ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು
ಯುದ್ಧಕ್ಕೆ ಹೋದ ಮಗ
ಗೆದ್ದು ಬರಲಿ ಅಂತ ಹಾರೈಸಿ
ಅವನಿಗಾಗಿ ಕಾಯುತ್ತ ಹೊಸ್ತಿಲ ಬಳಿ
ಕುಳಿತೇ ಇದ್ದಾಳಲ್ಲ?
ಆ ಅಮಾಯಕ ತಾಯಿಗೆ,
ಮತ್ತು
ಸತ್ಯ ಗೊತ್ತಾದ ಮೇಲೆ ಒಳ
ಮನೆಯಲ್ಲಿ ಒಬ್ಬಳೇ ಬಿಕ್ಕುತ್ತಿದ್ದಾಳಲ್ಲ?
ಆ ಹೆಣ್ಣು ಮಗಳಿಗೆ
ಈ ಪುಸ್ತಕ ಅರ್ಪಿತ
ರವಿ ಬೆಳೆಗೆರೆ
ಸುಖದ ದಿನಗಳಲ್ಲಿ ಒಬ್ಬ ಮನುಷ್ಯ ಅರಿತುಕೊಳ್ಳಲಾಗದ ಸತ್ಯಗಳು, ಅವನಿಗೆ ಯುದ್ಧ ಭೂಮಿಯಂತಹ ಕಣ್ಣೆದುರಿನ ನರಕಗಳಲ್ಲಿ ಅರ್ಥವಾಗಿ ಹೋಗುತ್ತವಂತೆ. ಪತ್ರಿಕೆಯ ಮಟ್ಟಿಗೆ ನನ್ನ ಕಾರ್ಗಿಲ್ ಯಾತ್ರೆ ಒಂದು ದೊಡ್ಡ break ಅನ್ನುವವರಿದ್ದಾರೆ. ಅದು ಹೌದೋ ಅಲ್ಲವೋ; ಆ ಮಾತು ಬೇರೆ. ವೈಯುಕ್ತಿಕವಾಗಿ ನನ್ನ ಬದುಕಿಗೆ, ಚಿಂತನೆಗೆ ಮತ್ತು ನನ್ನ ವರ್ತನೆಗೆ ಖಚಿತವಾಗಿಯೂ ಒಂದು ತಿರುವು ನೀಡಿದ್ದು ಕಾರ್ಗಿಲ್.
ಯಾವತ್ತಾದರೊಂದು ದಿನ ಪತ್ರಿಕೋದ್ಯಮಕ್ಕಿಂತ ತೀವ್ರವಾಗಿ ನಾನು ಜಗತ್ತಿನ ಮಿಲಿಟರಿ ಹಿಸ್ಟರಿಯನ್ನೇ ಬರೆಯಲು ಕುಳಿತರೆ ಆಶ್ಚರ್ಯವಿಲ್ಲ. ಅಷ್ಟೊಂದು ಸಾಮಗ್ರಿಯ ಬುತ್ತಿ ಕಟ್ಟಿಕೊಟ್ಟಿದೆ ಕಾರ್ಗಿಲ್. ಅಲ್ಲಿಂದ ಹಿಂತಿರುಗಿದ ಮೇಲೆ ನೆನಪು ಮಾಡಿಕೊಂಡರೆ, ನಾನು ವೈಯುಕ್ತಿಕವಾಗಿ thanks ಹೇಳಬೇಕಾದವರ ಪಟ್ಟಿ ದೊಡ್ಡದಿತ್ತು ಅನಿಸುತ್ತದೆ.
Reviews
There are no reviews yet.