ಕಾರಂತರ ಕಾದಂಬರಿಗಳಲ್ಲಿ ವ್ಯಕ್ತವಾಗುವ ಗಂಡುಹೆಣ್ಣಿನ ಸಂಬಂಧದ ಪ್ರಶ್ನೆ ಮತ್ತು ಆಧುನೀಕರಣದ ಪ್ರಕ್ರಿಯೆ- ಇವೆರಡು ವಸ್ತುಗಳನ್ನು ಪ್ರತ್ಯೇಕವಾಗಿಟ್ಟುಕೊಂಡು ಈ ಪುಸ್ತಕವು ಕಾರಂತ ಚಿಂತನೆಯ ಜಿಜ್ಞಾಸೆಗೆ ಕೈಹಾಕುತ್ತದೆ. ಇವೆರಡು ಪ್ರಶ್ನಿಗಳು ಕಾರಂತ ಕೃತಿಲೋಕದ ಎರಡು ಪೂರಕ ಆಯಾಮಗಳನ್ನು ಪ್ರತಿನಿಧಿಸುವಂಥವು- ಒಂದು, ಗಂಡುಹೆಣ್ಣೀನ ಸಂಬಂಧದ ಆಂತರಿಕ ಜಗತ್ತು; ಇನ್ನೊಂದು, ವಸಾಹತುಶಾಹಿ ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡ ವಿಶಾಲ ಹೊರಜಗತ್ತು. ಆದರೆ, ಇನ್ನೊಂದು ರೀತಿಯಿಂದ ನೋಡಿದರೆ, ಇವೆರಡೂ ಪರಸ್ಪರವನ್ನು ಬಿಂಬಿಸುವ ಕನ್ನಡಿಗಳೂ ಹೌದು. ಹೀಗೆ ‘ವೈಯಕ್ತಿಕ’ ಮತ್ತು ‘ಸಾಮಾಜಿಕ’ ರಾಜಕಾರಣಗಳ ಸೃಜನಶೀಲ ಮುಖಾಮುಖಿಯಲ್ಲಿ ಕಾರಂತರ ಕಾದಂಬರಿಗಳ ದರ್ಶನ ರೂಪುಗೊಳ್ಳುವ ಬಗೆಯನ್ನು ಪ್ರಸ್ತುತ ಬರಹವು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಈ ಮೂಲಕ ಟಿ.ಪಿ. ಅಶೋಕ ಅವರು ಕೃತಿನಿಷ್ಠ ಮತ್ತು ಸಂಸ್ಕೃತಿಸ್ಪಂದಿ ವಿಮರ್ಶೆಗಳ ನಡುವಿನ ಒಳಸಂಬಂಧವನ್ನು ಹೆಣೆಯಲು ಸಫಲರಾಗಿದ್ದಾರೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.