ಕನ್ನಡ ಸಂಸ್ಕೃತಿಯ ಸಾಕಾರಮೂರ್ತಿ ಡಾ|| ರಾಜ್‌ಕುಮಾರ್

ಮುತ್ತಿನ ಕಥೆಯ ಮೊದಲೊಂದು ಮಾತು :

ಜೇನಿನ ಹೊಳೆಯೋ, ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ
ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ… ಆಹಾ !

– ಕನ್ನಡ ಸಿರಿನುಡಿಯ ಸೊಬಗು, ಸೊಗಡು, ಸೊಗಸುಗಳನ್ನೆಲ್ಲ ಸುಂದರವಾಗಿ ಸೆರೆ ಹಿಡಿದಿಟ್ಟಿರುವ ಹಾಡು ಇದು. ಅಂತಹ ಗೀತೆ – ಮಾತುಗಳನ್ನು ಅಷ್ಟೇ ಸುಮಧುರವಾಗಿ ಉಲಿಯುತ್ತಿದ್ದ ನಾಲಿಗೆ ಆ ‘ಗಾನಗಂಧರ್ವ’ನದು. ಅಪ್ರತಿಮ ನಟನೆ-ನರ್ತನ ಕೌಶಲ್ಯದಿಂದಲೂ ಕನ್ನಡ ಜನಕೋಟಿಯ ಹೃದಯಕ್ಕೇ ಲಗ್ಗೆ ಹಾಕಿದ್ದ ‘ನಟಸಾರ್ವಭೌಮ’ನೂ ಆತನೇ. ಈ ಕಲಾವಿದ ನುಡಿದರೆ-ಗುನುಗಿದರೆ ಸಾಕು, ಅದು ಮುತ್ತಿನ ಮಾಲೆ-ಸ್ಫಟಿಕದ ಶಲಾಕೆ-ಮಾಣಿಕ್ಯದ ದೀಪ್ತಿಯ ಹಾಗೆ ಸ್ಫುಟವೂ, ಸುಶ್ರಾವ್ಯವೂ ಆಗಿ ಆಲಿಸಿ-ನಲಿದ ಜನ ಮೆಚ್ಚಿ ಅಹುದಹುದೆನ್ನುತ್ತಿತ್ತು, ತಲೆದೂಗಿ ಅಭಿನಂದಿಸುತ್ತಿತ್ತು, ತಲೆಬಾಗಿ ಅಭಿವಂದಿಸುತ್ತಿತ್ತು.

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ (೧೯೨೯-೨೦೦೬) ನಮಗೆಲ್ಲ ರಾಜ್‌ಕುಮಾರ್ ಎಂದು ಪರಿಚಿತರು. ಅವರ ಸಮಕಾಲೀನ ಅಭಿಮಾನಿಗಳಿಗೆ ಅವರು ರಾಜಣ್ಣ ! ಉಳಿದವರಿಗೆ ಅಣ್ಣಾವ್ರು ! ೨೨೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ‘ನಟ ಸಾರ್ವಭೌಮ’ರು ! ಭಾರತೀಯ ಚಲನಚಿತ್ರ ರಂಗವು ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಘನ ಸರ್ಕಾರವು ಪದ್ಮಭೂಷಣ ನೀಡಿ ಸನ್ಮಾನಿಸಿದೆ. ರಾಜ್ಯ ಸರ್ಕಾರವು ‘ಭಾರತರತ್ನ’ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕನ್ನಡಕ್ಕೆ ಮತ್ತೊಂದು ಹೆಸರು ರಾಜ್‌ಕುಮಾರ್ ! ಅವರಿಗೆ ಸಂದಷ್ಟು ಪ್ರಶಸ್ತಿಗಳು, ಬಿರುದುಗಳು ಸನ್ಮಾನಗಳು ಯಾವ ಕನ್ನಡ ನಟನಿಗೂ ದೊರೆತಿಲ್ಲ

Additional information

Category

Author

Publisher

Book Format

Ebook

Pages

48

Language

Kannada

Reviews

There are no reviews yet.

Only logged in customers who have purchased this product may leave a review.