Ebook

ಬಿಸಿಲ ಸೀಮೆಯ ಜಾನಪದ ಸಿರಿ

Original price was: $1.44.Current price is: $0.86.

ಲಕ್ಷ್ಮಣ ಬದಾಮಿ ಅವರ ಈ ಪುಸ್ತಕವು ಪದ, ಕಥೆ, ಒಡಪು, ಒಗಟು ಮತ್ತು ನುಡಿಗಟ್ಟುಗಳು ಮುಂತಾದ ಮೌಖಿಕ ರೂಪಗಳಿಂದ ಕೂಡಿದ ಚಂದದ ಪುಸ್ತಕವಾಗಿದೆ.

 

ಬಿಸಿಲ ಸೀಮೆಯ ಜಾನಪದ ಸಿರಿ’ ಎಂಬುದು ಪದ, ಕಥೆ, ಒಡಪು, ಒಗಟು ಮತ್ತು ನುಡಿಗಟ್ಟುಗಳು ಮುಂತಾದ ಮೌಖಿಕ ರೂಪಗಳಿಂದ ಕೂಡಿದ ಚಂದದ ಪುಸ್ತಕ. ಇದನ್ನು ಸಂಗ್ರಹಿಸಿದವರು ಕುರುಕುಂದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು.ಈ ಪುಸ್ತಕವನ್ನು ರೂಪಿಸಿದ ಮನಸ್ಸುಗಳು ಸೃಜನ ಚೇತನಗಳು. ಇವು ವಿದ್ಯಾರ್ಥಿಗಳ ಸ್ವರಚನೆಗಳು ಆಗಿರದೇ ಇರಬಹುದು. ಆದರೆ ಜನಪದರು ಆಡುವ ರೂಪಗಳನ್ನು ಕೇಳುವ, ಬರೆದುಕೊಳ್ಳುವ ಸಂಗ್ರಹಿಸುವ ಉಮೇದಿ ಇದೆಯಲ್ಲ ಅದು ಸಣ್ಣದಲ್ಲ. ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸುವ ಮನಸ್ಸು ಸೃಜನಶೀಲವಾದದ್ದು ಇದ್ದರೆ ಮಾತ್ರ ಇಂಥ ಸಂಪಾದನೆಗಳು ರೂಪುಗೊಳ್ಳುತ್ತವೆ.
ಮನುಷ್ಯ ಸಮುದಾಯಗಳು ತಮ್ಮ ಸುಖವನ್ನು, ದುಃಖವನ್ನು ದೂರನಿಂತು ಗ್ರಹಿಸಬಲ್ಲವರಾಗಿದ್ದರು. ಬದುಕಿನೊಳಗೆ ಸಾಹಿತ್ಯವಿದ್ದು, ಅದನ್ನೇ ಬದುಕಿ ಬಾಳುವ ಸಮುದಾಯಗಳು ಅದನ್ನು `ಸಾಹಿತ್ಯ’ವೆಂದು
ಕರೆಯುವ ಜ್ಞಾನವಿರದಿದ್ದರೂ, ತಮ್ಮ ಭಾವನೆಗಳನ್ನು ಹಾಡು, ಕಥೆ, ಒಡಪು, ಒಗಟು, ಗಾದೆ, ನುಡಿಗಟ್ಟುಗಳ ಮೂಲಕ ಅಭಿವ್ಯಕ್ತಿಸುವ ಸಹಜ ಗುಣವಿದ್ದೇ ಇತ್ತು. ಇದು ಇದ್ದಿದ್ದರಿಂದ ಮನುಷ್ಯ ಸಮುದಾಯಗಳು ಜೀವಂತಿಕೆಯಿಂದ ಇರಲು ಸಾಧ್ಯವಾಗುತ್ತಿತ್ತು. ಸಾಹಿತ್ಯ, ಅದನ್ನು ಅಭಿವ್ಯಕ್ತಿಸುವಾಗ ಒಳಗೊಳ್ಳುವ ಸಂಗೀತ ಮತ್ತು ವಾದ್ಯ ಪರಿಕರಗಳು ತಾನೇ ತಾನಾಗಿ ಹುಟ್ಟಿಕೊಂಡೇ ಬಂದವು.

ಗ್ರಾಮಾಂತರ ಪ್ರದೇಶದಲ್ಲಿರುವ ಮಹಿಳೆಯರು-ಪುರುಷರು ಅಕ್ಷರ ಕಲಿಯದೇ ಕಾವ್ಯ ಕಟ್ಟುವ ಕಲೆಯಲ್ಲಿ ಪರಿಣಿತರಾಗಿವವರು. ತಮ್ಮ ನಿತ್ಯ ಬದುಕಿನಲ್ಲಿ ಅನುಭವಕ್ಕೆ ದಕ್ಕುವುದನ್ನು ತಮ್ಮದೇ ನುಡಿಯಲ್ಲಿ ಹಾಡುತ್ತಾರೆ. ಈ ಜನಪದರ ಸಾಹಿತ್ಯ ಸೃಷ್ಟಿ ಇನ್ನೂ ಜೀವಂತವಾಗಿದೆ ಎಂಬುದು ಇಲ್ಲಿ ಕಾಣುತ್ತದೆ. ನಮ್ಮ ಕನ್ನಡ ಕಲಿತ ಮಕ್ಕಳು ಜನಪದರು ಹಾಡುವ ಹಾಡು, ಹೇಳುವ ಕಥೆ, ಒಗಟು, ಒಡಪು ಮತ್ತು ನುಡಿಗಟ್ಟುಗಳು ಎಲ್ಲವನ್ನು ಕುಳಿತು ಕೇಳಿ, ಸಂಗ್ರಹ ಮಾಡಿರುವುದು ಅವರ ಸೃಜನಶೀಲತೆಗೆ ಸಾಕ್ಷಿ.

Additional information

Category

Language

Kannada

Pages

176

Book Format

Ebook

Year Published

2018

Reviews

There are no reviews yet.

Only logged in customers who have purchased this product may leave a review.