ಬ್ರಿಟಿಷರು ವ್ಯಾಪಾರಿಗಳಾಗಿ ಭಾರತಕ್ಕೆ ಬಂದರು. ಇಡೀ ದೇಶವನ್ನು ೧೫೦ ವರ್ಷಗಳ ಕಾಲ ಆಳಿದರು. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಜಗಳ ಹೆಚ್ಚಿದರು, ಭಾರತೀಯ ಸ್ವಾತಂತ್ರ್ಯ ಹೋರಾಟ ತೀವ್ರವಾದಾಗ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ಹಾಗಾಯಿತು.
ಬಿಟ್ಟು ಹೋಗುವಾಗ ಅವರು ಅಖಂಡ ಭಾರತವನ್ನು ಇಬ್ಭಾಗ ಮಾಡಿ ಹೋದರು. ಭಾರತ ಮತ್ತು ಪಾಕಿಸ್ತಾನ ಎಂಬುವೇ ಆ ಎರಡು ದೇಶಗಳು ದೇಶದ ವಿಭಜನೆಯಾಗುವಾಗ ಹಲವರು ಮನೆ ಮಾರುಗಳನ್ನು ಕಳೆದುಕೊಂಡು ಹುಚ್ಚರಾದರು. ಕಳ್ಳತನ ಸುಲಿಗೆಗಳಾದವು. ಹಿಂದು -ಸಿಖ್ಖರು ಒಂದೆಡೆಯಾದರೆ- ಮುಸಲ್ಮಾನರು ಇನ್ನೊಂದೆಡೆಯಾಗಿ ಹೊಡೆದಾಡಿಕೊಂಡರು. ಇದನ್ನೆಲ್ಲ ಭೀಷ್ಮ ಸಾಹನಿ ಸ್ವತಃ ತಮ್ಮ ಕಣ್ಣುಗಳಿಂದ ನೋಡಿದರು.
Reviews
There are no reviews yet.