Ebook

ಹಾಸ್ಯ ರಂಗೋಲಿ

Author: Malati Mudakavi

Original price was: $3.00.Current price is: $1.80.

ಇದೊಂದು ಹಾಸ್ಯ ಲೇಖನಗಳ ಸಂಗ್ರಹ  ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, “ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ” ಎಂದು ಹೇಳುತ್ತಾರೆ.

ಜೀವನದಾಗ ಒಮ್ಮೆಯೂ ನಗದವನಿಗೆ ಸ್ವರ್ಗ ಸಿಗಲಾರದು” ಎಂದು ಹಿರಿಯರು ಹೇಳುವ ಮಾತು ಸತ್ಯಸ್ಯ ಸತ್ಯ. ನಿತ್ಯದ ಬೇಗುದಿಯನ್ನು ಮರೆತು ಜೀವನದ ನಿರಾಳವಾದ ಮುನ್ನಡೆಗೆ ಹಾಸ್ಯವೆಂಬ ಈ ಗುಳಿಗೆ ಅಗತ್ಯ ಹಾಗೂ ಅನಿವಾರ್ಯ. ಬಿಗಿದ ತುಟಿಗಳನ್ನು ಅರಳಿಸುವ ಈ ನಗು ಎನ್ನುವುದು ಸಂತೃಪ್ತಿಯ ಸಂಕೇತ. ಬದುಕಿನ ವ್ಯಥೆಯನ್ನು ಮರೆಯಲು ನಗು ಸುಲಭವಾದ ಸಾಧನ. ನೋವನ್ನು ಕೂಡ ನಲಿವಾಗಿಸುವ, ಬಂದ ಕಷ್ಟಗಳನ್ನು ನಗುನಗುತ್ತ ಸಹಿಸುವಂತೆ ಮಾಡುವ ಮಾಂತ್ರಿಕ ಸ್ಪರ್ಶ ಈ ನಗುವಿಗಿದೆ. ಅದಕ್ಕೇ ಮನದ ಕೊಳೆ ತೊಳೆದು ಚೈತನ್ಯ ತುಂಬಲು ಮನದುಂಬಿ, ಮನಸಾರೆ ನಗಬೇಕು. ಇದರಲ್ಲಿಯೇ ಬದುಕಿನ ಸಾರ್ಥಕತೆ.

ನಗೆಯ ಬಗೆಗಳು ಹಲವು.. ಮೆಲುನಗೆ, ಮುಗುಳನ್ನಗೆ, ಮುಗ್ಧನಗೆ, ಬಿಚ್ಚುನಗೆ, ಹುಚ್ಚುನಗೆ, ಹುಚ್ಚುಚ್ಚಾರ ನಗೆ, ದೇಶಾವರಿ ನಗೆ, ವ್ಯಂಗ್ಯನಗೆ, ಹೊಗೆಯ ನಗೆ, ಅಟ್ಟಹಾಸದ ನಗೆ ಎಂದು. ನಗೆಯೆಂಬುದು ಒಂದು ಸಾಂಸರ್ಗಿಕ ರೋಗದಂತೆ ಕೆಲಸ ಮಾಡುತ್ತದೆ.

Additional information

Category

Author

Publisher

Pages

264

Year Published

2020

Language

Kannada

ISBN

978-81-947308-0-4

Book Format

Ebook

Reviews

There are no reviews yet.

Only logged in customers who have purchased this product may leave a review.