ಜನನಾಯಕ –ಡಿ. ಕೆ. ನಾಯ್ಕರ್
ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.
ವಕೀಲರಾಗಿ ಬಹಳಷ್ಟು ಹೆಸರು ಮಾಡಿದ್ದ ಶ್ರೀ ಡಿ.ಕೆ.ನಾಯ್ಕರ್ ಅವರು ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಜತೆಗೆ ಗುರುತಿಸಿ ಕೊಂಡಿದ್ದರು. ಆ ನಂಟು ಅವರನ್ನು ಸಕ್ರಿಯ ರಾಜಕಾರಣಕ್ಕೆ ಎಳೆದು ತಂದಿತು. ಮುಂದೆ ಅವರು ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸುವ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು. ಶ್ರೀ ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಶ್ರೀ ನಾಯ್ಕರ್ ಅವರು ಮಾಡಿರುವ ಸಾಧನೆ ಅದ್ವಿತೀಯ. ಅವರ ಜೀವನ-ಸಾಧನೆಗಳನ್ನು ಬಿಂಬಿಸುವಲ್ಲಿ ಈ ಪುಸ್ತಕ ಒಂದು ಸಣ್ಣ ಪ್ರಯತ್ನ.
Reviews
There are no reviews yet.