ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ೧೭, ಮಾರ್ಚ್ ೧೯೦೫ರಲ್ಲಿ ಮೇಲುಕೋಟೆಯಲ್ಲಿ ಜನಿಸಿದರು. ಸಂಸ್ಕೃತ ವಿದ್ಯಾಭ್ಯಾಸಕ್ಕೆ ಸಮಾನಾಂತರವಾಗಿ ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಕೂಡಾ ಪು.ತಿ.ನ. ಪಡೆದರು. ಮೇಲುಕೋಟೆಯಲ್ಲಿ ಪ್ರಾಥಮಿಕ ಮತ್ತು ಸಂಸ್ಕೃತ ಪಾಠಶಾಲೆ, ಮೈಸೂರಿನ ಮಹಾರಾಜ ಕೊಲಜಿಯೇಟ್ ಹೈಸ್ಕೂಲು ಮತ್ತು ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು ಸೈನಿಕ ಇಲಾಖೆ, ವಿಶ್ವಕೋಶದ ಭಾಷಾಂತರಕಾರ, ಕನ್ನಡ-ಇಂಗ್ಲಿಷ್ ನಿಘಂಟು ಸಂಪಾದಕ ಮುಂತಾದ ವೃತ್ತಿ ಮಾಡಿದರು. ಕವಿತೆ ಮತ್ತು ಗೀತನಾಟಕಗಳು ಇವರ ಪ್ರಮುಖ ಮಾಧ್ಯಮಗಳು. ಹಲವಾರು ಮೌಲಿಕ ವೈಚಾರಿಕ ಲೇಖನಗಳನ್ನೂ ಬರೆದಿದ್ದಾರೆ. ‘ಮಲೆ ದೇಗುಲ’, ‘ಹಣತೆ’, ‘ಈಚಲು ಮರದ ಕೆಳಗೆ’, ‘ಗೋಕುಲ ನಿರ್ಗಮನ’, ‘ಅಹಲ್ಯೆ’, ‘ಹರಿಚರಿತೆ’ ಇವರ ಪ್ರಮುಖ ಕೃತಿಗಳು. ಇವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಮೊದಲಾದ ಪುರಸ್ಕಾರಗಳು ಸಂದಿವೆ. ಪು.ತಿ.ನ. ಅವರು ೧೩, ಅಕ್ಟೋಬರ್ ೧೯೯೮ರಂದು ನಿಧನರಾದರು.

ನನ್ನ ಹಾಡು
ಶರದ ಮತ್ತು ಶರಶ್ಚಂದ್ರ
ಬಾನ್ ತಿಳಿದಿತ್ತು
ಹೆಣ್ಣೊಬ್ಬಳ ಕಣಸು
ಮಳೆಯು ನಾಡ ತೊಯ್ಯುತಿರೆ
ಕಣಿವೆಯ ಮುದುಕ
ಒಲುಮೆಹೊನಲ ತಡೆಗಳು
ವಿಶ್ವಕುಟುಂಬಿಯ ಕಷ್ಟ
ರಂಗವಲ್ಲಿ
ಗಾನ
ಯದುಗಿರಿಯ ಮೌನ ವಿಕಾಸ
ತ್ಯಾಗವೆ ಒಲುಮೆ
ಬಾಳಿನ ಹಂಬಲು
ಹೊನಲ ಹಾಡು
ಕವಿ
ಅಂತರ್ಯಾಮಿಯ ಒಂದು ಸೋಗಿನ ದರ್ಶನ
ದೀನಗಿಂತ ದೇವ ಬಡವ
ದೇಹ ಯಂತ್ರ ದುಡಿಯುತಿದೆ
ಸೈನಿಕರ ಹಾಡು
ಪಯಣಿಗರ ಹಾಡು
ಹೊಸ ಹಾಡು
ಲಘುವಾಗೆಲೆ ಮನ
ನೆರಳು
ನನ್ನ ನಾ

ಇವು ಪು.ತಿ.ನ ಅವರ ಆಯ್ದ ಕವಿತೆಗಳು

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.