ಒಳ್ಳೆಯ ಸಾಹಿತ್ಯ ಎಂದೂ ಒಗಟಿನಂತೆ ಅರ್ಥದ ಕಡೆಗೆ ಒಲಿಯುವುದಿಲ್ಲ. ಅರ್ಥವನ್ನು ಅನುಭವವಾಗಿಸಲು ಪ್ರಯತ್ನಿಸುತ್ತದೆ. ಅಂತೆಯೇ ವಿವೇಕ ಕತೆ ಹೇಳುವಾಗ ಏನನ್ನೋ ಹೇಳಬೇಕೆಂದು ಹೊರಡುವುದಿಲ್ಲ. ಹೇಳುವ ಕ್ರಮದಲ್ಲೇ ಹೇಳಬೇಕಾದುದೂ ಇರುತ್ತದೆ ಎಂದು ಅವರು ಭಾವಿಸುತ್ತಾರೆ. ಆದ್ದರಿಂದಲೇ ವಿವೇಕರ ಕತೆಗಳು ರಂಜಿಸಿ ಒಲಿಸಿಕೊಳ್ಳುವ ಬಗೆಯವಲ್ಲ. ಓದಿ, ಅರಿತು, ಧ್ಯಾನಿಸಬೇಕಾದವು.

– ನರಹಳ್ಳಿ ಬಲಸುಬ್ರಹಣ್ಯ

(‘ಬದುಕಿನ ಅರ್ಥವಂತಿಕೆ ಅನ್ವೇಷಿಸುವ ಹುಲಿ ಸವಾರಿ’ ಎಂಬ ಲೇಖನದಲ್ಲಿ)

ವಿವೇಕ ಶಾನಭಾಗರ ‘ಹುಲಿ ಸವಾರಿ’ ಇಂದು ನಾವು ಅನುಭವಿಸುತ್ತಿರುವ ಅವಸ್ಥೆಗೆ ಕನ್ನಡಿ ಹಿಡಿದು, ಅದರ ನಯವಂಚನೆ, ತಂತ್ರಗಾರಿಕೆ, ಬಿಗಿ ಹಿಡಿತಗಳ ಬಗೆಗೆ ವಿಶಿಷ್ಟ ಒಳನೋಟಗಳನ್ನು ನೀಡುವ ಮೂಲಕ ಮುಖ್ಯವಾಗುತ್ತದೆ.

– ಗಿರಡ್ಡಿ ಗೋವಿಂದರಾಜ

(‘ಕನ್ನಡದ ಹತ್ತು ಅತ್ಯುತ್ತಮ ಸಣ್ಣ ಕತೆಗಳು’ ಎಂಬ ಲೇಖನದಲ್ಲಿ)

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.