ಜಗವ ನಡುಗಿಸಿದ ಆ ಹತ್ತು ದಿನಗಳು
ಸೋವಿಯತ್ ರಷ್ಯದಲ್ಲಿ ನಡೆದ ಐತಿಹಾಸಿಕ ಜಗತ್ಪಸಿದ್ಧ ಅಕ್ಟೋಬರ್ ಕ್ರಾಂತಿಗೆ(೧೯೧೭) ಈಗ ನೂರ ರ ಸಂಭ್ರಮ, ಝಾರ್ ಚಕ್ರವರ್ತಿಯ ಕ್ರೂರ ದಬ್ಬಾಳಿಕೆಯ ಆಳ್ವಿಕೆಯಿಂದ ರೋಸಿ ಹೋದ ಜನತೆ ಬೋಲೈವಿಕ್ ನಾಯಕ ಲೆನಿನ್ ನೇತೃತ್ವದಲ್ಲಿ ಒಗ್ಗೂಡಿ ಹೋರಾಟದ ಮಾರ್ಗ ಹಿಡಿದು ಸಶಸ್ತ್ರ ದಂಗೆ ಮೂಲಕ ಹೊಸದೊಂದು ಆಡಳಿತವನ್ನು ತನ್ನ ಪ್ರಜೆಗಳಿಗೆ ನೀಡಿದ ಸುದಿನವದು. ಎಲ್ಲೆಲ್ಲೂ ಕೆಂಪುಬಾವುಟಗಳ ಅಲೆಗಳನ್ನೆಬ್ಬಿಸಿ ಕೆಂಪುಚೌಕದಲ್ಲಿ ತಮ್ಮ ವಿಜಯ ಎತ್ತಿ ಹಿಡಿದು ರಷ್ಯದ ಅರಸೊತ್ತಿಗೆಯ ಮೇಲೆ ಶೋಷಿತರ ಪರವಾಗಿ ಜಯ ಸಾಧಿಸಿದ ದಿನ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಕಮ್ಯುನಿಸ್ಟ್ ಒಲವಿರುವ ಜನರಿಗೆ ಮೈ ನವಿರೇಳಿಸಿದ ಗಳಿಗೆಯದು. ಅಂತೆಯೇ ಬಂಡವಾಳಶಾಹಿ ಸಾಮ್ರಾಜ್ಯವಾದಿ ಶೋಷಕ ವರ್ಗಕ್ಕೆ ಮೈ ನಡುಕವುಂಟಾದ ಕ್ಷಣವೂ ಹೌದು.
Reviews
There are no reviews yet.