‘ನಾಡೋಜ’ನೆಂದು ಹೊಗಳಿಸಿಕೊಂಡ ಪಂಪನು ಹುಟ್ಟಿದ್ದು ಕ್ರಿ.ಶ. ೯೦೨-೯೦೩ರಲ್ಲಿ. ಕೃಷ್ಣಾ-ಗೋದಾವರೀ ನದಿಗಳ ನಡುವಿನ ವೆಂಗಿಮಂಡಲದ ‘ವೆಂಗಿಪೞು’ ಪಂಪನ ಹಿರಿಯರ ಊರು; ಹುಟ್ಟೂರು ಬನವಾಸಿ ಇದ್ದಿರಬಹುದು ಎಂದು ಊಹೆ. ಅವನು ಕವಿಯಾಗಿ ಪ್ರಸಿದ್ಧನಾದುದು ಇಂದಿನ ವೇಮುಲವಾಡದಲ್ಲಿ ಆಳುತ್ತಿದ್ದ ಚಾಲುಕ್ಯ ದೊರೆ ೨ನೆಯ ಅರಿಕೇಸರಿಯ ಆಸ್ಥಾನದಲ್ಲಿ. ಪಂಪನ ಗುರು ದೇವೇಂದ್ರಮುನಿ. ಹಿಂದಿನ ಜೈನ ಗುರು ಜಿನಸೇನಾಚಾರ್ಯರ ಪೂರ್ವ ಪುರಾಣವನ್ನು ಆಧರಿಸಿ ‘ಆದಿಪುರಾಣ’ವನ್ನೂ ವ್ಯಾಸಭಾರತವನ್ನು ಆಧರಿಸಿ ‘ವಿಕ್ರಮಾರ್ಜುನವಿಜಯ’ವನ್ನೂ ಬರೆದಿದ್ದಾನೆ. ಕ್ರಿ.ಶ. ಸು. ೯೪೧-೯೪೨ರಲ್ಲಿ ಆದಿಪುರಾಣವನ್ನೂ; ೩-೪ ವರ್ಷಗಳ ಅನಂತರ ಪಂಪಭಾರತವನ್ನೂ ಬರೆದಿದ್ದಾನೆ. ಅವನ ತಮ್ಮ ಜಿನವಲ್ಲಭನ ಶಾಸನದ ಆಧಾರದಿಂದ ಕ್ರಿ.ಶ. ೯೪೬ರ ಮೊದಲು ಪಂಪ ಮರಣಹೊಂದಿರಬಹುದೆಂದು ಊಹಿಸಲಾಗಿದೆ. ‘ಕವಿತಾಗುಣಾರ್ಣವ’ ಪಂಪನ ಬಿರುದು. ತನ್ನ ಎರಡು ಕಾವ್ಯಗಳಲ್ಲಿ ಧರ್ಮ-ಲೌಕಿಕಗಳನ್ನು ಮೆರೆದುದಾಗಿ, ದೇಸಿ-ಮಾರ್ಗಗಳ ಹಾಸುಹೊಕ್ಕಿನ ತಿರುಳುಗನ್ನಡದಲ್ಲಿ ಬರೆದುದಾಗಿ ಅವನು ಹೇಳಿಕೊಂಡಿದ್ದಾನೆ.

Additional information

Editor

Mahabaleshwar K G

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.