ದೇವಿಪ್ರಸಾದ್ ಚಟ್ಟೋಪಾಧ್ಯಾಯ (೧೯೧೮-೧೯೯೩) ಭಾರತದ ಪ್ರಮುಖ ಮಾರ್ಕ್ಸ್‌ವಾದಿ ದಾರ್ಶನಿಕ, ಮಾನವತಾವಾದಿ ಹಾಗೂ ವೈಜ್ಞಾನಿಕ ಚಿಂತಕ. ದೇವಿಪ್ರಸಾದರು ಅವಿಭಜಿತ ಬಂಗಾಳದಲ್ಲಿ ಹುಟ್ಟಿದರು. ಇವರ ತಂದೆ ಬಸಂತಕುಮಾರ ಚಟ್ಟೋಪಾಧ್ಯಾಯರವರು ರಾಷ್ಟ್ರೀಯವಾದಿ ಹಾಗೂ ಪ್ರಬಲ ಹಿಂದುತ್ವ ಪ್ರತಿಪಾದಕ. ಆದರೆ ಉತ್ತಮ ಮಾನವತಾವಾದಿಯಾಗಿದ್ದರು. ಬಂಗಾಳದ ವಿಭಜನೆಯ ಕಾಲದಲ್ಲಿ ಮುಸ್ಲಿಮ್ ಕುಟುಂಬಕ್ಕೆ ತಮ್ಮ ಮನೆಯಲ್ಲಿ ಆಶ್ರಯವನ್ನು ನೀಡಿದ್ದರು. ದೇವಿಪ್ರಸಾದರಿಗೆ ಹಿಂದುತ್ವದಲ್ಲಿ ನಂಬಿಕೆಯಿರಲಿಲ್ಲ. ಹಾಗಾಗಿ ತಂದೆ ಮತ್ತು ಮಗನ ನಡುವೆ ಬಿರುಸಿನ ಚರ್ಚೆಗಳು ನಡೆಯುತ್ತಿದ್ದವು. ಆದರೆ ಆ ಚರ್ಚೆಗಳು ಎಂದೂ ವೈಮನಸ್ಯಕ್ಕೆ ಎಡೆ ಕೊಡುತ್ತಿರಲಿಲ್ಲ. ಇಬ್ಬರೂ ಪರಸ್ಪರರನ್ನು ಗೌರವ ಆದರಗಳಿಂದ ಕಾಣುತ್ತಿದ್ದರು.

ದೇವಿಪ್ರಸಾದರು ತಮ್ಮ ತತ್ತ್ವಶಾಸ್ತ್ರದ ಅಧ್ಯಯನದ ಜೊತೆಗೆ ವಿಜ್ಞಾನಕ್ಕೆ ಹಾಗೂ ವೈಜ್ಞಾನಿಕ ಚಿಂತನೆಗೆ ಆದ್ಯತೆಯನ್ನು ನೀಡಿದರು. ಅದರಲ್ಲೂ ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಅಪಾರ ಕುತೂಹಲವನ್ನು ಬೆಳೆಸಿಕೊಂಡು, ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳೆದುಬಂದ ಬಗ್ಗೆ ವಿಚಾರವನ್ನು ಮಾಡಿದರು. ೧೯೨೧ರಲ್ಲಿ ಸಿಂಧು-ಸರಸ್ವತಿ ಸಂಸ್ಕೃತಿಯನ್ನು ಕಂಡುಹಿಡಿದಿದ್ದ ಕಾರಣ, ಭಾರತೀಯ ವಿಜ್ಞಾನವನ್ನು ವೇದಗಳಲ್ಲಿ ಹುಡುಕಿದ ಹಾಗೆ ಸಿಂಧು-ಸರಸ್ವತಿ ಸಂಸ್ಕೃತಿಯಲ್ಲೂ ಹುಡುಕಿದರು. ಅಕ್ಷರ ಮತ್ತು ಬರಹಗಳು ತಿಳಿಯದೇ ಇದ್ದ ಕಾಲದಲ್ಲಿ, ಪ್ರಾಚೀನ ಭಾರತೀಯರು ಋಗ್ವೇದ ಸೂಕ್ತಗಳನ್ನು ಹಾಗೂ ಋಕ್ಕುಗಳನ್ನು ಸ್ಪಷ್ಟವಾಗಿ ಉಚ್ಚರಿಸಲು ಹಾಗೂ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಸ್ವರವಿಜ್ಞಾನ, ಛಂದಃಶಾಸ್ತ್ರ, ಭಾಷಾಶಾಸ್ತ್ರಗಳನ್ನು ಆ ದಿನಗಳಲ್ಲಿಯೇ ರೂಪಿಸಿ, ಅದನ್ನು ಕರಾರುವಾಕ್ಕಾಗಿ ಜಾರಿಗೆ ತಂದದ್ದನ್ನು ಗುರುತಿಸಿದರು. ಋಗ್ವೇದದಲ್ಲಿ ದೇವ ವೈದ್ಯರಾದ ಅಶ್ವಿನಿ ದೇವತೆಗಳಿಗೆ ಉನ್ನತ ಸ್ಥಾನವಿದೆ. ಇವರು ಯಜುರ್ವೇದದ ಕಾಲದ ಹೊತ್ತಿಗೆ, ಅತ್ಯಂತ ನೀಚ ಸ್ಥಾನವನ್ನು ತಲುಪುತ್ತಾರೆ. ಹವಿಸ್ಸಿನಲ್ಲಿ ಇವರಿಗೆ ಭಾಗವಿಲ್ಲ. ಏಕೆಂದರೆ ಇವರು ‘ಎಲ್ಲ ಜಾತಿಯ ಜನರನ್ನು ಮುಟ್ಟುತ್ತಾರೆ’ ಹಾಗೂ ‘ರಕ್ತ ಮಲ ಮೂತ್ರ ಮಾಂಸಾದಿಗಳ ಸಂಪರ್ಕಕ್ಕೆ ಬರುತ್ತಾರೆ. ಹಾಗಾಗಿ ಇವರು ಕಲುಷಿತರು. ಇವರು ಪ್ರಾಯಶ್ಚಿತ್ತ ಮಾಡಿಕೊಂಡರೆ ಹವಿಸ್ಸನ್ನು ಪಡೆಯಬಹುದು’ ಎನ್ನುವ ವಿಚಾರವು ವೈದ್ಯವಿಜ್ಞಾನ ಹಾಗೂ ವೈದ್ಯರ ನೇರ ನಿಂದೆಯಾಗಿದೆ. ವೈದ್ಯರು ಅಪವಿತ್ರರು, ವೈದ್ಯಕೀಯದಿಂದ ಬದುಕನ್ನು ನಡೆಸುವವರು ಬ್ರಾಹ್ಮಣರಾಗಲು ಸಾಧ್ಯವಿಲ್ಲ, ನೀಚ ಜಾತಿಯವರು ಮಾತ್ರ ವೈದ್ಯರಾಗಬಹುದು ಎನ್ನುವ ಧೋರಣೆ ವರ್ಣವ್ಯವಸ್ಥೆಯ ಭೇದಭಾವದ ಪ್ರತೀಕವಾಗಿದೆ.

Additional information

Category

Author

Publisher

Book Format

Ebook

Pages

48

Language

Kannada

Reviews

There are no reviews yet.

Only logged in customers who have purchased this product may leave a review.