`ವೈಜಯಂತಿ’
`ಆರ್ಯಂ’ ಎಂಬ ಕಾವ್ಯನಾಮದೊಂದಿಗೆ ಆರ್.ಎಮ್.ಶೇಟ್ ರವರ ಬೃಹತ್ ಕಾದಂಬರಿ `ವೈಜಯಂತಿ’ ಈ ಮೇಲಿನ ಘನ ಉದ್ದೇಶವನ್ನು ಸಾದರಪಡಿಸಲು ಎಂಬಂತೆ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಬನವಾಸಿಯ ಕುರಿತಾಗಿ – ಅದರ ಹಿನ್ನೆಲೆಯ ಕುರಿತಾಗಿ ಹೃದಯಂಗಮವಾಗಿ ಬರೆಯುತ್ತಾ ಹೋಗುತ್ತಾರೆ. ಆದಿಕವಿ ಪಂಪ ಮತ್ತು ಭುವನೇಶ್ವರಿದೇವಿ, ಸೋದೆ ಸದಾಶಿವರಾಯರು, ಚೆನ್ನ ಭೈರಾದೇವಿ ಹೀಗೆ ಇತಿಹಾಸದ ಪುಟ ಸೇರಿರುವ ಅನೇಕ ಸಂಗತಿಗಳನ್ನು ಅಭ್ಯಾಸಪೂರ್ಣ ಮಾಹಿತಿಯನ್ನು ಶೇಟ್ರವರು ಮನಮುಟ್ಟುವಂತೆ ಚಿತ್ರಿಸಿ ಓದುಗರಿಗೆ ಉಣಬಡಿಸಿರುವುದು ಪ್ರಸ್ತುತದ ಈ ದಿನಗಳಲ್ಲಿ ಆರೋಗ್ಯಪೂರ್ಣವೆನಿಸುತ್ತದೆ.
ಕದಂಬರ ರಾಜಧಾನಿಯಾಗಿ ಮೆರೆದ ಬನವಾಸಿಯ ಔನ್ನತ್ಯವನ್ನು ಈ ಗ್ರಂಥ ಕೊಂಡಾಡುತ್ತದೆ. ಗ್ರಂಥಕರ್ತನ ಅಪಾರ ಕಾಳಜಿ ಹಾಗೂ ಆಸಕ್ತಿಯಾಗಿ ಬೃಹತ್ ಗಾತ್ರದಲ್ಲಿ ರೂಪುಗೊಂಡು ಓದುಗರ ಮುಂದಿರುವುದು ಅದು ಓದುಗರ ಭಾಗ್ಯವೇ ಸರಿ. ಕನ್ನಡಕ್ಕೆ ಮತ್ತೊಮ್ಮೆ ಆರ್ಯಂರವರು `ವೈಜಯಂತಿ’ಯನ್ನು ಕರುಣಿಸಿದ್ದು ಪ್ರಸ್ತುತದ `ಕತ್ತಲೆ’ಗೆ ಬೆಳಕು ಚೆಲ್ಲಿದಂತೆ…..
Reviews
There are no reviews yet.