Availability: In StockPrintbook

ತುಘಲಕ್

Author: Girish Karnad

Original price was: $1.56.Current price is: $1.40.

ತುಘಲಕ್ –

ದೃಶ್ಯ : ಒಂದು
(ಕ್ರಿ.ಶ. ೧೩೨೭)
(ದಿಲ್ಲಿಯ ಒಂದು ನ್ಯಾಯಾಲಯ. ನ್ಯಾಯಾಲಯದ ಹೊರಗೆ ಜನರು ನೆರೆದಿದ್ದಾರೆ. ಹೆಚ್ಚಾಗಿ ಎಲ್ಲರೂ ಮುಸಲ್ಮಾನರು.)
ಮುದುಕ ಏನಾಗುವದಿದೆಯೋ ಏನೋ ಈ ನಾಡಿಗೆ !
ತರುಣ ಏಕೆ ಅಜ್ಜಾ , ನಿನಗೆ ಯಾವುದರ ಚಿಂತೆ ಹತ್ತಿದೆ ಈಗ ?
ಮುದುಕ ಏನು ಚಿಂತೆಯೋ ಏನು ಮಣ್ಣೋ, ಜಮಾಲ. ಇಷ್ಟು ವರ್ಷ ಬಾಳಿ, ಇಷ್ಟೆಲ್ಲ ಅರಸರನ್ನು ನೋಡಿ ಆಯಿತು. ಈಗ ಕಣ್ಣು ಮುಚ್ಚುವ ದಿನಗಳಲ್ಲಿ ಹೀಗೆ ಕಳ್ಳನ ಹಾಗೆ ಕಾಜಿಯ ಎದುರಿಗೆ ಕೈಕಟ್ಟಿ ನಿಲ್ಲುವ ಅರಸನನ್ನು ನೋಡಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ ……………………………..

ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ. ಹೊಸ ಕಾಯದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳ್ಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ಮಾಡುವ ಸರದಾರರು, ರಾಜಕಾರಣವನ್ನು ದೇವರ ಕಾರ್ಯವೆಂದು ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಕೊನೆಗೆ ಮುಹಮ್ಮದನಿಗೆ ಆಗುವುದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನು, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಈ ಅರಸ, ‘ಆತ್ಮ-ಹತ್ಯೆ’ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ದುರಂತ.

Additional information

Category

Author

Publisher

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.