Ebook

ಒಡಲ ಖಾಲಿ ಪುಟ

Author: Kaveri S. S

Original price was: ₹120.00.Current price is: ₹72.00.

ಒಡಲ ಖಾಲಿ ಪುಟ

‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ ಕೃತಿ. ತಮಗನಿಸುವುದನ್ನು ಅವರು ಪ್ರಾಮಾಣಿಕವಾಗಿ ಸರಳವಾಗಿಯೂ, ಸಂಕೀರ್ಣವಾಗಿಯೂ ಅಭಿವ್ಯಕ್ತಗೊಳಿಸುವ ಪರಿಯನ್ನು ‘ಒಡಲ ಖಾಲಿ ಪುಟ’ದಲ್ಲಿ ಗಮನಿಸಬಹುದು.

ಒಡಲ ಖಾಲಿ ಪುಟ

ಕೃತಿಯ ಮೊದಲ ಭಾಗವಾದ ‘ಭಾವ ಪಟಗಳು’ ಕಾವೇರಿ ಅವರ ಬಾಲ್ಯದ ಬದುಕನ್ನು ಕಟ್ಟಿಕೊಡುವ ಇಲ್ಲಿನ ಕೆಲ ಬರಹಗಳು ನಗಿಸುತ್ತಲೇ ವಿಷಾದವನ್ನೂ ಓದುಗರ ಮನಸ್ಸಿನ ಒಳಗಿಳಿಸುವಷ್ಟು ಸಶಕ್ತವಾಗಿವೆ. ಸರ್ಕಾರಿ ಶಾಲೆ, ಅಂಗನವಾಡಿಯಲ್ಲಿ ಅಕ್ಷರ ಜ್ಞಾನ ದಕ್ಕಿಸಿಕೊಳ್ಳುವ ಮಕ್ಕಳ ಭಾವಲೋಕವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿಯ ಎರಡನೇ ಭಾಗವಾದ ‘ವಿಚಾರ ವಿಹಾರ’ ಲೇಖನಗಳಲ್ಲಿ ಮೀಸಲಾತಿ, ಮುಟ್ಟು-ಮೈಲಿಗೆ, ಶಿಕ್ಷಣ, ಕೃಷಿ ಇನ್ನಿತರೆ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ‘ಮಾಧ್ಯಮ ಮತ್ತು ಮಹಿಳೆ’ ಪ್ರಬಂಧ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ಎದುರಿಸಬೇಕಿರುವ ಸವಾಲುಗಳು, ಅಪಸವ್ಯಗಳ ಕುರಿತು ಗಮನ ಸೆಳೆಯುತ್ತದೆ.  ಇನ್ನು ಕೃತಿಯ ಮೂರನೇ ಭಾಗವಾದ ‘ಅಸಂಗತ ಲಹರಿ’ ಕಾವೇರಿ ಅವರು, ತಮ್ಮ ಮನಸ್ಸನ್ನು ಆವರಿಸುವ ದುಗುಡವನ್ನು ಅಭಿವ್ಯಕ್ತಗೊಳಿಸಲು ಪ್ರಜ್ಞಾಪೂರ್ವಕವಾಗಿಯೇ ಆಯ್ದುಕೊಳ್ಳುವ, ಸಂಕೀರ್ಣತೆ ಹಾಗೂ ಅಸ್ಪಷ್ಟತೆ ಮೇಳೈಸಿದ ಬರಹ ಶೈಲಿಯನ್ನು ಪರಿಚಯಿಸುತ್ತದೆ. ‘ಒಡಲ ಖಾಲಿ ಪುಟ’ದ ಅಂತಿಮ ಭಾಗ ಪ್ರೇಮದ ಕುರಿತಾದ ಬರಹಗಳನ್ನು ಒಳಗೊಂಡಿದೆ.
ಈ ಕೃತಿಯಲ್ಲಿರುವ ಕೆಲವೇ ಕೆಲವು ಬರಹಗಳು ಇನ್ನೂ ಮಾಗಬಹುದಾದ ಸಾಧ್ಯತೆಯಿಂದ ವಂಚಿತವಾಗಿವೆ ಅನಿಸಿದರೂ, ಒಟ್ಟಾರೆ ‘ಒಡಲ ಖಾಲಿ ಪುಟ’ ಒಂದೊಳ್ಳೆ ಪುಸ್ತಕ ಎನ್ನಲು ಬೇಕಾಗುವ ಪುರಾವೆಗಳೂ ಇಲ್ಲಿನ ಬರಹಗಳಲ್ಲೇ ದಕ್ಕಲಿವೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.