯಾಸಂಗಮಾಡಿ ಬಳಿಕ ಅಮೇರಿಕಾದ ಕ್ಯಾಲ್ಟೆಕ್ನಲ್ಲಿ ವೈಮಾನಿಕ ಶಾಸ್ತ್ರಕ್ಕೆ ಸಂಬಂಧಿಸಿ ಪಿ.ಎಚ್.ಡಿ ಪದವಿಯನ್ನು ಪಡೆದರು. ಕಳೆದ ನಾಲ್ಕೈದು ದಶಕಗಳ ಕಾಲ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿವಿಧ ವಿಭಾಗಗಳಲ್ಲಿ ಪ್ರಾಧ್ಯಾಪಕ ರಾಗಿ ಕೆಲಸ ಮಾಡಿದ ಪ್ರೊ. ನರಸಿಂಹ ಅವರು ಅಲ್ಲಿ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಸೈನ್ಸಸ್ ವಿಭಾಗವನ್ನು ಆರಂಭಿಸಿದವರು. 1984ರಿಂದ 1993ರವರೆಗೆ ಅವರು ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳ ನಿರ್ದೇಶಕರಾಗಿದ್ದರು. ಅವರ ವೈಜ್ಞಾನಿಕ ಸಂಶೋಧನೆಗಳು ಮುಖ್ಯವಾಗಿ ದ್ರವಚಲನಶಾಸ್ತ್ರ(ಫ್ಲುಯಿಡ್ ಡೈನಮಿಕ್ಸ್)ದ ವಲಯದಲ್ಲಿ ನಡೆದಿವೆ. ಅವರು ವಿಜ್ಞಾನ/ತಂತ್ರಜ್ಞಾನದಲ್ಲಿ ಮಾಡಿರುವ ಈ ಸಂಶೋಧನೆಗಳನ್ನು ಗೌರವಿಸಿ ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಆಗಿಯೂ, ಅಮೇರಿಕಾದ ರಾಷ್ಟ್ರೀಯ ವಿಜ್ಞಾನ, ಎಂಜಿನಿಯರಿಂಗ್ ಅಕಾಡೆಮಿಗಳೆರಡೂ ಸದಸ್ಯರಾಗಿಯೂ ನರಸಿಂಹ ಅವರನ್ನು ಚುನಾಯಿಸಿದ್ದಾರೆ. ಳೆದ ಹಲವು ತಿಂಗಳುಗಳಿಂದ, ಈ ಲೇಖನಗಳನ್ನು ಮತ್ತೆಮತ್ತೆ ಓದುತ್ತ ಅನುವಾದಿಸುತ್ತಿದ್ದ ನನಗೆ, ಈ ಲೇಖನದ ಇಂಥ ಹಲವು ಸ್ವಾರಸ್ಯಗಳು ಅರಿವಿಗೆ ಬರುತ್ತಹೋಗಿವೆ; ನಾನು ಈ ಮೊದಲು ಹೆಸರಿಸಿದ ಲೇಖಕರಿಗೂ ಮತ್ತು ರೊದ್ದಂ ನರಸಿಂಹ ಅವರಿಗೂ ವಿಚಿತ್ರವಾದ ಮತ್ತು ಆಶ್ಚರ್ಯಕರವೆನ್ನಿಸುವ ರೂಪಸಾಮ್ಯಗಳಿವೆ ಎಂದೂ ನನಗೆ ಅನ್ನಿಸುತ್ತಹೋಗಿದೆ. ಅಂಥ ಒಂದು ಉದಾಹರಣೆಯನ್ನು ನಾನಿಲ್ಲಿ ಪ್ರಸ್ತಾಪಿಸದೆ ಇರಲಾರೆ. ಪಶ್ಚಿಮದ ‘ರಿಲಿಜನ್’ ಮತ್ತು ಭಾರತದ ‘ಧರ್ಮ’ಗಳ ನಡುವೆ ಇರುವ ಗಹನವಾದ ಭಿನ್ನತೆಗಳನ್ನು ತಮ್ಮ ಬೃಹತ್ ಪುಸ್ತಕದಲ್ಲಿ ವಿವರವಾಗಿ ವಿಶ್ಲೇಷಿಸಿರುವ ಎಸ್.ಎನ್. ಬಾಲಗಂಗಾಧರ ಅವರು ಒಂದು ಮುಖ್ಯವಾದ ಪ್ರಸ್ತಾಪವನ್ನು ಮಂಡಿಸಿದ್ದಾರೆ – ವಿವರಗಳಿಗೆ ಹೋಗದೆ ತುಸು ಸರಳೀಕರಿಸಿ ಹೇಳುವುದಾದರೆ, ಅವರ ಪ್ರಕಾರ, ಪಶ್ಚಿಮದ ಜಗತ್ತಿನ ಆಲೋಚನಾಕ್ರಮವು ‘ಸಿದ್ಧಾಂತ ಪ್ರಧಾನ’ವಾದದ್ದು; ಮತ್ತು ಆ ಕಾರಣದಿಂದ ಅಲ್ಲಿಯದು ಥಿಯರೆಟಿಕಲ್ ನಾಲೆಜ್ ಯಾ ಸಿದ್ಧಾಂತಜ್ಞಾನ. ಆದರೆ, ಭಾರತದ ಬದುಕಿನ ವಿಧಾನ ಮತ್ತು ನಂಬಿಕೆ-ಆಚರಣೆಗಳ ಜಗತ್ತು, ಪಶ್ಚಿಮಕ್ಕಿಂತ ತುಂಬ ಭಿನ್ನವಾಗಿ, ಆ್ಯಕ್ಷನ್ ನಾಲೆಜ್ ಯಾ ‘ಕ್ರಿಯಾಜ್ಞಾನ’ವನ್ನು ಪ್ರಧಾನವಾಗಿ ಗಣಿಸುವಂಥದು.
About this Ebook
Information
Additional information
Category | |
---|---|
Book Format | Ebook |
Author | |
Language | Kannada |
Publisher |
Reviews
Only logged in customers who have purchased this product may leave a review.
Reviews
There are no reviews yet.