ಪ್ರಸಿದ್ಧ ಜೈನಕವಿಯಾದ ಜನ್ನನು ಹೊಯ್ಸಳ ವೀರಬಲ್ಲಾಳನ ಆಸ್ಥಾನಕವಿಯಾಗಿದ್ದ; ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕಾಲದಲ್ಲಿ ಕವಿಯೂ ದಂಡಾಧಿಕಾರಿಯೂ ಆಗಿದ್ದ. ಕಾಣೂರ್ಗಣದ ರಾಮ ಚಂದ್ರಯತಿ ಇವನ ಗುರು. ಶಬ್ದಮಣಿದರ್ಪಣವನ್ನು ಬರೆದ ಕೇಶಿರಾಜ ಇವನ ಸೋದರಳಿಯ. ಇವನು ಹಲವಾರು ಶಾಸನಗಳನ್ನೂ ‘ಯಶೋಧರ ಚರಿತೆ’ ಮತ್ತು ‘ಅನಂತನಾಥ ಪುರಾಣ’ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಇವನ ಕಾಲ ೧೩ನೇ ಶತಮಾನ. ಇವನ ಗ್ರಂಥಗಳಲ್ಲೇ ತಿಳಿದುಬರುವ ಪ್ರಕಾರ ಯಶೋಧರ ಚರಿತೆಯನ್ನು ಕ್ರಿ.ಶ. ೧೨೦೯ರಲ್ಲೂ ಅನಂತನಾಥ ಪುರಾಣವನ್ನು ೧೨೩೦ರಲ್ಲೂ ಆತ ಬರೆದು ಮುಗಿಸಿದ. ವಾದಿರಾಜ ಸೂರಿಯು ಸಂಸ್ಕೃತದಲ್ಲಿ ರಚಿಸಿದ ‘ಯಶೋಧರ ಚರಿತ’ವು ಜನ್ನನಿಗೆ ಆಧಾರಗ್ರಂಥವಾಗಿದೆ. ಈ ಕೃತಿಯು ಮೂಲತಃ ಜೀವದಯಾಷ್ಟಮಿ ಎಂಬ ವ್ರತದಲ್ಲಿ ಪಠಣ ಮಾಡುವ ಒಂದು ಪಠ್ಯವಾಗಿ ಕಲ್ಪಿತವಾದದ್ದು. ಕವಿಕಲ್ಪಲತಾ ಮಂದಾರ, ಸುಕವಿ ಭಾಳಲೋಚನ ಮುಂತಾದವು ಇವನ ಇತರ ಬಿರುದುಗಳು.

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು – ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ – ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.