ಅನುವಾದದ ಮಹತ್ವದ ಬಗ್ಗೆ ಅನೇಕರಿಗೆ ಏನೂ ತಿಳಿದಿಲ್ಲ. ಅವರು ತಮ್ಮದೇ ಭಾಷೆಯಲ್ಲಿ ಲಭ್ಯವಿರುವ ಸ್ವತಂತ್ರ ಕೃತಿಗಳೇ ಉತ್ಕೃಷ್ಟವಾದವು ಎಂದು ತಿಳಿದುಕೊಳ್ಳುತ್ತಾರೆ. ಅನುವಾದ ಯಾಕೆ ಮಾಡುತ್ತಾರೆ ಮತ್ತು ಆ ಕೆಲಸದ ಹಿಂದೆ ಅದೆಷ್ಟು ಪರಿಶ್ರಮವಿದೆ, ಅನುವಾದಕರಲ್ಲಿರಬೇಕಾದ ಪ್ರತಿಭೆ-ಸೃಜನಶೀಲತೆಗಳೇನು ಎಂಬುದರ ಬಗ್ಗೆ ಅವರಿಗೆ ಏನೂ ಗೊತ್ತಿರುವುದಿಲ್ಲ. ಆಕಸ್ಮಿಕವಾಗಿ ಒಂದಕ್ಕಿಂತ ಹೆಚ್ಚು ಭಾಷೆಗಳು ತಿಳಿದಿದ್ದಲ್ಲಿ ಯಾರು ಬೇಕಾದರೂ ಅತಿ ಸುಲಭವಾಗಿ ಅನುವಾದ ಮಾಡ ಬಹುದು ಎಂದು ಅವರು ತಿಳಿಯುತ್ತಾರೆ. ತಾವು ಓದುವ ಸಾಹಿತ್ಯವೇ ಸ್ವಯಂಪೂರ್ಣವೆಂದು ತಿಳಿಯುವ ಬಾವಿಯೊಳಗಿನ ಕಪ್ಪಗೆಳಂತಿರುವ ಅವರು ತಿಳಿಯಬೇಕಾದ ಒಂದು ವಿಚಾರವೆಂದರೆ ಈ ಜಗತ್ತಿನಲ್ಲಿರುವ ಸಾವಿರಾರು ಭಾಷೆಗಳಲ್ಲಿ ವೈವಿಧ್ಯಮಯ ಸಾಹಿತ್ಯಗಳು ರಚಿತವಾಗುತ್ತಲೇ ಇರುತ್ತವೆ ಮತ್ತು ಅವುಗಳನ್ನು ನಾವು ಹೆಚ್ಚು ಹೆಚ್ಚು ಓದಿದಷ್ಟು ನಮ್ಮ ಅನುಭವ ವಿಸ್ತಾರವಾಗುತ್ತಲೇ ಇರುತ್ತದೆ. ಸಾಹಿತ್ಯವನ್ನು ಪ್ರೀತಿಸುವವರು ಅನುವಾದವನ್ನು ನಿರಾಕರಿಸುವಂತಿಲ್ಲ.
ಇಲ್ಲಿ ನಾನು ಪರಿಚಯಿಸಿದ ಕೃತಿಗಳು ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದ ಕೃತಿಗಳು. ಅವುಗಳ ಆಳವಾದ ವಿಮರ್ಶೆ ಇರಲ್ಲಿಲ್ಲ. ಕೃತಿಯ ವಸ್ತು, ವಿನ್ಯಾಸ, ಕಥಾ ಹಂದರ, ನಿರೂಪಣಾ ಶೈಲಿ, ಭಾಷೆಯ ಬಳಕೆ ಮೊದಲಾದ ಸ್ಥೂಲ ವಿವರಗಳೊಂದಿಗೆ ಅದರ ಪ್ರಕಾಶನಕ್ಕೆ ಸಂಬಂಧ ಪಟ್ಟ ವಿವರಗಳನ್ನೂ ನೀಡಿದ್ದೇನೆ. ಓದುಗರಿಗೆ ಕೃತಿಯ ಬಗ್ಗೆ ಆಸಕ್ತಿ ಹುಟ್ಟಿದಲ್ಲಿ ಅದನ್ನು ತರಿಸಿ ಓದಲು ಪ್ರಾಯಶಃ ಇದರಿಂದ ಅನುಕೂಲವಾಗಬಹುದು ಎಂದು ನಂಬಿದ್ದೇನೆ.

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.