ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ೧೭, ಮಾರ್ಚ್ ೧೯೦೫ರಲ್ಲಿ ಮೇಲುಕೋಟೆಯಲ್ಲಿ ಜನಿಸಿದರು. ಸಂಸ್ಕೃತ ವಿದ್ಯಾಭ್ಯಾಸಕ್ಕೆ ಸಮಾನಾಂತರವಾಗಿ ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಕೂಡಾ ಪು.ತಿ.ನ. ಪಡೆದರು. ಮೇಲುಕೋಟೆಯಲ್ಲಿ ಪ್ರಾಥಮಿಕ ಮತ್ತು ಸಂಸ್ಕೃತ ಪಾಠಶಾಲೆ, ಮೈಸೂರಿನ ಮಹಾರಾಜ ಕೊಲಜಿಯೇಟ್ ಹೈಸ್ಕೂಲು ಮತ್ತು ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು ಸೈನಿಕ ಇಲಾಖೆ, ವಿಶ್ವಕೋಶದ ಭಾಷಾಂತರಕಾರ, ಕನ್ನಡ-ಇಂಗ್ಲಿಷ್ ನಿಘಂಟು ಸಂಪಾದಕ ಮುಂತಾದ ವೃತ್ತಿ ಮಾಡಿದರು. ಕವಿತೆ ಮತ್ತು ಗೀತನಾಟಕಗಳು ಇವರ ಪ್ರಮುಖ ಮಾಧ್ಯಮಗಳು. ಹಲವಾರು ಮೌಲಿಕ ವೈಚಾರಿಕ ಲೇಖನಗಳನ್ನೂ ಬರೆದಿದ್ದಾರೆ. ‘ಮಲೆ ದೇಗುಲ’, ‘ಹಣತೆ’, ‘ಈಚಲು ಮರದ ಕೆಳಗೆ’, ‘ಗೋಕುಲ ನಿರ್ಗಮನ’, ‘ಅಹಲ್ಯೆ’, ‘ಹರಿಚರಿತೆ’ ಇವರ ಪ್ರಮುಖ ಕೃತಿಗಳು. ಇವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಮೊದಲಾದ ಪುರಸ್ಕಾರಗಳು ಸಂದಿವೆ. ಪು.ತಿ.ನ. ಅವರು ೧೩, ಅಕ್ಟೋಬರ್ ೧೯೯೮ರಂದು ನಿಧನರಾದರು.
ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
ಪು.ತಿ.ನ.
ಗೋಕುಲಾಷ್ಟಮಿ
ರಥಸಪ್ತಮಿ
ಈಚಲುಮರದ ಕೆಳಗೆ
ಭೀತಿಮೀಮಾಂಸೆ
ನೆರಳು-ನಡುನೆರಳು-ಪಡಿನೆರಳು
ಹಾಳುಗುಡಿಯ ಕೈಸಾಲೆಯ ಮೇಲೆ
ಬಲ ಕಿವಿ
ಸ್ತ್ರೀಯರೂ-ಪುರುಷರೂ
ಪ್ರಯೋಗಶಾಲೆ ಮತ್ತು ರಂಗಸ್ಥಲ
ಶ್ರೀಸಾಮಾನ್ಯ
ಕಾವ್ಯದ ಜೀವಾಳ*
ಕಾವ್ಯ ಮತ್ತು ನೀತಿಬೋಧೆ
ಪ್ರಾಪ್ತಿ-ಪ್ರತಿಭಟನೆ-ಪ್ರಗತಿ
ಶ್ರೀ ಹರಿಚರಿತೆ
ಪುತಿನ ಮುಖ್ಯ ಕೃತಿಗಳು
Reviews
There are no reviews yet.