ಮನಸುಖರಾಯನ ಮನಸು
(ಕತೆ – ಹರಟೆ)
ಇದರಲ್ಲಿರುವ ಆರು ಲೇಖನಗಳಲ್ಲಿ ‘‘ಬಾಶಿಂಗ ಬಲ’’ ‘‘ತ್ರಯಸ್ಥ’’ ಹಾಗೂ ‘‘ಗಧೇ ಪಂಚವೀಶಿ’’ ಇವು ಮೂರು ಕಥಾ ರೂಪಿ ಹರಟೆಗಳು. ‘‘ಗಾಯಕವಾಡ ದಾದಾ’’ ಹರಟೆ ರೂಪಿ ವ್ಯಕ್ತಿ ಚಿತ್ರಣ; ‘‘ಶ್ರದ್ಧಾ’’ ಒಂದು ಬಾಲ್ಯಕಾಲದ ಚಿತ್ರಣ. ‘‘ಪುಸ್ತಕದ ಹುಳ’’ ಒಂದು ಶುದ್ಧ ತಲೆಹರಟೆ ರೂಪಿ ಹರಟೆ…………….
ವಿಷಯದ ಆಯ್ಕೆ, ಪ್ರಸ್ತಾವನೆಗಳಲ್ಲಾಗಲೀ, ನಿರೂಪಣೆಯ ಶೈಲಿಯಲ್ಲಾಗಲೀ ಯಾವದೇ ಕಟ್ಟು ಕಟ್ಟಳೆಗಳಿಲ್ಲದೇ, ಲಂಗು ಲಗಾಮಿಲ್ಲದೇ ಮನಬಂದಂತೆ ಹಬ್ಬಿದ ಕತೆಗಳು ಇವು. ಎಂತಲೇ ಈ ಸಂಗ್ರಹಕ್ಕೆ ‘‘ಮನಸುಖರಾಯನ ಮನಸು’’ ಎಂಬ ಅನ್ವರ್ಥಕ ಹೆಸರನ್ನೇ ಇಟ್ಟಿದ್ದೇನೆ.
ಇದರಲ್ಲಿನ ಹೆಚ್ಚಿನ ಬರಹಗಳಿಗೆ ಪ್ರಧಾನ ನಿರೂಪಕ ಅಥವಾ ಕಥಾನಾಯಕ ಸ್ವತಃ ಲೇಖಕನೇ ಆಗಿರುವುದರಿಂದ ಇವುಗಳು ಅನುದ್ದೇಶಿತವಾಗಿಯೇ ಆತ್ಮಚರಿತ್ರೆಯ ಸ್ವರೂಪ ಬಂದಿರಬಹುದು ಆದರೆ ಇಲ್ಲಿನ ಎಲ್ಲ ವ್ಯಕ್ತಿಗಳು ಘಟನೆಗಳು ಕಾಲ್ಪನಿಕವಾಗಿವೆ.
Reviews
There are no reviews yet.