ಶ್ರೀ ಗಿರೀಶ ಕಾರ್ನಾಡರು ಇಪ್ಪತ್ತೊಂದನೆಯ ಶತಮಾನದ ಪಟ್ಟಣದ ಬದುಕನ್ನು ಎಲ್ಲ ಸ್ತರಗಳಲ್ಲಿ ಹಿಡಿದು ಕಣ್ಣೆದುರು ನಿಲ್ಲಿಸಿದ್ದಾರೆ. ಅವರ ಈ ನಾಟಕ ಸಮಾಕಾಲೀನತೆಯ ಹೊಸ ಸಂವೇದನೆಯನ್ನು ಪರಸ್ಪರ ಅವಲಂಬಿ ಜೀವನದ ಹಿನ್ನೆಲೆಯಲ್ಲಿ ತಮ್ಮ ಜೀವನಗಳನ್ನು ಮೇಲಕ್ಕೆತ್ತರಿಸುವ ಪ್ರಯತ್ನಗಳನ್ನು ಬಿಂಬಿಸುತ್ತದೆ. ಪ್ರಾಮಾಣಿಕತೆಯ ಮುಖವಾಡದಲ್ಲಿ ಹಳ್ಳಿಯಿಂದ ಬಂದವರು ಹೇಗೆ ಪಟ್ಟಣದ ದ್ವಿಮುಖ ಜೀವನಕ್ಕೆ ಹೊಂದಿಕೊಳ್ಳುವದರ ಜೊತೆಗೆ ಅವರನ್ನು ತೋರಿಸುವ ಪರಿಣತಿಯನ್ನು ಹೊಂದಬಲ್ಲರು ಎಂಬುದಕ್ಕೆ ಈ ನಾಟಕದಲ್ಲಿಯ ಪಾತ್ರಗಳೇ ಸಾಕ್ಷಿ. ಈ ನಾಟಕದ ಮೂಲಕ ಶ್ರೀ ಗಿರೀಶರು ಇಂದಿನ ನಗರವಾಸಿಗಳ ಪಾಡನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಪರಸ್ಪರ ಅವಲಂಬನೆಯ ಜೋತೆಗೇ ಪರಸ್ಪರ ನಂಬಿಕೆ ಅಪನಂಬಿಕೆಗಳನ್ನು ಕಣ್ಣಮುಚ್ಚಾಲೆಯಂತೆ ತೋರಿಸುವ ಈ ನಾಟಕ ವಾಸ್ತವ ಜಗತ್ತಿನ ಕನ್ನಡಿಯಂತಿದೆ.
-40%
Ebook
ಬೆಂದ ಕಾಳು ಆನ್ ಟೋಸ್ಟ್
Author: Girish Karnad
Original price was: ₹63.00.₹38.00Current price is: ₹38.00.
ಬೆಂದ ಕಾಳು ಆನ್ ಟೋಸ್ಟ್
ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿ ತಪ್ಪಿ, ರಾತ್ರಿಯಿಡೀ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬ ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ‘ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ‘ಬೆಂಗಳೂರು’ ಆಯಿತು.
About this Ebook
Information
Additional information
Category | |
---|---|
Author | |
Publisher | |
Language | Kannada |
ISBN | 978-93-81822-55-5 |
Book Format | Ebook |
Year Published | 2015 |
Reviews
Only logged in customers who have purchased this product may leave a review.
Reviews
There are no reviews yet.