ಹರಿದಾಸರ ೧೦೦೦೦ ಹಾಡುಗಳು
ಸಂಪಾದಕರು
ಪಾರ್ಥಸಾರಥಿವಿಠಲದಾಸರು
(ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ)
ಸಜ್ಜನರಪಾಲಿಗೆ ಮಂಗಳದ ಮುಂಬೆಳಕು ಹರಿದಾಸಸಾಹಿತ್ಯ. ದಾಸರ ಪದಗಳಲ್ಲಿ ಅನಂತ ಚೈತನ್ಯವಿದೆ. ಆಧ್ಯಾತ್ಮನಿಧಿಯ ಅನಾವರಣವೇ ದಾಸಸಾಹಿತ್ಯ. ಭಕ್ತರ ಪಾಲಿಗೆ ಗಾನಾಮೃತದ ಅನುಭವ ದಾಸರ ಹಾಡುಗಳಿಂದ ಆಗುತ್ತದೆ. ಆ ತನ್ಮಯತೆಯಲ್ಲಿ ಭಗವಂತನ ದರ್ಶನವೇ ಆಗುತ್ತದೆ. ದಾಸರ ಪದಪದ್ಯಗಳೆಂದರೆ ಕತ್ತಲ ಬಾಳಿಗೆ ಬೆಳಕು ಬೆಳದಿಂಗಳಂತೆ, ವಿಸ್ಮೃತಿಯ ಬದುಕಿಗೆ ಸಂಜೀವಿನೀ ಶಕ್ತಿಯಂತೆ. ಹರಿದಾಸರ ಧರ್ಮಶ್ರದ್ಧೆ, ತತ್ವನಿಷ್ಠೆ, ಪರಮಾತ್ಮನನ್ನು ಕಾಣುವ ಹಂಬಲ ಅನನ್ಯ, ಅದಕ್ಕೆ ಭಾಷೆಯ ರೂಪಕೊಟ್ಟು ಹಾಡಾಗಿ ಹರಿಯಬಿಟ್ಟ ದಾಸರು ಸನ್ಮಾರ್ಗ ಸಾಧನೆಗೆ ಸ್ಫೂರ್ತಿಮೂರ್ತಿಗಳಾದರು. ಸಮರ್ಪಣೆಯ ಬದುಕಿಗೆ ಪ್ರೇರಣ ಶಕ್ತಿಗಳಾದರು.
ಇಂತಹ ೧೦೦೦೦ ದಾಸರ ಪದಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ.
Reviews
There are no reviews yet.