Ebook

ನಾಲ್ಕು ಗುಣಿಲೆ ಐದು

Original price was: ₹200.00.Current price is: ₹120.00.

ನಾಲ್ಕು ಗುಣಿಲೆ ಐದು

ಏಕ ಕುಟುಂಬದ ನಾಲ್ಕು ಬರಹಗಾರರ ಐದೈದು ಕತೆಗಳ ಸಂಕಲನ

ಯಕ್ಷಗಾನ ಮೇಳ ಸಂಘಟಕ,ಯಕ್ಷಗಾನ ವೇಷಧಾರಿ, ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿ,ಕೃಷಿಕ, ಕರ್ಮಯೋಗಿ ತೆಂಕೋಡುಮನೆ ಶ್ರೀ ಮಹಾಬಲಗಿರಿಯಪ್ಪ ಮತ್ತು ಸದ್ಗೃಹಿಣಿ ಶ್ರೀಮತಿ ಫಣಿಯಮ್ಮ ಈ ದಂಪತಿಯ ಒಂಬತ್ತು ಮಂದಿ ಮಕ್ಕಳಲ್ಲಿ ನಾಲ್ವರು ಗಂಡು ಮಕ್ಕಳು; ಐವ್ವರು ಹೆಣ್ಣು ಮಕ್ಕಳು. ನಾಲ್ವರು ಗಂಡು ಮಕ್ಕಳು: ಸುಬ್ಬರಾಯ, ರಮೇಶ, ಅಶೋಕ ಮತ್ತು ಜಗದೀಶ. ಅ ಶೋಕ ಪೂರ್ಣ ಪ್ರಮಾಣದ ಕೃಷಿಕ. ಜಗದೀಶ ಅತ್ತ ಕೃಷಿಕನೂ ಹೌದು; ಇತ್ತ ಬರಹ ಕೃಷಿಯಲ್ಲಿ ತೊಡಗಿ ಕೊಂಡವನೂ ಹೌದು. ರಮೇಶ ಬ್ಯಾಂಕ್ ಉದ್ಯೋಗಿಯಾಗಿದ್ದು ಬರಹ ಕೃಷಿಯಲ್ಲಿ ತೊಡಗಿಕೊಂಡಾತ. ಸುಬ್ಬರಾಯ ಶಿಕ್ಷಕನಾಗಿ, ಪತ್ರಕರ್ತನಾಗಿ, ಯಕ್ಷಗಾನ ಪ್ರಸಂಗಕತೃವಾಗಿ, ಸಂಘಟಕನ ಕಾರನಾಗಿ, ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾಗಿ, ಸಭಾ ಕಾರ್ಯಕ್ರಮಗಳ ನಿರೂಪಣಾಕಾರನಾಗಿ, ಹಲವು ಸಂಘ ಸಂಸ್ಥೆಗಳ ಅಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕ, ಸದಸ್ಯನಾಗಿ ಕಾರ್ಯ ನಿರ್ವಹಿಸಿದವನು. ಜೊತೆಜೊತೆಗೆ ಕತೆ, ಕಾದಂಬರಿ, ಲೇಖನ, ಸಂಶೋದನಾ ಕೃತಿ, ಪ್ರವಾಸಕಥನಗಳನ್ನು ಬರೆದವ;
ಬರೆಯುತ್ತಲಿರುವಾತ. ಶಾಲಿನಿ ರಮೇಶ್ ಗೃಹಿಣಿ. ಮನೆವಾರ್ತೆಯ ಜೊತೆಗೆ ಬರಹ ಕ್ರಿಯೆಯಲ್ಲಿಯೂ ತನ್ನನ್ನು ತೊಡಗಿಸಿ ಕೊಂಡಿರುವವಳು.
ನಮ್ಮದು ಸಾಹಿತ್ಯಪ್ರಿಯ ಕುಟುಂಬ. ಎಲ್ಲರೂ ಬರಹಗಾರರಲ್ಲದಿದ್ದರೂ ಯಾರೂ ಬರಹ ದ್ವೇಷಿಗಳಲ್ಲ. ಓದುಗರು; ಚಿಂತಕರು. ಬೇರೆಯವರ ಬರಹಗಳನ್ನು ಓದಿ ಆಸ್ವಾದಿಸುವವರು. ಹಾಗಾಗಿಯೇ ಕುಪ್ಪಳ್ಳಿಯಲ್ಲಿಯ ನಮ್ಮ ಮನೆ `ಕಥಾಶೈಲ.’ ಸುಬ್ಬರಾಯನ ಮಗನ ಮಗಳು ಲಿಪಿ. ಕಿರು ವಯದ ಲಿಪಿ ಈಗಾಗಲೇ ಆಂಗ್ಲಭಾಷೆಯಲ್ಲಿ ಕತೆಗಳನ್ನು ಲಿಖಿತ ಗೊಳಿಸುತ್ತಲಿದ್ದಾಳೆ. ಸುಬ್ಬರಾಯನ ಮಗಳ ಮಗ ಚ್ಯವನ್ ಕವನಗಳನ್ನು ಬರೆಯುತ್ತಲಿದ್ದಾನೆ. ಮತ್ತೆ ಕುಟುಂಬದ ಇನ್ನಿತರ ಸದಸ್ಯ ಸದಸ್ಯೆಯರೂ ಸಾಹಿತ್ಯಾಸಕ್ತಿ ಹೊಂದಿದವರೇ ಆಗಿದ್ದಾರೆ.
ಸುಬ್ಬರಾಯನ ಹಲವು ಕೃತಿಗಳು ಪ್ರಕಟವಾಗಿವೆ ಅಂತೆಯೇ ರಮೇಶ್ ಮತ್ತು ಜಗದೀಶ್ ಅವರದೂ ಕೂಡ. ಶಾಲಿನಿ ರಮೇಶ್ ಕೃತಿ ಪುಸ್ತಕರೂಪವನ್ನು ಕಾಣಬೇಕಿದೆ ಅಷ್ಟೇ.
`ಕಥಾಶೈಲ’ ದ ಜಗದೀಶ, ಶಾಲಿನಿ ರಮೇಶ, ರಮೇಶ ಮತ್ತು ಸುಬ್ಬರಾಯ ಈ ನಮ್ಮ ನಾಲ್ವರ ಐದೈದು ಕತೆಗಳ ಕಥಾಗುಚ್ಛವನ್ನು ಪ್ರಕಟಿಸುತ್ತಿದ್ದೇವೆ . ಇದರ ಪ್ರಕಟಣೆಯ ಹೊಣೆ ಹೊತ್ತವರು ನಮ್ಮ ಕುಟುಂಬದ ಸನ್ಮಿತ್ರ ಶ್ರೀ ಸೀತಾರಾಮ ಹೆಗಡೆಯವರು.
– ನಾವು ನಾಲ್ವರು

Additional information

Category

Author

, , ,

Publisher

Pages

270

Year Published

2018

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.